VIDEO: ‘ಪ್ರಜ್ವಲ್ ರೇವಣ್ಣನ ಬಿಟ್ಟು ನನ್ನ ಜೈಲಿಗೆ ಹಾಕಿದ್ದಾರೆ’- ಕೆಸಿಆರ್ ಪುತ್ರಿ ಕೆ. ಕವಿತಾ ಆಕ್ರೋಶ

author-image
admin
Updated On
VIDEO: ‘ಪ್ರಜ್ವಲ್ ರೇವಣ್ಣನ ಬಿಟ್ಟು ನನ್ನ ಜೈಲಿಗೆ ಹಾಕಿದ್ದಾರೆ’- ಕೆಸಿಆರ್ ಪುತ್ರಿ ಕೆ. ಕವಿತಾ ಆಕ್ರೋಶ
Advertisment
  • ಪ್ರಜ್ವಲ್ ರೇವಣ್ಣ ಅಂತವರನ್ನು ದೇಶದಿಂದ ಆಚೆ ಹೋಗಲು ಬಿಟ್ಟಿದ್ದಾರೆ
  • ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆವರಣದಲ್ಲಿ ಕವಿತಾ ಹೇಳಿಕೆ
  • ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಮಗಳು ಕೆ. ಕವಿತಾ ರಿಯಾಕ್ಷನ್!

ನವದೆಹಲಿ: ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಅತಿ ದೊಡ್ಡ ಸೆಕ್ಸ್‌ ಸ್ಕ್ಯಾಂಡಲ್ ಅಂತಾನೇ ಸುದ್ದಿಯಾಗುತ್ತಿದೆ. ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಬರೀ ರಾಜ್ಯದಲ್ಲಷ್ಟೇ ಅಲ್ಲ ದೇಶ, ವಿದೇಶದಲ್ಲೂ ಚರ್ಚೆಯಾಗುತ್ತಿದೆ. ಲೈಂಗಿಕ ಕಿರುಕುಳ, ಅತ್ಯಾಚಾರದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ದೇಶ ಬಿಟ್ಟು ತಲೆಮರೆಸಿಕೊಂಡಿದ್ದಾರೆ.

ಆರೋಪಿ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹಾರಿ ಹೋಗಿರುವುದು ದೇಶಾದ್ಯಂತ ಭಾರೀ ಚರ್ಚೆಯಾಗಿದೆ. ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಮಗಳು ಕೆ. ಕವಿತಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿ ಅಬಕಾರಿ ನೀತಿಯ 100 ಕೋಟಿ ರೂಪಾಯಿ ಹಗರಣದಲ್ಲಿ ಕವಿತಾ ಅವರನ್ನು ಬಂಧಿಸಲಾಗಿದೆ.

publive-image

ಇದನ್ನೂ ಓದಿ:ಏನಿಲ್ಲ.. ಏನಿಲ್ಲ.. H.D ರೇವಣ್ಣ 4 ದಿನ ಕಸ್ಟಡಿಯಲ್ಲಿದ್ದರೂ SITಗೆ ಪ್ರಯೋಜನ ಇಲ್ವಾ? ಏನಾಯ್ತು? 

ಇಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕೆ. ಕವಿತಾ ಅವರು ಪ್ರತಿಕ್ರಿಯೆ ನೀಡಿದರು. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಂತವರನ್ನು ದೇಶದಿಂದ ಆಚೆ ಹೋಗಲು ಬಿಟ್ಟು ನಮ್ಮಂತವರನ್ನ ಬಂಧಿಸಿದ್ದಾರೆ. ತನಿಖಾ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ದೇಶದ ಜನರು ಗಮನಹರಿಸಬೇಕು ಎಂದು ಕವಿತಾ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.


">May 7, 2024

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ತೆಲಂಗಾಣದ BRS ಪಕ್ಷದ ನಾಯಕಿ ಕವಿತಾಗೆ ಜಾಮೀನು ನೀಡಲು ನಿರಾಕರಿಸಿದೆ. ಸಿಬಿಐ, ಇ.ಡಿ. ಕೇಸ್‌ಗಳಲ್ಲಿ ಕವಿತಾಗೆ ಮೇ 20ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೇ ಮೇ 13ರಂದು ತೆಲಂಗಾಣದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಕವಿತಾ ಅವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment