newsfirstkannada.com

ವಯನಾಡು ದುರಂತದ ಬಗ್ಗೆ ಗಿಣಿ ನುಡಿದಿತ್ತು ಭವಿಷ್ಯ.. ಪುಟಾಣಿ ಹುಡುಗಿ ಬರೆದಿದ್ದ ಕತೆ ನಿಜವಾಗಿಬಿಡ್ತು..!

Share :

Published August 5, 2024 at 10:36am

Update August 5, 2024 at 1:01pm

    ಅದು ರಿಯಲ್​ ಗಿಳಿ ಅಲ್ಲ.. ಆ ಹುಡುಗಿ ಬರೆದಿದ್ದ ಕಥೆಯ ಗಿಳಿ!

    ‘ನೀವೆಲ್ಲಾ ಓಡಿ ಹೋಗಿ.. ಈ ನದಿ ನಿಮ್ಮನ್ನು ನುಂಗಿ ಹಾಕುತ್ತೆ’

    ವರ್ಷದ ಹಿಂದೆ ಅವಳು ಬರೆದಿದ್ದ ಕಥೆ ನಿಜವಾಗಿದ್ದು ಹೇಗೆ!?

ರಕ್ಕಸ ಜಲ ಪ್ರಳಯಕ್ಕೆ ಸುಂದರ ವಯನಾಡು ಭಯದ ನಾಡಾಗಿ ಮಾರ್ಪಟ್ಟಿದೆ. ಎತ್ತ ನೋಡಿದ್ರೂ ಮೃತ ದೇಹಗಳು. ಒಂದಷ್ಟು ದೇಹಕ್ಕೆ ಕೈ ಇಲ್ಲ.. ಕಾಲಿಲ್ಲ.. ಮುಂಡವಿಲ್ಲ.. ರುಂಡವಿಲ್ಲ.. ಮಕ್ಕಳು, ಮಹಿಳೆಯರು ನಿರ್ದಯಿ ಗುಡ್ಡದ ಭೂತಕ್ಕೆ ಬರ್ಬರವಾಗಿ ಬಲಿಯಾಗಿದ್ದಾರೆ.. ಇಂಥದ್ದೊಂದು ದುರಂತಕ್ಕೆ ಪ್ರಕೃತಿ ಮುನ್ಸೂಚನೆ ನೀಡಿ ಎಚ್ಚರಿಸಿತ್ತು. ಅಷ್ಟೇ ಅಲ್ಲ, ಅದೊಂದು ಗಿಣಿ ಗುಡ್ಡದ ಭೂತದ ಶಾಸ್ತ್ರ ನುಡಿದ ಎಚ್ಚರಿಸಿತ್ತಾ? ಹೌದು ಎನ್ನುತ್ತಿದೆ ಒಂದು ಶಾಲೆ!

ಪ್ರಳಯದ ಭವಿಷ್ಯ ನುಡಿದಿತ್ತಾ ಒಂದು ಪುಟ್ಟ ಗಿಳಿ!?
ಘನ ಘೋರ ಭೂಕುಸಿತ ಬೆನ್ನಲ್ಲೇ ವೆಲ್ಲಾರ್​ಮಲಾದ ಸರ್ಕಾರಿ ವೃತ್ತಿಪರ ಪ್ರೌಢಶಾಲೆ ಭಾರೀ ಸುದ್ದಿಯಲ್ಲಿದೆ. ಕಾರಣ 2023ರಲ್ಲಿ ಇದೇ ಸ್ಕೂಲ್ ‘ಲೀಟಲ್ ಕೈಟ್ಸ್’ ಪುಸ್ತಕವೊಂದನ್ನು ಹೊರತಂದಿತ್ತು. ಈ ಪುಸ್ತಕದಲ್ಲಿ ಲಯ ಅನ್ನೋ ವಿದ್ಯಾರ್ಥಿನಿಯ ಕತೆ ಪ್ರಕಟವಾಗಿದೆ. ಆ ಕತೆಯಲ್ಲಿ ಗಿಣಿಯೊಂದು ವಯನಾಡಿನ ಪ್ರಳಯದ ಬಗ್ಗೆ ಭವಿಷ್ಯ ನುಡಿದಿತ್ತು. ಇಂದು ಆ ಕತೆಯಲ್ಲಿ ಬಂದಿದ್ದ ಭವಿಷ್ಯ ಸತ್ಯವಾಗಿದೆ. 8ನೇ ಕ್ಲಾಸ್​ ಹುಡುಗಿ ಬರೆದ ಕಥೆ ಇದೀಗ ಬಹುದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ.

ಇದನ್ನೂ ಓದಿ:ಮ್ಯಾಕ್ಸ್​ವೆಲ್​ಗೆ ಗೇಟ್​ಪಾಸ್.. ರಿಲೀಸ್​​ಗೆ ಇಲ್ಲಿದೆ ಪ್ರಮುಖ 3 ಕಾರಣ..!

ಇದೇ ಕಾರಣಕ್ಕೆ ಮುಖ್ಯ ಶಿಕ್ಷಕ ಉನ್ನಿಕೃಷ್ಣನ್ ತಮ್ಮ ವಿದ್ಯಾರ್ಥಿಗಳನ್ನು ನೆನೆದು ಕಣ್ಣೀರು ಇಡ್ತಿದ್ದಾರೆ. ಒಂದು ಗಿಣಿ ವಯನಾಡಿನಲ್ಲಿ ಇಂಥದ್ದೊಂದು ದುರಂತ ಸಂಭವಿಸುತ್ತೆ ಅನ್ನೋ ಭವಿಷ್ಯ ನುಡಿದಿತ್ತು ಎಂದು ಕಣ್ಣೀರು ಇಡ್ತಿದ್ದಾರೆ. ‘ನೀವೆಲ್ಲಾ ಓಡಿ ಹೋಗಿ.. ಇಲ್ಲದಿದ್ರೆ, ಈ ನದಿ ನಿಮ್ಮನ್ನು ನುಂಗಿ ಹಾಕುತ್ತೆ..’ ಇಲ್ಲದಿದ್ರೆ ದುರಂತ ಗ್ಯಾರಂಟಿ ಅನ್ನೋ ಇದೇ ಮಾತುಗಳನ್ನೇ, ಇದೇ ಭವಿಷ್ಯವಾಣಿಯನ್ನೇ ಅದೊಂದು ಗಿಣಿ ಹೇಳಿತ್ತು ಎಂದಿದ್ದಾರೆ..

ಲಯ ಬರೆದ ಕತೆ ಏನು..?
ಮ್ಯಾಗಜಿನ್​ ಓಪನ್ ಮಾಡಿದರೆ ಲಯ ಬರೆದ ‘ಆಗ್ರಹತಿಂತೆ ದುರಾನುಭವಂ’ ಅನ್ನೋ ಕಥೆ ಕಾಣಿಸುತ್ತದೆ. ಒಮ್ಮೆ ಆ ಕಥೆಯನ್ನು ಓದಿಬಿಟ್ರೆ ಅಚ್ಚರಿ ಮೂಡುತ್ತದೆ. ಕಾರಣ 1 ವರ್ಷಕ್ಕೆ ಮುಂಚೆಯೇ ಲಯ ವಯನಾಡಿನ ಪ್ರಳಯದ ಭವಿಷ್ಯವನ್ನು ನುಡಿದಿದ್ದಾಳೆ. ಅದ್ರಲ್ಲೂ ಆ ಕಥೆಯೇ ಒಂದು ಭಯಾನಕ ಅನುಭವವನ್ನ ತೆರೆದಿಡುತ್ತದೆ. ಅಷ್ಟಕ್ಕೂ ಆಗ್ರಹತಿಂತೆ ದುರಾನುಭವಂ ಅಂದ್ರೇನು ಗೊತ್ತಾ? ಆಸೆಯೇ ದುಃಖಕ್ಕೆ ಮೂಲ ಅನ್ನೋ ಸಾರವಿದು.

ಕಥೆ..

ಮುದ್ದಾದ ಪುಟ್ಟ ಹುಡುಗಿಯೊಬ್ಬಳು ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರ್ತಾಳೆ. ಸಾವಿನ ಬಳಿಕ ಆ ಹುಡುಗಿ ಮುದ್ದಾದ ಗಿಳಿಯ ರೂಪದಲ್ಲಿ ಪುನರ್ಜನ್ಮ ಪಡೆದು ಬರುತ್ತಾಳೆ. ಮಾತಾಡುವ ಈ ಮುದ್ದಿನ ಗಿಣಿ ಹಲವು ಭವಿಷ್ಯಗಳನ್ನು ನುಡಿಯುತ್ತಿತ್ತು. ಒಂದೂರಿನಲ್ಲಿ ಅಲಂಕೃತಾ ಹಾಗೂ ಅನುಸ್ವರ ಅನ್ನೋ ಗೆಳತಿಯರಿದ್ದರು. ದಿನವೂ ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದರು. ಒಂದು ದಿನ ಅಲಂಕೃತಾ ಹಾಗೂ ಅನುಸ್ವರ ಪ್ರವಾಸ ಕೈಗೊಳ್ಳಲು ಯೋಜನೆ ರೂಪಿಸುತ್ತಾರೆ. ಮನೆಯವರಿಗೂ ಹೇಳದೇ ಒಂದು ನದಿ ದಂಡೆಗೆ ಪ್ರವಾಸಕ್ಕೆ ಬರುತ್ತಾರೆ. ನದಿಯ ದಂಡೆಯಲ್ಲಿ ಇಬ್ಬರು ಖುಷಿಯಿಂದ ಓಡಾಡುತ್ತಿದ್ದರು. ಹೀಗೆ ಜಲಪಾತದ ಸೊಬಗನ್ನು ಸವಿಯುತ್ತಿರುವಾಗ ಭವಿಷ್ಯ ನುಡಿವ ಗಿಣಿ ಅಲ್ಲಿಗೆ ಹಾರಿ ಬಂದಿತು. ಚೆಂದದ ಗಿಣಿ ಅಸಾಮಾನ್ಯವಾಗಿತ್ತು; ಅದು ಮಾತನಾಡುತ್ತಿತ್ತು.

ಇದನ್ನೂ ಓದಿ:ಲಂಕಾ ವಿರುದ್ಧ ಸೋಲ್ತಿದ್ದಂತೆ ಗಂಭೀರ್ ಮೇಲೆ ಭುಗಿಲೆದ್ದ ಆಕ್ರೋಶ.. ವಜಾ ಮಾಡುವಂತೆ ಆಗ್ರಹ

ಮಕ್ಕಳನ್ನು ಕಂಡ ಗಿಳಿಯು, ‘ಮಕ್ಕಳೇ, ಬೇಗ ಇಲ್ಲಿಂದ ಪಾರು. ದೊಡ್ಡ ಅಪಾಯ ಬರಲಿದೆ. ನೀವು ಸುರಕ್ಷಿತವಾಗಿರಬೇಕಾದರೆ ಕೂಡಲೇ ಇಲ್ಲಿಂದ ಓಡಿ ಹೋಗಿ’ ಎಂದು ಹೇಳಿತ್ತು. ಹೀಗೆ ಹೇಳಿದ ಮೇಲೆ ಗಿಳಿ ಅಲ್ಲಿಂದ ಹಾರಿಹೋಯಿತು. ಗಿಳಿಯ ಎಚ್ಚರಿಕೆಯನ್ನು ಅರ್ಥಮಾಡಿಕೊಂಡ ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಲು ಪ್ರಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಊರಿಗೆ ಊರೇ ಜಲ ಪ್ರಳಯಕ್ಕೆ ಸಿಕ್ಕಿ, ಗುಡ್ಡು ಕುಸಿತಕ್ಕೆ ಬಲಿಯಾಗಿ ಸರ್ವನಾಶವಾಗುತ್ತದೆ.

ಆ ಗೆಳತಿಯರಿಬ್ಬರು ಓಡುತ್ತಾ ತಿರುಗಿ ನೋಡಿದರು ಎಲ್ಲೆಲ್ಲೂ ನೀರು.. ಕತ್ತರಿಸೋಕೆ ನುಗ್ಗುತ್ತಿರುವ ಕಲ್ಲು ಬಂಡೆಗಳು ಕಂಡವು. ಕೆಲವೇ ಕ್ಷಣಗಳಲ್ಲೇ ಭವಿಷ್ಯ ನುಡಿಯುವ ಗಿಣಿ ಸುಂದರ ಬಾಲಕಿಯಾಗಿ ಪರಿವರ್ತನೆಗೊಳ್ಳುವುದನ್ನು ಕಂಡರು.. ಆ ಸುಂದರ ಹುಡುಗಿ ಮತ್ತಷ್ಟು ಜನರನ್ನು ಅಪಾಯದಿಂದ ಪಾರು ಮಾಡುವುದಕ್ಕಾಗಿ ಎಚ್ಚರಿಸಲು ಅನುವಾದಳು. ಹುಡುಗಿಯೊಬ್ಬಳು.. ಗಿಣಿಯಾಗಿ.. ಮತ್ತೆ ಹುಡುಗಿಯಾಗಿ ಗುಡ್ಡದ ಭೂತದ ಗಿಣಿ ಶಾಸ್ತ್ರ ಹೇಳಿದ ರೋಚಕ ಕಥೆಯನ್ನು ಲಯ ಬರೆದಿದ್ದಳು. ವರ್ಷಕ್ಕೆ ಮುಂಚೆಯೇ ಇಂಥದ್ದೊಂದು ಕಥೆಯನ್ನು ಲಯ ಬರೆದು ಎಚ್ಚರಿಸಿದ್ದಳು ಅನ್ನೋ ಸಂಗತಿಯನ್ನು ಈ ಕ್ಷಣಕ್ಕೂ ವೆಲ್ಲಾರ್​ಮಲಾ ಶಾಲೆಯ ಶಿಕ್ಷಕ ವೃಂದ ನೆನಪು ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ:ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ

ಕಳೆದ ವರ್ಷ ಮಕ್ಕಳಿಗೆ ಮ್ಯಾಗಜೀನ್​ ಮಾಡಿ ಅಂತ ಹೇಳಿದ್ವಿ. ಈ ವೇಳೆ ಲಯ ಎಂಬ ಹುಡುಗಿ ಹಕ್ಕಿಯೊಂದು ಬಂದು ಭವಿಷ್ಯ ಹೇಳುವ ಕಥೆ ಬರೆದಿದ್ಳು.. ಅದರಲ್ಲಿ ನೀವೆಲ್ಲಾ ಇಲ್ಲಿಂದ ತಪ್ಪಿಸಿಕೊಳ್ಳಿ.. ಈ ನದಿ ನಿಮ್ಮನ್ನು ನುಂಗಿ ಹಾಕುತ್ತೆ ಅಂತ ಹೇಳಿತ್ತು. ಬಳಿಕ ಆ ಪಕ್ಷಿ ಹಾರಿ ಹೋಗುತ್ತೆ.. ಅದೇ ಬಳಿಕ ಹುಡುಗಿಯಾಗಿ ಪುನರ್ಜನ್ಮ ಎತ್ತಿ ಬರುತ್ತಾಳೆ. ಹೀಗೆ ಕಥೆಯ ಆರಂಭದಲ್ಲಿ ಬರೆದಿದ್ಳು ಲಯ.. ಇದೀಗ ಆಕೆಯನ್ನು ನೆನೆಪಿಸಿಕೊಂಡ್ರೆ ಬೇಸರವಾಗುತ್ತದೆ. ಈ ದುರಂತದಲ್ಲಿ ಆಕೆ ತನ್ನ ತಂದೆಯನ್ನು ಕಳೆದುಕೊಂಡಿದ್ದಾಳೆ-ಶಿಕ್ಷಕ ಉನ್ನಿಕೃಷ್ಣನ್

ಅಪ್ಪನ ಕಳೆದುಕೊಂಡ ಲಯ
ಲಯ ಹಾಗೂ ಅವಳ ಕಥೆಯ ಬಗ್ಗೆ ಇದೀಗ ಎಲ್ಲರೂ ಮಾತಾಡ್ತಿದ್ದಾರೆ. ವರ್ಷಕ್ಕೆ ಮುಂಚೆಯೇ ಇಂಥದ್ದೊಂದು ಸುಳಿವು ಕೊಟ್ಟಿದ್ದ ಲಯ ಎಲ್ಲಿದ್ದಾಳೆ? ಆಕೆಯೂ ಜಲ ಪ್ರಳಯಕ್ಕೆ ಸಿಕ್ಕಿ ನಲುಗಿದ್ಳಾ ಅನ್ನೋ ಪ್ರಶ್ನೆಗಳು ಎದ್ದಿದ್ದವು.. ಆದ್ರೀಗ ಖುದ್ದು ಶಿಕ್ಷಕರೇ ಆಕೆ ಸೇಫಾಗಿದ್ದಾಳೆ ಅನ್ನೋ ಮಾತಾಡ್ತಿದ್ದಾರೆ.. ಒಂದು ಬೇಸರದ ಸಂಗತಿ ಅಂದ್ರೆ ಕಥೆಯ ಮೂಲಕ ಎಲ್ಲರನ್ನೂ ಎಚ್ಚರಿಸಿದ್ದ ಲಯ ಅಪ್ಪನನ್ನ ಕಳೆದುಕೊಂಡಿದ್ದಾಳೆ.

ಅವರ ಕುಟುಂಬವನ್ನು ರಕ್ಷಿಸುವ ಸಾಹಸದ ಮಧ್ಯೆ ಲಯ ಅಪ್ಪ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ. ಅದ್ಯಾವುದೋ ಗಿಣಿಯ ಮೂಲಕ ಎಲ್ಲರನ್ನೂ ಅಚ್ಚರಿಸಿದ್ದ ಲಯ ತನ್ನಪ್ಪನ ಅಚ್ಚುಮೆಚ್ಚಿನ ಮಗಳೂ ಆಗಿದ್ದಳು. ಚೆನ್ನಾಗಿ ಓದುತ್ತಿದ್ದ ಮಗಳ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ಅಪ್ಪ. ಗುಡ್ಡದ ಭೂತ ಹಾಗೂ ಜಲ ಪ್ರಳಯ ಲಯ ಬದುಕಿನ ಆಸರೆಯನ್ನೇ ನುಂಗಿ ಹಾಕಿದೆ. ಇತ್ತೀಚೆಗೆ ವೆಲ್ಲಾರ್​ಮಲಾದಲ್ಲಿ ಶಾಲೆಯಿಂದ ಮೆಪ್ಪಾಡಿ ಶಾಲೆಗೆ ವರ್ಗಾ ಮಾಡಿಸಿಕೊಂಡು ಹೋಗಿದ್ದಳು ಲಯ. ಲಯ ಹಾಗೂ ಆಕೆಯ ಅಮ್ಮನನ್ನು ರಕ್ಷಿಸಿದ್ದ ಅಪ್ಪ ಈಗ ಇಲ್ಲ. ಲಯ ಹಾಗೂ ಅಮ್ಮ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ:ಮ್ಯಾಕ್ಸ್​ವೆಲ್, ಆಕಾಶ್ ದೀಪ್​ಗೆ ಗೇಟ್​ಪಾಸ್; RCB ಮತ್ತೆ ಖರೀದಿಸುವ 5 ಆಟಗಾರರ ಲಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಯನಾಡು ದುರಂತದ ಬಗ್ಗೆ ಗಿಣಿ ನುಡಿದಿತ್ತು ಭವಿಷ್ಯ.. ಪುಟಾಣಿ ಹುಡುಗಿ ಬರೆದಿದ್ದ ಕತೆ ನಿಜವಾಗಿಬಿಡ್ತು..!

https://newsfirstlive.com/wp-content/uploads/2024/08/GIRL-LAYA-2.jpg

Load More