/newsfirstlive-kannada/media/post_attachments/wp-content/uploads/2024/06/BOMMAI-2.jpg)
ಕರ್ನಾಟಕದ 17 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದುಬೀಗಿದೆ. ಇದೀಗ ರಾಜ್ಯದಲ್ಲಿ ಗೆದ್ದಿರೋ ಕೇಸರಿ ಕಲಿಗಳ ಕಣ್ಣು ಕೇಂದ್ರದ ಸಚಿವ ಸ್ಥಾನದತ್ತ ನೆಟ್ಟಿದೆ. ಸತತವಾಗಿ ಪಾರ್ಲಿಮೆಂಟ್ ಮೆಟ್ಟಿಲು ಹತ್ತಿದವರು ಕ್ಯಾಬಿನೆಟ್ ಸೇರುವ ಕನಸು ಕಾಣ್ತಿದ್ದಾರೆ. ಇತ್ತ ಮೊದಲ ಬಾರಿ ಗೆದ್ದ ಕಮಲ ಸಂಸದರು ಹಿರಿತನದ ಆಧಾರದಲ್ಲಿ ಸಂಪುಟ ಸೇರಲು ಉತ್ಸುಕರಾಗಿದ್ದಾರೆ. ಯಾರಿಗೆ ಹೈ ಕಮಾಂಡ್ ಮಣೆ ಹಾಕುತ್ತೆ ಅನ್ನೋದೇ ಸದ್ಯಗ ಬಿಗ್ ಸೀಕ್ರೆಟ್.
ಇದನ್ನೂ ಓದಿ:ಮುಳುಗುತ್ತಿದ್ದ ಹಡಗಿಗೆ ಸಾರಥಿ ಆದ್ಮೇಲೆ ಹಣೆಬರಹ ಚೇಂಜ್.. ಕನ್ನಡಿಗ ಖರ್ಗೆ ಕಾಂಗ್ರೆಸ್ಗೆ ಬಲ ತುಂಬಿದ್ದೇಗೆ?
ನರೇಂದ್ರ ಮೋದಿ ಸಂಪುಟ ಸೇರಲು ಎಲ್ಲೆಲ್ಲೂ ಪೈಪೋಟಿ ಜೋರಾಗಿದೆ. ಮಿತ್ರ ಪಕ್ಷಗಳ ಡಿಮ್ಯಾಂಡ್‌ಗಳ ಮಧ್ಯೆ ಸ್ವಪಕ್ಷದ ನಾಯಕರ ಕಡೆಗೂ ಗಮನಹರಿಸಬೇಕಿದೆ. ಇದೀಗ ಕರ್ನಾಟಕದಲ್ಲಿ ಗೆದ್ದಿರೋ ಕೇಸರಿ ಕಲಿಗಳು ಸಚಿವ ಸ್ಥಾನಕ್ಕೆ ಟವೆಲ್ ಹಾಕಲು ಸಜ್ಜಾಗಿದ್ದಾರೆ. ಗೆದ್ದಿರೋ 17 ಸಂಸದರ ಪೈಕಿ ಹಲವಾರು ಸಂಸದರು ಕ್ಯಾಬಿನೆಟ್ ಸೇರುವ ತವಕದಲ್ಲಿದ್ದಾರೆ.
ಇದನ್ನೂ ಓದಿ:IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್.. ಜಸ್ಟ್ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!
ಕರ್ನಾಟಕದಿಂದ ಯಾರಿಗೆ ಸಿಗುತ್ತೆ ಕೇಂದ್ರ ಮಂತ್ರಿ ಸ್ಥಾನ?
ಕೇಂದ್ರ ಸಚಿವ ಸಂಪುಟಕ್ಕೆ ಸಮುದಾಯದ ಆಧಾರದ ಮೇಲೆ ಮಣೆ ಹಾಕೋದು ನಿಶ್ಚಿತ. ಈ ನಿಟ್ಟಿನಲ್ಲಿ ಒಕ್ಕಲಿಗ ಕೋಟಾದಲ್ಲಿ ಹೆಚ್.ಡಿ. ಕುಮಾರಸ್ವಾಮಿಗೆ ಸಚಿವ ಸ್ಥಾನ ನೀಡೋದು ಅನಿವಾರ್ಯ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿರೋ ಒಕ್ಕಲಿಗ ನಾಯಕರಿಗೆ ಸಚಿವ ಸ್ಥಾನ ಸಿಗೋದು ಡೌಟ್. ವೀರಶೈವ ಲಿಂಗಾಯತ ಕೋಟಾದಲ್ಲಿ ಸುಮಾರು ಐದಕ್ಕೂ ಹೆಚ್ಚು ಸಂಸದರು ಸಚಿವ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ.
ಸಂಪುಟ ಆಕಾಂಕ್ಷಿಗಳು
- ಸಂಸದ 1: ಜಗದೀಶ್ ಶೆಟ್ಟರ್, ಬೆಳಗಾವಿ
- ಸಂಸದ 2: ಬಸವರಾಜ ಬೊಮ್ಮಾಯಿ, ಹಾವೇರಿ-ಗದಗ
- ಸಂಸದ 3: ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ-ಧಾರವಾಡ
- ಸಂಸದ 4: ಪಿ.ಸಿ.ಗದ್ದೀಗೌಡರ್, ಬಾಗಲಕೋಟೆ
- ಸಂಸದ 5: ಬಿ.ವೈ.ರಾಘವೇಂದ್ರ, ಶಿವಮೊಗ್ಗ
- ಸಂಸದ 6: ವಿ. ಸೋಮಣ್ಣ, ತುಮಕೂರು
ತುಮಕೂರು ಕ್ಷೇತ್ರದಿಂದ ಆಯ್ಕೆಯಾಗಿರೋ ವಿ. ಸೋಮಣ್ಣ ಕ್ಯಾಬಿನೆಟ್ ಸೇರುವ ಇಂಗಿತವನ್ನೂ ನೇರವಾಗೇ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ಬಾರಿ ಮಂತ್ರಿಗಿರಿ ಸಿಕ್ಕೋರಿಗೆ ಸೀರುಂಡೆ ಎನ್ನುವಂತಾಗಿದೆ. ಮಿತ್ರಪಕ್ಷಗಳ ಜೊತೆಗೆ ಸ್ವಪಕ್ಷದಲ್ಲಿ ಯಾರಿಗೆ ಕೊಡ್ಬೇಕು. ಯಾರಿಗೆ ಬಿಡ್ಬೇಕು ಎಂಬ ತಲೆನೋವು ಹೈ ಕಮಾಂಡ್‌ಗೆ ನಾಯಕರಿಗೆ ಕಾಡೋದಂತೂ ಪಕ್ಕಾ.
ಇದನ್ನೂ ಓದಿ:ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್ನೋಟ್ನಲ್ಲಿ ಕಾರಣ ರಿವೀಲ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ