newsfirstkannada.com

ಏನಿಲ್ಲ.. ಏನಿಲ್ಲ.. H.D ರೇವಣ್ಣ 4 ದಿನ ಕಸ್ಟಡಿಯಲ್ಲಿದ್ದರೂ SITಗೆ ಪ್ರಯೋಜನ ಇಲ್ವಾ? ಏನಾಯ್ತು?

Share :

Published May 7, 2024 at 4:16pm

Update May 7, 2024 at 4:35pm

  ಇದೆಲ್ಲಾ ನನ್ನ ಕುಟುಂಬದ ಮೇಲೆ ಮಾಡಿರುವ ಷಡ್ಯಂತ್ರವಾಗಿದೆ

  ನೀವು ಬರೆದುಕೊಂಡು ಬಂದಿದ್ದಕ್ಕೆಲ್ಲಾ ನಾನು ಸಹಿ ಹಾಕುವುದಿಲ್ಲ

  ಎಸ್‌ಐಟಿ ಪೊಲೀಸರ ವಿಚಾರಣೆಯಲ್ಲಿ ಹೆಚ್‌.ಡಿ ರೇವಣ್ಣ ಹೇಳಿದ್ದೇನು?

ಬೆಂಗಳೂರು: ಮಹಿಳೆ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಬಂಧನವಾಗಿದೆ. ಸಂತ್ರಸ್ತೆಯನ್ನು ರಕ್ಷಣೆ ಮಾಡಿರುವ SIT ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಹೆಚ್.ಡಿ ರೇವಣ್ಣ ಅವರು ಎಸ್‌ಐಟಿ ಕಸ್ಟಡಿಯಲ್ಲಿದ್ದು, ಮಹಿಳೆ ಕಿಡ್ನಾಪ್ ಮಾಡಿದ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ.

ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು 4 ದಿನಗಳ ಕಾಲ ಎಸ್‌ಐಟಿ ಕಸ್ಟಡಿಯಲ್ಲಿ ಇದ್ದರೂ ಯಾವುದೇ ಪ್ರಯೋಜನವಿಲ್ಲ ಎನ್ನಲಾಗಿದೆ. ಎಸ್‌ಐಟಿ ಪೊಲೀಸರು ವಿಚಾರಣೆಯಲ್ಲಿ ರೇವಣ್ಣ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ನಾನು ಯಾರನ್ನು ಕಿಡ್ನಾಪ್ ಮಾಡಿಸಿಲ್ಲ. ಈ ಕಿಡ್ನಾಪ್‌ಗೂ ನನಗೆ ಏನು ಗೊತ್ತಿಲ್ಲ ಇದೆಲ್ಲಾ ಬರೀ ಸುಳ್ಳು ಎಂದು ಹೆಚ್‌.ಡಿ ರೇವಣ್ಣ ಹೇಳುತ್ತಿದ್ದಾರೆ.

ಎಸ್‌ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿರುವ ಹೆಚ್‌.ಡಿ ರೇವಣ್ಣ ಸುಳ್ಳು ಆರೋಪ ಮಾಡಿ ದೂರು ನೀಡಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಕೊಟ್ಟ ದೂರು. ನನ್ನ ಕುಟುಂಬದ ಮೇಲೆ ಮಾಡಿರುವ ಷಡ್ಯಂತ್ರವಾಗಿದೆ ಎಂದು ಉತ್ತರ ನೀಡುತ್ತಿದ್ದಾರೆ.

ಇದನ್ನೂ ಓದಿ: ‘ನನ್ನ ತಂದೆ, ತಾಯಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ’.. -ಕಾಂಗ್ರೆಸ್​ ವಿರುದ್ಧ HD ಕುಮಾರಸ್ವಾಮಿ ಗರಂ 

ಯಾವುದೇ ಪುರಾವೆ ಇಲ್ಲದಿದ್ದರೂ ನೀವು ನನ್ನ ಅರೆಸ್ಟ್ ಮಾಡಿದ್ದೀರಾ. ಕರೆದುಕೊಂಡು ಬಂದು ಕೂರಿಸಿಕೊಂಡಿದ್ದೀರಲ್ಲಾ ಕಂಡು ಹಿಡಿಯಿರಿ. ನೀವು ಬರೆದುಕೊಂಡು ಬಂದಿದ್ದಕ್ಕೆಲ್ಲಾ ನಾನು ಸಹಿ ಹಾಕುವುದಿಲ್ಲ. ನಾನು ಏನು ಹೇಳ್ತಿನೋ ಅದಕ್ಕೆ ಸಹಿ ಹಾಕ್ತಿನಿ ಎಂದು ಹೇಳಿಕೆ ದಾಖಲು ಮಾಡುವಾಗ ರೇವಣ್ಣ ಅವರು ಅಸಹಕಾರ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಎಸ್ಐಟಿ ತನಿಖಾ ತಂಡದ ಮೂಲಗಳಿಂದ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏನಿಲ್ಲ.. ಏನಿಲ್ಲ.. H.D ರೇವಣ್ಣ 4 ದಿನ ಕಸ್ಟಡಿಯಲ್ಲಿದ್ದರೂ SITಗೆ ಪ್ರಯೋಜನ ಇಲ್ವಾ? ಏನಾಯ್ತು?

https://newsfirstlive.com/wp-content/uploads/2023/09/HD-Revanna-1.jpg

Load More