newsfirstkannada.com

ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​ಗೆ ಸಂಕಷ್ಟ; ಮೋದಿ ಕೆಂಡಾಮಂಡಲ!

Share :

Published April 1, 2024 at 6:00am

  ಕಚ್ಚಾತೀವು ಹಸ್ತಾಂತರಿಸಿದ್ದು ಕೆಟ್ಟ ನಿರ್ಧಾರ ಅಂತ ಕಿಡಿ

  ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ ಆರ್​ಟಿಐ ಉತ್ತರ

  ಭಾರತದ ಏಕತೆಯನ್ನು ದುರ್ಬಲಗೊಳಿಸಿದೆ ಎಂದ ಮೋದಿ

ಮಾಜಿ ಪ್ರಧಾನಿ ಇಂದಿರಾಗಾಂಧಿ ಸರ್ಕಾರ ಶ್ರೀಲಂಕಾಗೆ ಹಸ್ತಾಂತರಿಸಿದ್ದ ಕಚ್ಚಾತೀವು ದ್ವೀಪ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ದ್ವೀಪ ಬಿಟ್ಟುಕೊಟ್ಟಿದ್ದ ವಿಚಾರ ಆರ್​ಟಿಐ ಮಾಹಿತಿಯಲ್ಲಿ ಬಯಲಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಕಚ್ಚಾತೀವು ದ್ವೀಪ ವಿವಾದ ಬಿರುಗಾಳಿ ಎಬ್ಬಿಸಿದೆ. 1974ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಶ್ರೀಲಂಕಾಗೆ ಕಚ್ಚಾತೀವು ದ್ವೀಪವನ್ನು ಬಿಟ್ಟುಕೊಟ್ಟ ವಿಚಾರಕ್ಕೆ ಪ್ರಧಾನಿ ಮೋದಿ ಕಾಂಗ್ರೆಸ್​ಗೆ ತಿವಿದಿದ್ದಾರೆ.

ಇದನ್ನೂ ಓದಿ: ಅಭಿಷೇಕ್​ ಅಂಬರೀಶ್​​ ರಾಜಕೀಯಕ್ಕೆ ಎಂಟ್ರಿ? HDK ಭೇಟಿ ಬಳಿ ಸುಮಲತಾ ಬಿಚ್ಚಿಟ್ಟ ಸತ್ಯವೇನು?

ಕಚ್ಚಾತೀವು ದ್ವೀಪವನ್ನ ಶ್ರೀಲಂಕಾಗೆ ಅಂದಿನ ಇಂದಿರಾ ಗಾಂಧಿ ಸರ್ಕಾರ ಹಸ್ತಾಂತರಿಸಿತ್ತು ಎಂಬುದು ಇತ್ತೀಚೆಗೆ ಆರ್​​ಟಿಐ ಮೂಲಕ ಬಹಿರಂಗ ಆಗಿತ್ತು. ಕಾಂಗ್ರೆಸ್ ಪಕ್ಷದ ನಿರ್ಧಾರ ಕಣ್ಣು ತೆರೆಸುವ ಮತ್ತು ಅಚ್ಚರಿಯ ವಿಷಯ, ಇದೊಂದು ಕೆಟ್ಟ ನಿರ್ಧಾರ. ಇದು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಾವು ಕಾಂಗ್ರೆಸ್ ನ್ನು ಎಂದಿಗೂ ನಂಬಲು ಸಾಧ್ಯವಿಲ್ಲ. ಭಾರತದ ಏಕತೆ, ಸಮಗ್ರತೆ, ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್‌ 75 ವರ್ಷಗಳಿಂದ ಮಾಡಿಕೊಂಡು ಬಂದಿರುವ ಕಾಯಕ ಅಂತ ಟ್ವೀಟ್ ಮೂಲಕ ಖಾರವಾಗಿ ಟೀಕಿಸಿದ್ದಾರೆ.

ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ ಆರ್​ಟಿಐ ಉತ್ತರ!

ಇನ್ನು, ಡಿಎಂಕೆ-ಕಾಂಗ್ರೆಸ್‌ ವಿರುದ್ಧ ಬಿಜೆಪಿ ಯುದ್ಧ ಸಾರಿದ್ದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕಚ್ಚಾತೀವು ಪ್ರದೇಶದ ಬಗ್ಗೆ ಅಂದಿನ ಕೇಂದ್ರ ಸರ್ಕಾರದ ನಿರ್ಧಾರ ಏನಿತ್ತು. ಶ್ರೀಲಂಕಾಗೆ ಈ ದ್ವೀಪ ಸೇರಿದ್ದು ಹೇಗೆ ಎಂಬುದರ ವಿವರವನ್ನು ಆರ್‌ಟಿಐ ಅಡಿ ಕೇಳಿ ಮಾಹಿತಿ ಪಡೆದಿದ್ದರು. ಕಚ್ಚಾತೀವು ದ್ವೀಪದ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ ಅಂತ ಅಂದಿನ ಪ್ರಧಾನಿ ನೆಹರು ಟಿಪ್ಪಣಿ ಉಲ್ಲೇಖ ಆಗಿದೆ. ಕಚ್ಚಾತೀವು ಪ್ರದೇಶ ತನ್ನದೆಂದು ಸಾಬೀತು ಪಡಿಸಲು ಭಾರತ ವಿಫಲ ಆಗಿದೆ ಅಂತ ಅಣ್ಣಾಮಲೈ ಕಿಡಿಕಾರಿದ್ದಾರೆ. ಕಚ್ಚಾತೀವು ಪ್ರದೇಶವನ್ನು ಅಂದಿನ ಕಾಂಗ್ರೆಸ್ ಸರ್ಕಾರವೇ ಶ್ರೀಲಂಕಾಗೆ ನೀಡಿರೋ ವಿಚಾರ ಬಯಲಾಗಿದ್ದು ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಆರ್​ಟಿಐ ಮಾಹಿತಿಯ ವಿವರ ವೈರಲ್ ಆಗಿದ್ದು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.

ಕಚ್ಚಾತೀವು ಬಗ್ಗೆ ಪ್ರತಿಕ್ರಿಯಿಸಿರೋ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಬಿಜೆಪಿ ಸಾರ್ವಜನಿಕರ ದಾರಿ ತಪ್ಪಿಸುತ್ತಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ದ್ರಾವಿಡ ಪ್ರಾಂತ್ಯದಲ್ಲಿ ರಾಜಕೀಯ ಹಿಡಿತ ಸಾಧಿಸುವ ಯತ್ನ ನಡೆಸ್ತಿದೆ ಅಂತ ರೋಪಿಸಿ ಪ್ರಧಾನಿ ಮೋದಿ ಹೇಳಿಕೆಗೆ ಸವಾಲು ಹಾಕಿದ್ದರು. ಸದ್ಯ ಶ್ರೀಲಂಕಾ ಇತಿಹಾಸದಲ್ಲೇ ಆರ್ಥಿಕ ಸಂಕಷ್ಟದಲ್ಲಿದೆ. ಭಾರತದಿಂದ ಎಲ್ಲಾ ನೆರವು ಪಡೆಯುತ್ತಿದೆ. ಈ ದ್ವೀಪ ಮೀನುಗಾರರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದರಿಂದ ಈಗ ವಿವಾದ ಬಗೆಹರಿಸಿದರೆ, ಪ್ರಧಾನಿ ಮೋದಿ ಇಮೇಜ್‌ ಇನ್ನಷ್ಟು ವೃದ್ಧಿಯಾಗಬಹುದು. ಅಲ್ಲದೆ ರಾಜಕೀಯವಾಗಿಯೂ ಬಿಜೆಪಿಗೆ ಹೆಚ್ಚು ಲಾಭವಾಗುವ ಸಾಧ್ಯತೆ ಹೆಚ್ಚಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​ಗೆ ಸಂಕಷ್ಟ; ಮೋದಿ ಕೆಂಡಾಮಂಡಲ!

https://newsfirstlive.com/wp-content/uploads/2024/02/Pm-modi-Rahul-Gandhi.jpg

Load More