ಸ್ಯಾಂಡಲ್ವುಡ್ ನಿರ್ದೇಶಕ ತರುಣ್ ಸುಧೀರ್ ಕೈ ಹಿಡಿಯೋ ಚಲುವೆ ಅವರೇನಾ?
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಸ್ಟಾರ್ ಡೈರೆಕ್ಟರ್, ನಟ ತರುಣ್ ಸುಧೀರ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟ ತರುಣ್ ಸುಧೀರ್ ಪೋಸ್ಟ್
ಸ್ಯಾಂಡಲ್ವುಡ್ನ ಟಾಪ್ ಡೈರೆಕ್ಟರ್ ತರುಣ್ ಸುಧೀರ್ ಸದ್ಯ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾ ಸ್ಟೋರಿ ನೋಡಿದ ಅಭಿಮಾನಿಗಳು ನಾಳೆಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ತರುಣ್ ಸುಧೀರ್ ಜೊತೆ ಸೋನಾಲ್ ಮದುವೆ ಎಷ್ಟು ನಿಜ? ಈ ಬಗ್ಗೆ ನಟಿ ಏನಂದ್ರು?
ಹೌದು, ತರುಣ್ ಸುಧೀರ್ ಅವರು ನನ್ನ ಜೀವನದ ರಿಯಲ್ ಹೀರೋಯಿನ್ ಯಾರು ಅಂತ ನಾಳೆ ಅಧಿಕೃತವಾಗಿ ಅನೌನ್ಸ್ ಮಾಡುತ್ತೇನೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚೆಗೆಷ್ಟೇ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್, ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಅದು ಕೂಡ ತಮ್ಮ ರಾಬರ್ಟ್ ಸಿನಿಮಾ ನಟಿ ಸೋನಾಲ್ ಮಂಥೆರೊ ಅವರ ಜೊತೆ ಮದುವೆ ಅಂತಾ ಗುಸು ಗುಸು ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ನಟ ತರುಣ್ ಸುಧೀರ್ ತಾಯಿ ಮಾಲತಿ ಅವರು ಕೂಡ ಖಚಿತಪಡಿಸಿದ್ದರು. ಈಗ ನಾಳೆ ಎಂದರೆ ಜುಲೈ 22, 11 ಗಂಟೆ 08 ನಿಮಿಷಕ್ಕೆ ನನ್ನ ಜೀವನ ರಿಯಲ್ ಹೀರೋಯಿನ್ ಯಾರು ಅಂತ ಅಧಿಕೃತವಾಗಿ ಅನೌನ್ಸ್ ಮಾಡುತ್ತೇನೆ ಅಂತ ಸುಧೀರ್ ಬರೆದುಕೊಂಡಿದ್ದಾರೆ.
ಯಾರು ಈ ನಟಿ ಸೋನಾಲ್ ಮಂಥೆರೊ ?
ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ನಟಿಸಿದ್ದರು. ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಾಲ್ ಮಂಥೆರೊ ಅಭಿನಯಿಸಿದ್ದರು. ಮಂಗಳೂರು ಮೂಲದ ಸೋನಾಲ್ ಮಂಥೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ಆನಂತರ ‘ಅಭಿಸಾರಿಕೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿ ಹಲವು ಸಿನಿಮಾದಲ್ಲಿ ಸೋನಾಲ್ ಮಂಥೆರೊ ಅಭಿನಯಿಸಿದ್ದಾರೆ. ಸದ್ಯ ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ಅವರ ಕೈ ಹಿಡಿಯಲಿದ್ದಾರೆ ಅಂತ ಮಾಲತಿ ಸುಧೀರ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ