newsfirstkannada.com

Bigg Boss: ಈ ವಾರ ಔಟ್ ಯಾರು? ಎಲಿಮಿನೇಷನ್‌ಗೂ ಮುನ್ನ ಕಿತ್ತಾಡಿಕೊಂಡ ಕಾರ್ತಿಕ್‌, ನಮ್ರತಾ; ಕಾರಣವೇನು?

Share :

Published January 20, 2024 at 1:52pm

Update January 20, 2024 at 1:54pm

  ಎಲಿಮಿನೇಷನ್‌ಗೂ ಮುನ್ನ ಬಿಗ್‌ಬಾಸ್ ಮನೆಯಲ್ಲಿ ಗಲಾಟೆ

  ಈ ವಾರದ ಮಿಡ್ ವೀಕ್ ಎಲಿಮಿನೇಷನ್ ಆದ ಮೇಲೆ ಕಿತ್ತಾಟ

  ಕಾರ್ತಿಕ್-ನಮ್ರತಾ ಮಧ್ಯೆ ದೊಡ್ಡ ಗಲಾಟೆಯಾಗಿದ್ದು ಯಾಕೆ?

ಕನ್ನಡ ಕಿರುತೆರೆಯ ಬಿಗ್‌ಬಾಸ್ ಸೀಸನ್‌ 10 ಫಿನಾಲೆಗೆ ಹತ್ತಿರವಾಗುತ್ತಿದೆ. ಈ ವಾರದ ಎಲಿಮಿನೇಷನ್‌ಗೂ ಮುನ್ನ ಬಿಗ್‌ಬಾಸ್ ಮನೆಯಲ್ಲಿ ಜೋರು ಗಲಾಟೆ ನಡೆದಿದೆ. ಬಿಗ್ ಬಾಸ್ ಮನೇಲಿ ಕಳೆದ ಎರಡು-ಮೂರು ವಾರಗಳಿಂದ ಕಾರ್ತಿಕ್-ನಮ್ರತಾ ನಡುವಿನ ಸ್ನೇಹ ಗಟ್ಟಿಯಾಗಿತ್ತು. ಎಲಿಮಿನೇಟೆಡ್ ಕಂಟೆಸ್ಟೆಂಟ್ ಗಳು ಇವರಿಬ್ಬರ ಸ್ನೇಹ ಹೇಗೆ ಕಾಣ್ತಿದೆ ಎಂದು ಒಪಿನಿಯನ್​ ಕೊಟ್ಟಾಗಿನಿಂದ ಕಾರ್ತಿಕ್-ನಮ್ರತಾ ಸ್ನೇಹದಲ್ಲಿ ಬಿರುಕು ಮೂಡಿದ್ರ ಜೊತೆಗೆ ದೊಡ್ಡ ಗಲಾಟೆಯೇ ಆಗಿದೆ.

ಅಂದ್ಹಾಗೆ ಈ ಗಲಾಟೆಗೆ ಇನ್ನೊಂದು ಮುಖ್ಯ ಕಾರಣವೂ ಇದೆ. ಅದೇನಂದ್ರೆ ಈ ವಾರ ಬಿಗ್‌ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಇತ್ತು. ಆಗ ಬಿಗ್​ಬಾಸ್​ ಮನೆಯಿಂದ ಈಗ ಯಾರು ಹೊರ ಹೋಗಬೇಕು ಎಂದು ಕೇಳಿದಾಗ ಕಾರ್ತಿಕ್ ನಮ್ರತಾ ಹೆಸರು ತೆಗೆದುಕೊಂಡ್ರು. ಇಲ್ಲಿ ಸಮಸ್ಯೆಯಾಗಿದ್ದು ಕಾರ್ತಿಕ್ ನಮ್ರತಾ ಹೆಸರು ತೆಗೆದುಕೊಂಡಿದ್ದಕ್ಕಲ್ಲ ಅದಕ್ಕೆ ಕೊಟ್ಟ ರೀಸನ್​. ಹಾಗಾದರೆ ಕಾರ್ತಿಕ್ ಕೊಟ್ಟ ರೀಸನ್ ಏನು? ಅದು ನಮ್ರತಾಗೆ ಅಷ್ಟು ಸಿಟ್ಟು ತರಿಸ್ತಾ?

ಇದನ್ನೂ ಓದಿ: BBK10: ಕಿಚ್ಚನ​ ಕಡೆಯ ಪಂಚಾಯ್ತಿ.. ಲಾಸ್ಟ್​ ಸ್ಟೇಜ್​ನಲ್ಲಿ ಉಳಿಯೋರು, ಹೋಗೋರು ಯಾರು? ಗೆಸ್ ಮಾಡಿ

ಮೈಕಲ್​ಗಾಗಿ ಮನೆಯ ಇತರೆ ಸದಸ್ಯರು ಆಟ ಆಡಿ ಗೆದ್ದು ಮೈಕಲ್​ನ ಕ್ಯಾಪ್ಟನ್ ಮಾಡಿದ ಟಾಸ್ಕ್ ಕೊಟ್ಟಿರಲಾಗುತ್ತೆ. ಈ ಆಟವನ್ನ ಕೆಲ ವಾದ ಪ್ರತಿವಾದಗಳು ನಡೆದ ಮೇಲೆ ತುಕಾಲಿ ನಮ್ರತಾ ವಿನಯ್ ಆಡಿ ಜಯಗಳಿಸುತ್ತಾರೆ. ಇದಾದ ಬಳಿಕ ತುಕಾಲಿ ಹಾಗೂ ವರ್ತೂರ್​ ನಮ್ರತಾರನ್ನ ಸ್ಟ್ರಾಂಗ್ ಲೇಡಿ ಎಂದು ಹೊಗಳುತ್ತಿರುತ್ತಾರೆ. ಆಗ ಕಾರ್ತಿಕ್ ಮಧ್ಯೆ ಮಾತಾಡ್ತಾರೆ. ನೀವು ಏನು ಹೇಳಬೇಡಿ ಕಾರ್ತಿಕ್. ಮನೆಗೆ ಹೋದ ಬಳಿಕ ಹೋಗಿ ಎಪಿಸೋಡ್ ನೋಡಿ ಎಂದು ಸಿಟ್ಟಿಂದಲೇ ಹೇಳ್ತಾರೆ. ಅಲ್ಲಿಂದ ಶುರುವಾಗುತ್ತೆ ನೋಡಿ ಇಬ್ಬರ ಜಿದ್ದಾಜಿದ್ದಿ.

ಅಷ್ಟಕ್ಕೂ ನಮ್ರತಾ ಕಾರ್ತಿಕ್​ ಮೇಲೆ ಅಷ್ಟು ಸಿಟ್ಟಾಗಿದ್ದು ಕಾರ್ತಿಕ್​ರ ಆ ಒಂದು ಕಾರಣದಿಂದ. ನಮ್ರತಾ ಬೇರೆಯವರ ಶ್ಯಾಡೋನಲ್ಲಿ ನಿಂತು ಆಟ ಆಡ್ತಿದ್ರು ಎಂದು ಕಾರ್ತಿಕ್ ಮೊನ್ನೆಯ ಸಂಚಿಕೆಯಲ್ಲಿ ಹೇಳಿರ್ತಾರೆ. ಇದು ಸಹಜವಾಗೇ ನಮ್ರತಾರನ್ನ ಕೆರಳಿಸಿತ್ತು. ಸರಿಯಾದ ಸಮಯಕ್ಕಾಗಿ ಕಾಯ್ತಿದ್ದ ನಮ್ರತಾ ಕಾರ್ತಿಕ್​ಗೆ ಸಖತ್ ಕ್ಲಾಸ್ ತೆಗೆದುಕೊಂಡ್ರು.

ತನಿಷಾನ ನಾಮಿನೇಟ್ ಮಾಡಿ ನನ್ನ ಹೆಸರನ್ನ ಮನೆಯಿಂದ ಆಚೆ ಹೋಗ್ಬೇಕು ಅಂತಾ ಯಾಕ್ ತಗೋಬೇಕಿತ್ತು 3 ವಾರಗಳು ನನ್ನೊಂದಿಗಿದ್ದು ಇವಾಗ ಹೀಗೆ ನೇಮ್ ತಗೊಂಡು ರೀಸನ್ ಕೊಟ್ಟಿದ್ದು ಎಷ್ಟು ಸರಿ ಅಂತ ಕಾರ್ತಿಕ್​ಗೆ ನಮ್ರತಾ ಖಡಕ್​ ಆಗಿಯೇ ಪ್ರಶ್ನೆ ಮಾಡ್ತಾರೆ. ಅದಕ್ಕೆ ಕಾರ್ತಿಕ್ ನಾಮೀನೇಟ್ ಮಾಡೋಕೆ ತನಿಷಾ ಹೆಸ್ರು ತಗೊಂಡೆ ಮನೆಯಿಂದ ಹೊರ ಹೋಗ್ಬೇಕಂತಾ ಅಲ್ಲಾ ಎಂಬುದಾಗಿ ನಮ್ರತಾರಿಗೆ ಉತ್ತರಿಸುತ್ತಾರೆ. ನಮ್ರತಾ ನನ್ನ ಗೇಮ್ ನ ವಿನಯ್ ಬಂದು ಆಡಿ ಕೊಟ್ಟಿಲ್ಲ ನೀವು ಕೊಟ್ಟ ರೀಸನ್​ ಸರಿಯಿಲ್ಲ ಎಂದು ಮುಖಕ್ಕೆ ಹೊಡೆದ ಹಾಗೇ ಉತ್ತರಿಸ್ತಾರೆ. ಮಾತಿನ ಭರದಲ್ಲಿ ಕ್ಯಾರೆಕ್ಟರ್ ಬಗ್ಗೆ ಎಲ್ಲ ಮಾತು ಬಂದು ಹೋಗುತ್ತದೆ. ಆದ್ರೆ ಈ ಗಲಾಟೆಯಲ್ಲಿ ನಮ್ರತಾ ಮಾತ್ರ ಫುಲ್ ಫೈಯರ್ ಆಗಿದ್ರು.

ಯಾಕಂದ್ರೆ ಇದೇ ಕಾರ್ತಿಕ್ ನಮ್ರತಾಗೆ ಕ್ಲೋಸ್ ಆದ್ಮೇಲೆ ನೀವು ಯಾರದ್ದೋ ಇನ್​ಫ್ಲೂಯೆನ್ಸ್‌ನಲ್ಲಿ ಇರಲಿಲ್ಲ ಎಂದು ನನಗೆ ಈಗ ಅನಿಸುತ್ತಿದೆ ಎಂದು ಹೇಳಿದ್ರಂತೆ. ಈ ಬಗ್ಗೆ ನಿನ್ನೆ ನಮ್ರತಾ ಕಾರ್ತಿಕ್​ಗೆ ಮನವರಿಕೆ ಮಾಡಲು ಪ್ರಯತ್ನಿಸ್ತಾರೆ. ಆದ್ರೆ ಏನೇ ಹೇಳಲು ಹೋದ್ರು ಕಾರ್ತಿಕ್ ಒಪ್ಪಲು ರೆಡಿ ಇರೋಲ್ಲ. ಆಗ ನಮ್ರತಾ ಒಮ್ಮೆಲೆ ನೀವು ನನ್ನ ಫ್ರೆಂಡ್​ಶಿಪ್​ನ ಯೂಸ್ ಮಾಡಿಕೊಂಡ್ರಿ ಅಷ್ಟೇ ಎಂದು ಹೇಳುತ್ತಾರೆ.

ಒಟ್ನಲ್ಲಿ ಈ ಗಲಾಟೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗ್ತಿದ್ದು, ಕಾರ್ತಿಕ್​ ಬಗ್ಗೆ ನಮ್ರತಾ ಮಾತಾಡಿದ ಅಷ್ಟು ಮಾತು ಸರಿ ಇತ್ತು ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಕಾರ್ತಿಕ್ ಮಾಡಿದ್ದು ಸರಿ ಇದೆ ಎಂದು ವಾದ ಮಾಡ್ತಿದ್ದಾರೆ. ಆದ್ರೆ ಹಳೆ ಸ್ಪರ್ಧಿಗಳು ಹೊರಗೆ ನಡೆಯೋ ಎಲ್ಲ ವಿಚಾರಗಳನ್ನು ಮನೆ ಒಳಗೆ ಬಂದು ಹೇಳಿದ್ದೇ ಇವರಿಬ್ಬರ ಗಲಾಟೆಗೆ ಮುಖ್ಯ ಕಾರಣ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss: ಈ ವಾರ ಔಟ್ ಯಾರು? ಎಲಿಮಿನೇಷನ್‌ಗೂ ಮುನ್ನ ಕಿತ್ತಾಡಿಕೊಂಡ ಕಾರ್ತಿಕ್‌, ನಮ್ರತಾ; ಕಾರಣವೇನು?

https://newsfirstlive.com/wp-content/uploads/2024/01/Namrataha-Karthik.jpg

Load More