Advertisment

ಮುನಿಸಿಕೊಂಡ ಪ್ರಕೃತಿ ಮಾತೆ.. ಕರಿ ನೆರಳ ಛಾಯೆಯಲ್ಲಿ ಕೇರಳ! ಅಪಾಯದಲ್ಲಿವೆ 13 ಜಿಲ್ಲೆಗಳು

author-image
AS Harshith
Updated On
ಮುನಿಸಿಕೊಂಡ ಪ್ರಕೃತಿ ಮಾತೆ.. ಕರಿ ನೆರಳ ಛಾಯೆಯಲ್ಲಿ ಕೇರಳ! ಅಪಾಯದಲ್ಲಿವೆ 13 ಜಿಲ್ಲೆಗಳು
Advertisment
  • 5 ವರ್ಷಗಳ ಬಳಿಕ ಮುನಿಸಿಕೊಂಡ ಪ್ರಕೃತಿ ಮಾತೆ.. ಮುಡಕ್ಕೈ ಮತ್ತು ಚೂರಲ್ಮಲಾ ಸರ್ವನಾಶ
  • ಇದೇ ಮೊದಲಲ್ಲ.. ಕೇರಳದಲ್ಲಿ ಪ್ರಕೃತಿ ಮಾತೆ ಮುನಿಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ
  • ಭೂಕುಸಿತದಿಂದ ವಯನಾಡು ಸರ್ವನಾಶ.. ಅಂದಾಜು 60 ಸಾವಿರ ಕೋಟಿ ನಷ್ಟ

ಕೇರಳ ಕರಿ ನೆರಳ ಛಾಯೆಯಲ್ಲಿದೆ. ರಕ್ಕಸ ಮಳೆಯಿಂದಾಗಿ ವಯನಾಡಿನಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿವೆ. ಈಗಾಗಲೇ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಸಂಖ್ಯೆ ಸಿಕ್ಕಿದೆ. 200ಕ್ಕೂ ಹೆಚ್ಚು ಜನರಿಗೆ ಗಂಭೀರಗಾಯವಾಗಿದೆ. 187 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಪ್ರಕೃತಿಯ ರಕ್ಕಸ ತಾಂಡವ ಮಾತ್ರ ಭೀಕರವಾಗಿದ್ದು, ಇದು ಕೇರಳ ಮಾತ್ರವಲ್ಲ ಉಳಿದ ರಾಜ್ಯಗಳಿಗೂ ಎಚ್ಚರಿಕೆ ಸಂದೇಶವಾಗಿದೆ.

Advertisment

2018 ರಲ್ಲೂ ಕೇರಳಕ್ಕೆ ಅತಿ ದೊಡ್ಡ ನೈಸರ್ಗಿಕ ವಿಕೋಪ ಎದುರಾಗಿತ್ತು. ಇದೀಗ 5 ವರ್ಷಗಳ ಬಳಿಕ ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ. 200ಕ್ಕೂ ಹೆಚ್ಚು ಕುಟುಂಬಗಳು ಕಣ್ಮರೆಯಾಗಿವೆ. ಮಕ್ಕಳು, ವೃದ್ಧರು, ಪ್ರಾಣಿ, ಪಕ್ಷಿ ಎನ್ನದೇ ಎನ್ನವನ್ನು ತೊಯ್ದು ಸ್ಮಶಾನದಂತೆ ಮಾಡಿದೆ.

publive-image

ಈ ಹಿಂದೆಯು ಮುನಿಸಿಕೊಂಡಿದ್ದ ಪ್ರಕೃತಿ ಮಾತೆ

1924 ಜುಲೈ 14ರಂದು ಕರ್ಕಿಡಕಂ ಎಂಬಲ್ಲಿ ಮೂರು ವಾರಗಳ ಕಾಲ ನಿರಂತರ ಧಾರಾಕಾರ ಮಳೆ ಮತ್ತು ಪ್ರವಾಹವು ಏರ್ಪಟ್ಟಿತ್ತು. ಕೇರಳದ ಸಂಪೂರ್ಣ ತಗ್ಗು ಪ್ರದೇಶಗಳನ್ನು ಈ ಮಳೆ ಮುಳುಗಿಸಿತ್ತು. ಮಳೆಯ ರೌದ್ರ ನರ್ತನಕ್ಕೆ ಮುನ್ನಾರ್‌ನ ಚಹಾ ತೋಟಗಳಿಗೂ ನೀರು ನುಗ್ಗಿತ್ತು. ಆದರೆ ಈ ವೇಳೆ ಪ್ರವಾಹದಲ್ಲಿ ಸತ್ತವರ ಸಂಖ್ಯೆ ಕುರಿತು ಯಾವುದೇ ಮಾಹಿತಿ ಇಲ್ಲ.

2018ರ ಪ್ರವಾಹದಲ್ಲಿ 14.57 ಲಕ್ಷ ಜನರು ಮತ್ತು 3,91,494 ಕುಟುಂಬಗಳು ಶಿಬಿರಗಳಲ್ಲಿ ಉಳಿದುಕೊಂಡಿದ್ದರು, 450 ಜನರು ಸಾವನ್ನಪ್ಪಿದ್ದರು. 15,272 ಮನೆಗಳು ಸಂಪೂರ್ಣ ನಾಶವಾಗಿದ್ದು, 2.53 ಲಕ್ಷ ಮನೆಗಳು ನಾಶವಾಗಿತ್ತು. ಕೇರಳ ಸರ್ಕಾರದ ಅಂದಾಜಿನ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿತ್ತು.

Advertisment

publive-image

2018ರಲ್ಲಿ ಆಗಸ್ಟ್ 1ರಿಂದ 20ರ ನಡುವೆ ಕೇರಳದಲ್ಲಿ 771 ಮಿ.ಮೀ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಹಲವಾರು ಭೂಕುಸಿತಗಳಿಗೆ ಕಾರಣವಾಯಿತು. ಪರಿಣಾಮ 10 ಜಿಲ್ಲೆಗಳಲ್ಲಿ 341 ಮಿ.ಮೀ ಮಳೆಯಾಗಿತ್ತು. ಇಡುಕ್ಕಿಯೊಂದರಲ್ಲೇ 143 ಮಿ.ಮೀ ಮಳೆಯಾಗಿತ್ತು. ಇನ್ನು ದುರಂತ ಸಂಭವಿಸಿದ ಪುತ್ತುಮಲದಲ್ಲಿ ಜುಲೈ 30ರಂದು 118.5 ಮಿ.ಮೀ ಮಳೆಯಾಗಿತ್ತು.

publive-image

ವಯನಾಡು ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 140 ಮಿ.ಮೀ ಮಳೆ ಸುರಿದಿದೆ ಎನ್ನಲಾಗುತ್ತಿದೆ. ನಿರೀಕ್ಷೆಗಿಂತ ಐದು ಪಟ್ಟು ಹೆಚ್ಚು ಸುರಿದಿದೆ ಎನ್ನಲಾಗುತ್ತಿದೆ. ದುರಂತದ ಪ್ರದೇಶದಲ್ಲಿ ಅದಕ್ಕೂ ಮೊದಲ 24 ಗಂಟೆಗಳಲ್ಲಿ 200 ಮಿ.ಮೀ ಹಾಗೂ ಎರಡನೇ ದಿನ 372 ಮಿ.ಮೀ ಮಳೆಯಾಗಿದೆ ಎಂದು ಹೇಳಲಾಗುತ್ತಿದೆ.

publive-image

ಇನ್ನು 2001 ರಲ್ಲೂ ಅಂಬೂರಿನಲ್ಲಿ ಭೂಕುಸಿತ ಸಂಭವಿಸಿತ್ತು. ಪೂಚ್‌ಮುಕ್‌ನಲ್ಲೂ ಸಂಭವಿಸಿದ ಭೂಕುಸಿತದಲ್ಲಿ 39 ಮಂದಿ ಪ್ರಾಣ ಕಳೆದುಕೊಂಡಿದ್ದರು. 2019 ರಲ್ಲಿ ವಯನಾಡಿನ ಪುದುಮಲದಲ್ಲಿ ಭೂಕುಸಿತದಲ್ಲಿ 17 ಜನರು ಮತ್ತು ಕವಲಪರದಲ್ಲಿ 57 ಜನರು ಸಾವನ್ನಪ್ಪಿದರು. 2020 ರ ಪೆಟ್ಟಿಮುಡಿ ದುರಂತದಲ್ಲಿ 70 ಜನರು ಬಲಿಯಾದರು. ಇದೀಗ ಮುಂಡಕ್ಕೈ ಮತ್ತು ಚುರಲ್ಮಾಲದಲ್ಲಿನ ಘಟನೆ ನೆನಪಿನಲ್ಲಿ ಮಾಸದಂತ ಗಾಯ ಮಾಡಿದೆ. ಅಂದಾಜಿನ ಪ್ರಕಾರ 60 ಸಾವಿರ ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಮತ್ತೊಂದು ಶಾಕಿಂಗ್​ ವಿಚಾರವೆಂದರೆ ಇನ್ನು 13 ಜಿಲ್ಲೆಗಳು ಅಪಾಯದ ಅಂಚಿನಲ್ಲಿವೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment