/newsfirstlive-kannada/media/post_attachments/wp-content/uploads/2024/09/Keerthy_Suresh.jpg)
ನಟಿ ಕೀರ್ತಿ ಸುರೇಶ್ ಅವರನ್ನು ನೋಡಿದವರು ಯಾರದರೂ ವಾವ್ಹ್ ಹೀರೋಯಿನ್ ಎಂದರೆ ಹೀಗೆ ಇರಬೇಕು ಎನ್ನುವಾಗೆ ಇರುತ್ತಾರೆ. ತಮ್ಮದೇ ಆದ ವಿಶಿಷ್ಟ ಅಭಿನಯದಿಂದ ಇಡೀ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ನೇನು ಶೈಲಾಜಾ ಎನ್ನುವ ಮೂವಿ ಮೂಲಕ ತೆಲುಗು ಸಿನಿ ರಂಗಕ್ಕೆ ಆಗಮಿಸಿದ ಕೀರ್ತಿ ಸುರೇಶ್ ಸಾಕಷ್ಟು ಪ್ರಶಸ್ತಿಗಳಿಗೆ ಮುತ್ತಿಕ್ಕಿದ್ದಾರೆ. ದುಬೈನಲ್ಲಿ ನಡೆದ 2 ದಿನಗಳ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಗೋಲ್ಡನ್ ಸ್ಯಾರಿಯಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ.
ಅದ್ಧೂರಿ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ಭಾರತದ ಪಕ್ಕಾ ಸಾಂಪ್ರದಾಯದಂತೆ ಕೀರ್ತಿ ಸುರೇಶ್ ಸೀರೆ ಧರಿಸಿ ಬಂದಿದ್ದರು. ಈ ಬ್ಯೂಟಿಫುಲ್ ನಟಿಯನ್ನು ನೋಡಿದವರೆಲ್ಲ ವಂಡರಿಂಗ್, ಸೂಪರ್ ಎನ್ನುತ್ತಿದ್ದರು. ಸಾಂಪ್ರದಾಯಿಕವಾಗಿ ನೇಯ್ಗೆ ಮಾಡಿದಂತ ಗೋಲ್ಡ್ ಕಲರ್ ಸ್ಯಾರಿ ಧರಿಸಿದ್ದ ಕೀರ್ತಿ, ಈ ಸ್ಯಾರಿಗೆ ಮ್ಯಾಚ್ ಆಗುವಂತ ವೈಟ್ ಕಲರ್ ಬ್ಲೌಸ್ ಧರಿಸಿದ್ದರು. ಈ ಬ್ಲೌಸ್ಗೆ ಗೋಲ್ಡ್ ಕಲರ್ ಎಳೆಗಳನ್ನು ಕಸೂತಿ ಮಾಡಲಾಗಿತ್ತು. ಇದರಿಂದ ಕೀರ್ತಿ ಸುರೇಶ್ ಡ್ರೆಸ್ ಮ್ಯಾಚಿಂಗ್ ಹಾಕಿತ್ತು. ಅಲ್ಲದೇ ಕೈಗಳಿಗೆ ಚಿನ್ನದ ಬ್ಯಾಂಗಲ್ಸ್, ಕಿವಿಯಲ್ಲಿ ಬಂಗಾರದ ಓಲೆ, ತಲೆಯಲ್ಲಿ ಘಮ ಘಮಿಸುವ ದುಂಡು ಮಲ್ಲಿಗೆ ಹೂವುಗಳು ಎಲ್ಲರನ್ನೂ ಆಕರ್ಷಿಸುವಂತೆ ಕೀರ್ತಿ ಸುರೇಶ್ ಸಮಾರಂಭದಲ್ಲಿ ಮಿಂಚಿದರು.
ಇದನ್ನೂ ಓದಿ:ಮೈಸೂರು ಸಿಲ್ಕ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಕ್ಯೂ ನಿಂತರೂ ಸಿಗುತ್ತಿಲ್ಲ ಸ್ಯಾರಿ; ಕಾರಣವೇನು?
ಇನ್ನು ನಾನಿ ಹಾಗೂ ಕೀರ್ತಿ ಸುರೇಶ್ ಜೋಡಿಯಾಗಿ ದಸರಾ ಎನ್ನುವ ತೆಲುಗು ಸಿನಿಮಾದಲ್ಲಿ ಅಭಿನಯ ಮಾಡಿದ್ದರು. ಈ ಸಿನಿಮಾದಲ್ಲಿ ಅಭಿನಯಕ್ಕಾಗಿ ತೆಲುಗಿನ ಬೆಸ್ಟ್ ಹೀರೋ ಪ್ರಶಸ್ತಿ ನಾನಿ ಪಡೆದುಕೊಂಡರೇ, ಇನ್ನು ಬೆಸ್ಟ್ ಹೀರೋಯಿನ್ ಪ್ರಶಸ್ತಿಯನ್ನು ಕೀರ್ತಿ ಸುರೇಶ್ ಪಡೆದುಕೊಂಡಿದ್ದಾರೆ. ನೇನು ಶೈಲಜಾ ಚಿತ್ರದ ಮೂಲಕ ತೆಲುಗು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದ ಕೀರ್ತಿ ಸುರೇಶ್, ತಮ್ಮ ವಿಶಿಷ್ಟ ಅಭಿನಯದಿಂದ ಇಲ್ಲಿವರೆಗೆ 1 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 4 SIIMA ಪ್ರಶಸ್ತಿಗಳು, ಫಿಲ್ಮ್‌ಫೇರ್ ಪ್ರಶಸ್ತಿ ಸೌತ್ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.
ಕೀರ್ತಿ ಸುರೇಶ್ ಸದ್ಯ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಸಂಚಲನ ಮೂಡಿಸುತ್ತಿರುವ ಬ್ಯೂಟಿಫುಲ್ ನಟಿ. ತನ್ನ ಅಂದ ಚಂದದಿಂದಲೇ ಯುವಕರ ಮನಸು ಕದಿಯುತ್ತಿರುವ ಕೀರ್ತಿ, ನೇನು ಶೈಲಜಾ ಎನ್ನುವ ಮೂವಿ ಮೂಲಕ ತೆಲುಗು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಈವರೆಗೂ ಹಲವು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ