Advertisment

ಇಂದು ಬಿರುಗಾಳಿ ಸಮೇತ ಮಳೆಯ ಮುನ್ಸೂಚನೆ! 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌.. ಬೇಗ ಮನೆ ಸೇರಿಕೊಳ್ಳಿ

author-image
AS Harshith
Updated On
ಇಂದು ಬಿರುಗಾಳಿ ಸಮೇತ ಮಳೆಯ ಮುನ್ಸೂಚನೆ! 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌.. ಬೇಗ ಮನೆ ಸೇರಿಕೊಳ್ಳಿ
Advertisment
  • ಮುಂದಿನ ನಾಲ್ಕು ದಿನಗಳ ಕಾಲ ಈ ಭಾಗದಲ್ಲಿ ಮಳೆ ಪಕ್ಕಾ
  • ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು.. ಪರದಾಡಿದ ಭಕ್ತರು
  • ಸೋರುತಿರುವ ಸರ್ಕಾರಿ ಬಸ್​.. ಹೆಲ್ಮೆಟ್​ ಧರಿಸಿದ ಪ್ರಯಾಣಿಕ

 ರಾಜ್ಯದಲ್ಲಿ ಮುಂಗಾರು ಆರ್ಭಟ ಮುಂದುವರೆದಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಇಂದು ಸಹ ಬಿರುಗಾಳಿ ಸಮೇತ ಮಳೆಯಾಗಿ ಮುನ್ಸೂಚನೆಯನ್ನ ಹವಮಾನ ಇಲಾಖೆ ಸೂಚನೆ ಕೊಟ್ಟಿದೆ.

Advertisment

ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ವ್ಯಾಪಕ ಮಳೆಯಾಗ್ತಿದೆ. ಹಳ್ಳ-ಕೊಳ್ಳಗಳಿಗೆ ಜೀವ ಕಳೆ ಬಂದಿದ್ದು, ತುಂಬಿ ಹರಿಯುತ್ತಿವೆ. ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಮಲೆನಾಡು ಸೇರಿ 17 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯಿದ್ದು ಯೆಲ್ಲೋ ಅಲರ್ಟ್‌ ನೀಡಲಾಗಿದೆ.

publive-image

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು

ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ಎಡಬಿಡದೆ ಮಳೆ ಸುರಿದೆ. ಸುಪ್ರಸಿದ್ಧ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ. ಮಳೆ ನೀರಿನಿಂದ ನೂರಾರು ಭಕ್ತರು ಪರದಾಡಿದ್ರು.
publive-image

ಕೋಲಾರದ ಶ್ರೀನಿವಾಸಪುರದಲ್ಲಿ‌ ಮಳೆ‌ ಸಾಕಷ್ಟು ಅವಾಂತರ

ಕೋಲಾರದ ಶ್ರೀನಿವಾಸಪುರದಲ್ಲಿ‌ ಮಳೆ‌ ಅವಾಂತರದಿಂದ ಚಿಂತಾಮಣಿ ರಸ್ತೆಯ ರೈಲ್ವೆ ಅಂಡರ್​ಪಾಸ್‌ನಲ್ಲಿ ನೀರು ನಿಂತಿತು. ಇದರಿಂದ ಸಾರ್ವಜನಿಕರು ಪ್ರಯಾಸ ಪಡುವಂತಾಯ್ತು.

Advertisment

publive-image

ಕೊಪ್ಪಳದಲ್ಲಿ ಗುಡುಗು ಸಿಡಿಲು ಸಮೇತ ಮಳೆ, ತೆಂಗಿನ ಮರಕ್ಕೆ ಬೆಂಕಿ

ಇತ್ತ, ಕೊಪ್ಪಳದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಹಾಲವರ್ತಿ ಗ್ರಾಮದ ದೇವಪ್ಪ ಮನೆ ಬಳಿಯ ತೆಂಗಿನ ಮರ ಹೊತ್ತಿ ಉರಿದಿದೆ.

publive-image

ಸಿಡಿಲು ಬಡಿದು ಕುರಿಗಾಯಿ ಯುವಕ ಸಾವು

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಿಡಿಲಿಗೆ ಕುರಿಗಾಯಿ ಬಾಲಕನ ಬಲಿ ಆಗಿದೆ. ಬಂಡೆಮ್ಮ ನಗರ ಗ್ರಾಮದ ಬಳಿ ಸಿಡಿಲು ಬಡಿದು ಯುವಕ ಯಲ್ಲಪ್ಪ ಕಿಲೀಕೈ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಬಹುದಿನಗಳ ಆಸೆ ನನಸು ಮಾಡಿಕೊಂಡ ರಾಮಾಚಾರಿ ಸೀರಿಯಲ್​ ನಟಿ ಮೌನ; ಏನದು?

publive-image

ಸರ್ಕಾರಿ ಬಸ್​ನಲ್ಲಿ ಹೆಲ್ಮಟ್ ಧರಿಸಿದ ಪ್ರಯಾಣಿಕ!

ಹಾವೇರಿ ಜಿಲ್ಲೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ರಾಣೇಬೆನ್ನೂರು ನೆಹರು ಮಾರ್ಕೆಟ್​ನಲ್ಲಿ ತರಕಾರಿ, ಸೊಪ್ಪು ನೀರಿನಲ್ಲಿ ತೇಲಿ ಹೋಗಿದೆ. ಇತ್ತ ಮಳೆಗೆ ಸರ್ಕಾರಿ ಬಸ್​ನ ಛಾವಣಿ ಸೋರಿದೆ. ಇದರಿಂದ ಪ್ರಯಾಣಿಕನೊಬ್ಬ ಹೆಲ್ಮಟ್ ಧರಿಸಿ ಪ್ರಯಾಣಿಸಿದ್ದಾನೆ.

Advertisment

ಇದನ್ನೂ ಓದಿ: ಕಾರಲ್ಲಿ ಹೋಗೋ ಮುನ್ನ ಎಚ್ಚರ! ಈ ರಾಶಿಯವ್ರಿಗೆ ಅಪಾಯ ಕಟ್ಟಿಟ್ಟ ಬುತ್ತಿ; ಇಲ್ಲಿದೆ ಇಂದಿನ ಭವಿಷ್ಯ

ಸಂಜೆಯಾಗ್ತಿದ್ದಂತೆ ತುಮಕೂರಿನಲ್ಲಿ ವರುಣನ ಆರ್ಭಟ!

ತುಮಕೂರು ಜಿಲ್ಲೆಯಾದ್ಯಂತ ಎಡೆಬಿಡದೇ ಮಳೆ ಆಗಿದೆ. ಅಂತರಸನಹಳ್ಳಿಯ ರಾಷ್ಟ್ರೀಯ ಹೆದ್ದಾರೆ 4ಕ್ಕೆ ಅಡ್ಡಲಾಗಿ ನಿರ್ಮಿಸಿರುವ ಅಂಡರ್ ಪಾಸ್ ಜಲಾವೃತ್ತವಾಗಿತ್ತು. ಪರಿಣಾಮ ಪ್ರಯಾಣಿಕರು ಸಂಕಷ್ಟ ಸನುಭವಿಸಿದ್ರು.

publive-image

ಕಾಫಿನಾಡು ಚಿಕ್ಕಮಗಳೂರಿನ ಬಯಲುಸೀಮೆಯಲ್ಲಿ ವರುಣ ಅಬ್ಬರಿಸಿದ್ದು, ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಅಜ್ಜಂಪುರ ತಾಲೂಕಿನಲ್ಲಿ ಮಳೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಯ್ತು. ಬಾಗಲಕೋಟೆ ಜಿಲ್ಲೆ ಬಾದಾಮಿಯ ಅಕ್ಕತಂಗಿಯರ ಫಾಲ್ಸ್​ಗೆ ಜೀವಕಳೆ ಬಂದಿದೆ. ಮೇಣ ಬಸದಿಯ ಸಮೀಪದ ಬೆಟ್ಟದಲ್ಲಿ ಮೈದುಂಬಿ ಹರಿಯುತ್ತಿದೆ. ಅತ್ತ ಬಿಸಿಲಿನ ಧಗೆಗೆ ಬೇಸತ್ತಿದ್ದ ದಾವಣಗೆರೆಯಲ್ಲೂ ವರುಣನ ದರ್ಶನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment