ಪರೀಕ್ಷೆಗೂ ಮುನ್ನವೇ ವಾಟ್ಸಾಪ್ಗಳಲ್ಲಿ ಹರಿದಾಡಿದ SSLC ಪ್ರಶ್ನೆ ಪತ್ರಿಕೆ
ಏನೋ ಮಾಡಲು ಹೋಗಿ ಮತ್ತೆನನ್ನೋ ಮಾಡಿಕೊಂಡಿತಾ ಶಿಕ್ಷಣ ಇಲಾಖೆ?
ತನಿಖೆ ನಡೆಸುತ್ತೇವೆ ಎಂದಷ್ಟೇ ಹೇಳಿ, ಕೈತೊಳಿದುಕೊಳ್ಳುತ್ತಿರವುದು ಏಕೆ?
ಬೆಂಗಳೂರು: ಏನೋ ಮಾಡಲು ಹೋಗಿ ಇನ್ನೇನೋ ಅಗೋಯ್ತು. ಬಹುಶಃ ಈ ಮಾತು ಶಿಕ್ಷಣ ಇಲಾಖೆಗೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ ಅಂದ್ರೆ ತಪ್ಪೇನಾಗೋದಿಲ್ಲ. ಕಲಿಕಾ ಗುಣಮಟ್ಟ ಹೆಸ್ರಲ್ಲಿ ಕಠಿಣ ಪರೀಕ್ಷೆ ಹೆಸರಲ್ಲಿ ಇಲಾಖೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಮಕ್ಕಳ ಮಿಸ್ಟೇಕ್ಸ್ಗಳನ್ನ ಕರೆಕ್ಷನ್ ಮಾಡಬೇಕಾಗಿರೋ ಶಿಕ್ಷಕರುಗಳೇ ಮೇಜರ್ ಮಿಸ್ಟೇಕ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದು ಎಕ್ಸಾಂ ಸೀಸನ್, ಮಕ್ಕಳೆಲ್ಲಾ ಆಟ ಬಿಟ್ಟು ಬುಕ್ ಹಿಡಿಯೋ ಕಾಲ. ಆದ್ರೆ, ಶಿಕ್ಷಣ ಇಲಾಖೆ ಮಾಡಿರೋ ಯಡವಟ್ಟಿಗೆ ಎಕ್ಸಾಂನ ಹಾಲ್ನಲ್ಲಿ ಬೆಲ್ ಆದ್ಮೇಲೆ ಮಕ್ಕಳ ಕೈ ಸೇರಬೇಕುರುವ ಪ್ರಶ್ನೆ ಪತ್ರಿಕೆಗಳೆಲ್ಲಾ ಸೋಶಿಯಲ್ ಮೀಡಿಯಾಗಳಲ್ಲೇ ಸಿಗ್ತಾ ಇವೆಯಂತೆ.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಕಮ್ಮಿ ಆಗಿದ್ದಕ್ಕೆ ಶಿಕ್ಷಣ ಇಲಾಖೆ ಟೀಕೆಗೆ ಗುರಿಯಾಗಿತ್ತು. ಹೀಗಾಗಿ, ಈ ವರ್ಷ SSLC ಫಲಿತಾಂಶ ಹೆಚ್ಚು ಮಾಡಲು ಶಿಕ್ಷಣ ಇಲಾಖೆ ನಾನಾ ಸರ್ಕಸ್ ಮಾಡ್ತಿದೆ. ಅದರ ಭಾಗವಾಗಿ ವಾರ್ಷಿಕ ಪರೀಕ್ಷೆ ತಯಾರಿ ಅಂತ ಇದೇ ಮೊಟ್ಟ ಮೊದಲ ಬಾರಿಗೆ KSEAB ಪ್ರಶ್ನೆ ಪತ್ರಿಕೆ ತಯಾರಿ ಮಾಡಿದ್ದು ಅದು ಈಗ ಲೀಕ್ ಆಗಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ನಾಗಮಂಗಲ ಗಲಭೆ ಕೇಸ್.. 55 ಆರೋಪಿಗಳಿಗೆ ಜಾಮೀನು ಮಂಜೂರು; ಬಿಡುಗಡೆ ಯಾವಾಗ?
ಸೆಪ್ಟಂಬರ್ 24ರಿಂದ ಅಕ್ಟೋಬರ್ 1ರವೆರೆಗೆ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ ನಡೆಸಲಾಗ್ತಿದೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮಧ್ಯ ವಾರ್ಷಿಕ ಪರೀಕ್ಷೆಗೆ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕ ತಯಾರಿಸಲಾಗ್ತಿತ್ತು. ಆದ್ರೆ, ಈ ವರ್ಷ ಅದಕ್ಕೆ ಬ್ರೇಕ್ ಹಾಕಲಾಗಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಏಕರೂಪ ಪ್ರಶ್ನೆ ಪತ್ರಿಕೆ ತರಲು ಆದೇಶಿಸಲಾಗಿತ್ತು. ಇದೇ ಈಗ ಪ್ರಶ್ನೆ ಪತ್ರಿಕೆ ಲೀಕ್ ಆಗಲು ಕಾರಣ ಆಗಿದೆ ಎನ್ನಲಾಗಿದೆ. ಮಂಡಳಿಯಿಂದ BEO ತಲುಪಿ ಅದು ಪ್ರಾಂಶುಪಾಲರಿಗೆ ತಲುಪುವ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Jr NTR ‘ದೇವರ’ ನೋಡಲು ರೊಚ್ಚಿಗೆದ್ದ ಅಭಿಮಾನಿಗಳು; ಕಟೌಟ್ಗೆ ಬೆಂಕಿ, ಲಾಠಿ ಚಾರ್ಚ್.. ವಿಡಿಯೋ
ಇನ್ನು, ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟೀಕೆ ಇದಕ್ಕೆ ಪುಷ್ಟಿ ಕೊಡುತ್ತಿದೆ. ಅತ್ತ, ಶಿಕ್ಷಣ ಇಲಾಖೆ ನಯಾ ರೂಲ್ ಕಷ್ಟ ಪಟ್ಟು ಓದುವ ವಿದ್ಯಾರ್ಥಿಗಳಿಗೆ ನ್ಯಾಯ ಸಿಗ್ತಿಲ್ಲ ಅಂತ ಖಾಸಗಿ ಶಾಲೆಗಳ ಒಕ್ಕೂಟ ಕೂಡ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯನ್ನ ಪ್ರಶ್ನೆ ಮಾಡಿದ್ರೆ ಕಮಿಟಿಯ ನಿರ್ದೇಶಕರಾದ ಗೋಪಾಲಕೃಷ್ಣ ತನಿಖೆ ಮಾಡುವ ಭರವಸೆ ಕೊಟ್ಟು ಜಾರಿಕೊಂಡಿದ್ದಾರೆ. ಯಾವುದೇ ಪ್ರಶ್ನೆ ಕೇಳಿದರೂ ಅವರಿಂದ ಬರುವ ಒಂದೇ ಉತ್ತರ ತನಿಖೆ ಮಾಡ್ತೀವಿ ಅಂತ. ಒಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೋ? ಅಥವಾ ಶಾಲಾ ಹಂತದಲ್ಲಿ ಆಗಿರುವ ಯಡವಟ್ಟೋ? ಆದರೆ ಇಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತಿರೋದು ಮಾತ್ರ ವಿದ್ಯಾರ್ಥಿಗಳಿಗೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ