newsfirstkannada.com

ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

Share :

Published July 31, 2024 at 7:18pm

Update July 31, 2024 at 7:22pm

    ರಾತ್ರಿ ನಿದ್ದೆಯಲ್ಲಿ ಇದ್ದವರು ಹಾಗೇ ಚಿರನಿದ್ರೆಗೆ ಜಾರಿದ್ದು ದುರಂತ

    ಶಿವಣ್ಣ ಕುಟುಂಬದ 7 ಮಂದಿ ನಾಪತ್ತೆ.. ಕಿರಿಯ ಮಗಳು ಸಾವು

    ಮುಂದೇನು ಅನ್ನೋ ಆತಂಕದಲ್ಲೇ ಕಾಲ ದೂಡುವಂತ ಪರಿಸ್ಥಿತಿ

ಪ್ರಕೃತಿ ಮುಂದೆ ಮನುಷ್ಯ ನಗಣ್ಯ ಅನ್ನೋದು ಅದೆಷ್ಟೊ ಬಾರಿ ಸಾಬೀತಾಗಿದೆ. ಆದ್ರೂ ಮನುಷ್ಯನ ಪ್ರಕೃತಿ ನಾಶವನ್ನು ನಿಲ್ಲಿಸಿಲ್ಲ. ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನ ಅಗೆದು ಲಾಭ ಮಾಡಿಕೊಳ್ತಾನೆ ಇದೆ. ಆದ್ರೆ ಪ್ರಕೃತಿ ಮುನಿದಾಗ ಏನೂಲ ಇಲ್ಲದ ನಶ್ವರನಾಗಿ ನಿಂತು ಬಿಡ್ತಾನೆ. ಇದಕ್ಕೆ ಮತ್ತೊಂದು ಉದಾಹರಣೆ ಕೇರಳದ ವಯನಾಡಿನ ಭೂಜಲ ದುರಂತ. ಧರ ಧರನೆ ಕುಸಿದ ಗುಡ್ಡ ನೂರಾರು ಜನರ ಬದುಕನ್ನ ಕಸಿದು ಬಿಟ್ಟಿದೆ. ಹೆಣಗಳ ರಾಶಿ ಮಧ್ಯೆ ಕಣ್ಣೀರಿಡುತ್ತ ತಮ್ಮವರಿಗಾಗಿ ಹುಡುಕತ್ತಿರುವ ದೃಶ್ಯ ನಿಜಕ್ಕೂ ಕರುಣಾಜಕ. ಕೇರಳದ ಒಂದೊಂದು ಕಣ್ಣೀರಿನ ಕಥೆಗಳು ಕರುಳು ಹಿಂಡುತ್ತಿವೆ.

ಇದನ್ನೂ ಓದಿ: ಒಂದೊಂದು ಪೋಸ್ಟ್​​ಗೂ ಒಂದೊಂದು ದೇಶದಲ್ಲಿ ಇರ್ತಾರಾ ದೀಪಿಕಾ ದಾಸ್​.. ಬ್ಯೂಟಿ ಈಗ ಹೋಗಿದ್ದೇಲ್ಲಿಗೆ?

ವಯನಾಡಿನ ಮಣ್ಣಲ್ಲಿ ಹೆಣಗಳ ರಾಶಿ.. ಗುಡ್ಡದ ಮಣ್ಣಲ್ಲಿ ಮುಚ್ಚಿ ಹೋಗಿರುವ ನೂರಾರು ಮನೆಗಳು.. ಕಾಳಜಿ ಕೇಂದ್ರಲ್ಲಿ ಬ್ರೆಡ್- ಬನ್ನು ತಿಂದು ಮುಂದೇನು ಅಂತಿರೋ ಜನ. ವಯನಾಡಿನ ಜಲ ಪ್ರಳಯಕ್ಕೆ ಸಾಕ್ಷಿಯಾದ ಕರುಳು ಹಿಂಡುವ ದೃಶ್ಯಗಳಿವು. ಮಗಳನ್ನ ಕಳ್ಕೊಂಡು ಅಪ್ಪ. ತಮ್ಮನನ್ನ ಕಳ್ಕೊಂಡ ಅಣ್ಣ. ಅಕ್ಕನನ್ನ ಕಳ್ಕೊಂಡ ತಂಗಿ. ಅಯ್ಯೋ ಅನಿಸುವಂತ ಈ ಕತೆಗಳನ್ನ ಕೇಳಿದ್ರೆ ಕರುಳು ಚುರಕ್ ಅನ್ನದೇ ಇರಲ್ಲ.

ಇದನ್ನೂ ಓದಿ: PHOTO: ಹನಿಮೂನ್ ಮೂಡ್‌ನಲ್ಲಿರೋ ಬಿಗ್​ಬಾಸ್​​ ಬೆಡಗಿ; ಪತಿಯ ಜೊತೆ ದೀಪಿಕಾ ದಾಸ್​ ಹೋಗಿದ್ದೆಲ್ಲಿಗೆ?

ಭೂಕುಸಿತದ ಹೊಡೆತಕ್ಕೆ 4 ಹಳ್ಳಿಗಳು ಸ್ಥಿತಿ ಅಧೋಗತಿ

ದಾರಿ ತಪ್ಪಿ ಹರಿದು ಬಂದ ನದಿಯ ರಭಸಕ್ಕೆ ವಯನಾಡಿದ 4 ಹಳ್ಳಿಗಳ ಅಸ್ತಿತ್ವವೇ ನಾಶವಾಗಿ ಹೋಗಿದೆ. ಭೂಕುಸಿತದ ಹೊಡೆತಕ್ಕೆ 4 ಹಳ್ಳಿಗಳು ಸ್ಥಿತಿ ಅಧೋಗತಿಯಾಗಿದೆ. ಭೀಕರವಾಗಿ ಹರಿದ ನೀರಿನ ರಭಸಕ್ಕೆ ಕಿ.ಮೀ ಗಟ್ಟಲ್ಲೇ ಶವಗಳು ಕೊಚ್ಚಿಹೋಗಿವೆ. ಒಂದೊಂದು ಘಟನೆ ಎದೆ ಝಲ್ಲೆನ್ನಿಸುವಂತೆ ಮಾಡುತ್ತೆ.

300 ಜನರ ಸಾವು! ಕೇರಳ ನಿವಾಸಿ ಬಿಚ್ಚಿಟ್ಟ ಸ್ಫೋಟಕ ಸತ್ಯವೇನು?

ದೇವರನಾಡು ಕೇರಳದಲ್ಲಿ ಸಂಭವಿಸಿದ ಭೂಕುಸಿತ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಒಂದೇ ರಾತ್ರಿಯಲ್ಲಿ ಇಡೀ ಊರಿಗೆ ಊರೇ ಜಲಸಮಾಧಿಯಾಗಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದ್ದು, ದುರಂತದಲ್ಲಿ ಇದುವರೆಗೂ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ 128ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ. ಇನ್ನೂ ಗಾಯಾಳುಗಳಿಗೆ ಮೆಪ್ಪಾಡಿ, ವೈನಾಡು, ಮಲ್ಲಪುರಂ, ಕಾಸರಗೂಡು, ಕರ್ನಾಟಕದ ಹೆಚ್.ಡಿ.ಕೋಟೆ, ಮೈಸೂರಿನ ಕೆ.ಆರ್.ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಈ ಮಧ್ಯೆ ಕೇರಳದ ನಿವಾಸಿ ಮುಸ್ತಫಾ ಬೆಚ್ಚಿ ಬೀಳಿಸುವ ಸತ್ಯವೊಂದನ್ನ ಹೇಳಿದ್ದಾರೆ. ಈ ದುರಂತದಲ್ಲಿ ನೂರಲ್ಲ 300 ಜನ ಸಾವನ್ನಪ್ಪಿರುಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಫಾಲ್ಸ್​ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್​ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?

ವಯನಾಡು ದುರಂತದಲ್ಲಿ ಮುಸ್ತಫಾ ಸ್ನೇಹಿತನ ಇಡೀ ಕುಟುಂಬವೇ ಬಲಿಯಾಗಿ ಹೋಗಿದೆ. ಕೇವಲ 9 ವರ್ಷದ ಮಗಳು ಮಾತ್ರ ಬದುಕುದಿದ್ದಾಳೆ. ದುರಂತವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಮುಸ್ತಫಾ, ಚೂರಲ್​ಮಲದಲ್ಲಿ ಈ ಮುಂಚೆ ಯಾವುದೇ ನದಿ ಇರಲಿಲ್ಲ, ಈಗ ದೊಡ್ಡ ನದಿಯಾಗಿ ಪ್ರವಾಹ ರೀತಿ ಉಕ್ಕಿ ಹರಿಯುತ್ತಿದೆ. ಈಗ ಉಂಟಾ ಪ್ರವಾಹದಲ್ಲಿ 300 ಮಂದಿ ಮೃತಪಟ್ಟಿರಬಹುದು ಅಂತ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್​ ಅಂದ್ರೆ ಇವರಿಗೆ ಭಯ, ಕಾರಣ?

ಭೂ ಕುಸಿತದಲ್ಲಿ ಒಂದೇ ಕುಟುಂಬದ 25 ಮಂದಿ ಕಣ್ಮರೆ!

ಇನ್ನ ಕೇರಳದ ಚೂರಲ್​​ಮಲಾದಲ್ಲಿ ಪ್ರವಾಹದಲ್ಲಿ ಒಂದೇ ಕುಟುಂಬದ 25 ಮಂದಿ ಕಣ್ಮರೆ ಆಗಿದ್ದಾರೆ. ಈ ಬಗ್ಗೆ ಚೂರಲ್​​ಮಲದ ನಿವಾಸಿ ಸುಲ್ಫೀಕರ್ ಅಲಿ ನ್ಯೂಸ್ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ. ದಿನ ರಾತ್ರಿ ನಮ್ಮ ಕುಟುಂಬದಲ್ಲಿ 40 ಮಂದಿ ಇದ್ದೆವು. ಜೋರು ಮಳೆ ಬಂದಿದ್ರಿಂದ ಎಲ್ಲರೂ ನಮ್ಮ ಮನೆಗೆ ಬಂದ್ರು. ಬೆಳಗ್ಗೆ ಎದ್ದು ನೋಡಿದ್ರೆ ಮನೆಯೂ ಇಲ್ಲ, ಏನೂ ಇಲ್ಲ. ಮನೆ ಇದ್ದ ಜಾಗದಲ್ಲಿ 15 ಅಡಿ ಅಗಲ ನದಿ ಹರಿಯುತ್ತಿತ್ತು. ಆ‌ ನದಿಯಲ್ಲೇ ನನ್ನ ಕುಟುಂಬದವರು ಕೊಚ್ಚಿ ಹೋಗಿದ್ದಾರೆ ಅಂತ ಸುಲ್ಫೀಕರ್ ಅಲಿ ಅಳಲು ತೋಡಿಕೊಂಡ್ರು.

ಇದನ್ನೂ ಓದಿ: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಫಿಟ್​ನೆಸ್ ಇಲ್ಲದಿದ್ರೆ ಗೇಟ್​ಪಾಸ್​.. ಗಂಭೀರ್ ಗುಟುರು!​

ವಯನಾಡನ್ನ ದುರಂತ ಭೂಮಿ ಮಾಡಿದ ಜಲ ಪ್ರವಾಹ ಅಕ್ಷರಶಃ ಜನರ ಬದುಕನ್ನ ಬೀದಿಗೆ ತಳ್ಳಿಬಿಟ್ಟಿದೆ. ಇರಲು ಸೂರಿಲ್ಲ. ರಾತ್ರಿ ಸಿಹಿ ನಿದ್ದೆಯಲ್ಲಿ ಇದ್ದವರು ಚಿರನಿದ್ರೆಗೆ ಜಾರಿದ್ದಾರೆ. ಮಹಾದುರಂತದ ಕರುಣಾಜನ ಕಥೆ ಬಿಚ್ಚಿಟ್ಟ ನಿವಾಸಿ ಗಫರ್​ ಗುಡ್ಡ ಕುಸಿತದಲ್ಲಿ 5 ತಿಂಗಳ ಗರ್ಭಿಣಿಯೂ ತೀರಿ ಹೋಗಿರೋದಾಗಿ ಹೇಳಿದ್ದಾರೆ. ದುರಂತ ಏನಂದ್ರೆ ಗಫರ್ ಕುಟುಂಬ ಮೂರು ಜನ ಕಣ್ಮರೆಯಾಗಿದ್ದು, ಅದ್ರಲ್ಲಿ ಎರಡುವರೆ ವರ್ಷದ ಮಗು ಕೂಡ ನಾಪತ್ತೆ ಆಗಿದೆ ಅಂತ ಪ್ರವಾಹದ ಕರಾಳತೆ ಬಿಚ್ಚಿಟ್ಟಿದ್ದಾರೆ.

ನಂಗೆ ಒಬ್ಬಳು ತಂಗಿ ಇದ್ದಾಳೆ. ಅವಳು, ಅವಳ ಎರಡು, ಮೂವರು ಮಕ್ಕಳು ಮತ್ತು ಗಂಡ ಪ್ರವಾಹದಲ್ಲಿ ಹೋಗಿದ್ದಾರೆ. ನಿನ್ನೆ ಸಿಕ್ಕಿದ್ದಾಳೆ. ಅವಳು ಹೆಸ್ರು ಜುಬೇರಿಯಾ. ಪ್ರಾಯ 31.. ಅವಳಿಗಿರೋದು ತುಂಬಾ ಸಣ್ಣ ಸಣ್ಣ ಮಕ್ಕಳು.. ಅವಳು 5 ತಿಂಗಳ ಗರ್ಭಿಣಿ ಅವಳು ಸಾವನ್ನಪ್ಪಿದ್ದಾಳೆ. ಕಾರ್ಯ ಎಲ್ಲ ನಡೆದಿದೆ.. ಇನ್ನೊಂದು ಕಡೆ ಡೌಟ್​ ಅಂದ್ರೆ ಚಿಕ್ಕ ಮಗ ನಿಲಂಬೂರಿನಲ್ಲಿ ಸಿಕ್ಕಿರೋದು ಅಂತ.

ಗಫರ್, ಘಟನೆ ನಡೆದ ಸ್ಥಳದ ನಿವಾಸಿ

ಗಫರ್ ಮಗಳನ್ನ ಮೈಸೂರಿಗೆ ಮದುವೆ ಮಾಡಿ ಕೊಡಲಾಗಿದೆ. ಹೀಗಾಗಿ ಗಫರ್ ಮಗಳನ್ನ ನೋಡೊದಕ್ಕೆ ಅಂತ ಮೈಸೂರಿಗೆ ಹೋಗಿದ್ರು. ಮೈಸೂರಿನಿಂದ ವಾಪಸ್ ಬಂದು ನೋಡಿದ್ರೆ ಈ ದುರಂತ ನಡೆದು ಹೋಗಿದೆ. ಈ ದುರಂತಕ್ಕೆ ರೆಸಾರ್ಟ್ ಹೋಂ ಸ್ಟೇಗಳೇ ಕಾರಣ. ಹಣ‌ ಮಾಡುವ ನೆಪದಲ್ಲಿ ವೈನಾಡನ್ನ ಹಾಳು ಮಾಡಿದ್ದಾರೆ ಅಂತ ಗಫರ್ ಆಕ್ರೋಶ ಹೊರ ಹಾಕಿದ್ದಾರೆ.

ಮೃತದೇಹಗಳನ್ನು ಬೇಗ ಕೊಡಿ’ ಅಂತ ಕಣ್ಣೀರಿಟ್ಟ ಸಂಬಂಧಿ

ರಣ ಭೀಕರ ಜಲಭೂ ಪ್ರಳಯಕ್ಕೆ ಮುಜೀಬ್​ ಎಂಬಾತ ಕುಟುಂಬದ 17 ಮಂದಿಯನ್ನ ಕಳೆದುಕೊಂಡಿದ್ದಾನೆ. ಪ್ರವಾಹದಲ್ಲಿ ಕುಟುಂಬದ 20 ಮಂದಿ ಕೊಚ್ಚಿ ಹೋಗಿದ್ರು. ಅದರಲ್ಲಿ 2 ಮಕ್ಕಳು ಹಾಗೂ ಒಬ್ಬ ಮಹಿಳೆಯ ಮೃತದೇಹಗಳನ್ನ ಪತ್ತೆ ಹಚ್ಚಲಾಗಿದೆ. ಆದ್ರೆ ಇನ್ನುಳಿದ 17 ಮಂದಿ ಪತ್ತೆ ಆಗಿಲ್ಲ. ಈಗಾಗಲೇ ಕಮ್ಯೂನಿಟಿ ಹಾಲ್​ಗೆ ಮೃತದೇಹಗಳು ಬಂದಿದ್ದು, ನಮ್ಮ ಕುಟುಂಬಸ್ಥರ ಮೃತದೇಹಗಳನ್ನು ಬೇಗ ಕೊಡಿ ಅಂತ ಸಂಬಂಧಿ ಅಳಲು ತೋಡಿಕೊಂಡಿದ್ದಾರೆ.

ನಮ್ಮ ಕುಟುಂಬದಲ್ಲಿ ಒಟ್ಟು 20 ಜನರು ಕಾಣೆಯಾಗಿದ್ದಾರೆ. ಅದ್ರಲ್ಲಿ ಒಂದು ಮಗು ಮತ್ತು ಓರ್ವ ಮಹಿಳೆ ಸಿಕ್ಕಿದ್ದು, ಅವರ ಮೃತದೇಹಗಳನ್ನ ನಾವು ಅಂತ್ಯ ಸಂಸ್ಕಾರ ಮಾಡಿದ್ದೇವೆ. ಇನ್ನು 17 ಜನರನ್ನ ನಾವು ಕಂಡು ಹಿಡಿಯಬೇಕಿದೆ. ಇನ್ನು ನಿಲಂಬೂರ್​ನಲ್ಲಿ ತುಂಬಾ ಮೃತದೇಹಗಳು ಇದೆ ಅಂತ ಹೇಳಿದ್ದು, ಆ ಎಲ್ಲ ಮೃತದೇಹಗಳನ್ನ ಇಲ್ಲಿಗೆ ತರುವಂತಹ ವ್ಯವಸ್ಥೆಯನ್ನ ಸರ್ಕಾರ ಕಲ್ಪಿಸಿಕೊಟ್ರೆ, ನಮಗೆ ಅದರಲ್ಲಿ ನಮ್ಮ ಕುಟುಂಬಕ್ಕೆ ಸೇರಿರೋ ಯಾರಾದ್ರೂ ಇದ್ದಲ್ಲಿ, ಪತ್ತೆ ಮಾಡಬಹುದಿತ್ತು. ಹೀಗಾಗಿ ಅದಕ್ಕೆ ಸರ್ಕಾರ ಬೇಗ ಆ ಮೃತದೇಹಗಳನ್ನ ಇಲ್ಲಿಗೆ ತರಲಿ ಅನ್ನೋದು ನಮ್ಮ ಬೇಡಿಕೆ.

ಮುಜೀಬ್, ಕುಟುಂಬದ 17 ಜನರನ್ನ ಕಳೆದುಕೊಂಡ ವ್ಯಕ್ತಿ

ಅಮ್ಮ, ಅಪ್ಪ ಎಲ್ಲಿ..’ ತಂಗಿಯ ಶವದ ಮುಂದೆ ಅಕ್ಕ ರೋದನೆ

ವಯನಾಡಿನ ಮರಣ ಮಳೆಯಿಂದಾಗಿ ಮದುವೆ ಮನೆಯೊಂದು ಸೂತಕದ ಮನೆಯಾಗಿದೆ. ವಯನಾಡಿನ ಶಿವಣ್ಣ-ಸಬೀತಾ ದಂಪತಿ ಮನೆಯಲ್ಲಿ ಒಟ್ಟು 7 ಮಂದಿ ಅನೋನ್ಯವಾಗಿದ್ದರು. ಹಿರಿಯ ಮಗಳು ಶ್ರುತಿ ಮದುವೆ ನಡೆಯಬೇಕಿದ್ದರಿಂದ ಅದೇ ಸಂಭ್ರಮದಲ್ಲೇ ರಾತ್ರಿ ಊಟ ಮಾಡಿ ಮಲಗಿದ್ರು. ಚುರಲ್ಮಳದಲ್ಲಿರುವ ವೆಲ್ಲರ್ಮಲಾ ಶಾಲೆ ಬಳಿಯೇ ಶಿವಣ್ಣ ದಂಪತಿ ಮನೆ ಇತ್ತು. ಚುರಲ್ಮಳದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಶಿವಣ್ಣ ಕುಟುಂಬದ 7 ಮಂದಿ ನಾಪತ್ತೆ ಆಗಿದ್ದರು. ಅದ್ರಲ್ಲಿ ಶಿವಣ್ಣನ ಕಿರಿಯ ಮಗಳು ಶವವಾಗಿ ಸಿಕ್ಕಿದ್ದಾಳೆ. ಮದುಮಗಳು ಶ್ರುತಿ ಹೇಗೋ ಪ್ರಾಣ ಸಂಕಟಕ್ಕೆ ಸಿಲುಕಿ ಅಪಾಯದಿಂದ ಪಾರಾಗಿದ್ದು, ತಂಗಿ ಶವ ನೋಡಿ ಕಣ್ಣೀರು ಇಡುತ್ತಿದ್ದಾಳೆ. ಕೋಝಿಕೋಡ್​ನ ಮಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ತಂಗಿಯ ಶವದ ಮುಂದೆ ರೋದಿಸುತ್ತಿದ್ದು, ಅಪ್ಪ, ಅಮ್ಮ, ಅಜ್ಜಿ, ಅಜ್ಜನ ಬರುವಿಕೆಗಾಗಿ ಕಾಯುತ್ತಿದ್ದಾಳೆ.

ಇದನ್ನೂ ಓದಿ: ಕೇರಳ CM ಮನಸು ಮಾಡಿದ್ರೆ ಈ ದುರಂತ ತಪ್ಪಿಸಬಹುದಿತ್ತು; ಅಮಿತ್ ಶಾ ಶಾಕಿಂಗ್ ಮಾಹಿತಿ ಬಹಿರಂಗ

ಮಹಾ ದುರಂತಕ್ಕೆ ವಯನಾಡಿನ ಜನರ ನಿಜಕ್ಕೂ ತತ್ತರಿಸಿ ಹೋಗಿದ್ದಾರೆ. ಬದುಕೇ ದುಸ್ತರವಾಗಿದ್ದು ಇದ್ದ ಸೂರು ಮಣ್ಣುಪಾಲಾಗಿದೆ. ಭವಿಷ್ಯಕ್ಕೆ ಕಾರ್ಮೋಡ ಆವರಿಸಿದ್ದು, ಮುಂದೇನು ಅನ್ನೋ ಆತಂಕದಲ್ಲೇ ಕಾಲ ದೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

https://newsfirstlive.com/wp-content/uploads/2024/07/KERALA_1.jpg

Load More