newsfirstkannada.com

×

Video: ದೇವರ ಮೆರವಣಿಗೆ ಸಾಗೋವರೆಗೂ ವಿಮಾನ ಹಾರಂಗಿಲ್ಲ; ಶತಮಾನದ ಈ ಆಚರಣೆಯೇ ರೋಚಕ!

Share :

Published October 23, 2023 at 8:38pm

    ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆ ಸಾಗುವಾಗ ವಿಮಾನ ಹಾರಾಟ ಸ್ಥಗಿತ

    ಪ್ರತಿ ಎರಡು ವರ್ಷಕ್ಕೊಮ್ಮೆ ವಿಗ್ರಹಗಳ ಪವಿತ್ರ ಸ್ನಾನಕ್ಕಾಗಿ ಈ ಮೆರವಣಿಗೆ

    ರನ್‌ವೇಯನ್ನು ಪುನರ್‌ ಪರಿಶೀಲನೆ ನಡೆಸಿದ ಬಳಿಕ ವಿಮಾನ ಸೇವೆ ಆರಂಭ

ತಿರುವನಂತಪುರಂ: ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಾಲಯ ಅಚ್ಚರಿಗಳ ಭಂಡಾರ. ದೇವಸ್ಥಾನದ ನೆಲಮಹಡಿಯಲ್ಲಿರುವ ಸಂಪತ್ತು ಇಂದಿಗೂ ಅನೇಕರಿಗೆ ಅರ್ಥವಾಗಿಲ್ಲ. ಅಪಾರ ಸಂಪತ್ತಿನ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಸಾಕಷ್ಟು ನಿಗೂಢ ಹಾಗೂ ಅಚ್ಚರಿಯ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಇದರಲ್ಲಿ ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಈ ಅರಟ್ಟು ಮೆರವಣಿಗೆಯೂ ಒಂದು.

ಪ್ರತಿ 2 ವರ್ಷಕ್ಕೊಮ್ಮೆ ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆ ಸಾಗುತ್ತದೆ. ಇದಕ್ಕೆ ಅರಟ್ಟು ಎಂದು ಕರೆಯಲಾಗುತ್ತದೆ. ಮತ್ತೊಂದು ವಿಶೇಷ ಏನಂದ್ರೆ ಈ ಮೆರವಣಿಗೆ ಸಾಗುವುದು ತಿರುವನಂತಪುರಂನ ವಿಮಾನದ ರನ್‌ವೇನಲ್ಲಿ. ಹೀಗಾಗಿಯೇ 5 ಗಂಟೆಗಳ ಕಾಲ ಇಲ್ಲಿ ವಿಮಾನ ಹಾರಾಟವನ್ನೇ ಸ್ಥಗಿತಗೊಳಿಸಲಾಗುತ್ತದೆ. ಇಂದೂ ಕೂಡ ಪದ್ಮನಾಭಸ್ವಾಮಿಯ ಅರಟ್ಟು ಮೆರವಣಿಗೆ ಸಾಗಿದ ಹಿನ್ನೆಲೆ 5 ಗಂಟೆಗಳ ಕಾಲ ಇಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯವನ್ನೇ ಸ್ಥಗಿತಗೊಳಿಸಲಾಗಿದೆ.

ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆ ಸಾಗುವಾಗ ವಿಮಾನ ಹಾರಾಟ ಸ್ಥಗಿತಗೊಳ್ಳುವ ಪದ್ಧತಿ ಶತಮಾನಗಳಿಂದಲೂ ಇದೆ. ಪ್ರತಿ ಎರಡು ವರ್ಷಕ್ಕೊಮ್ಮೆ ವಿಗ್ರಹಗಳ ಪವಿತ್ರ ಸ್ನಾನಕ್ಕಾಗಿ ಈ ಮೆರವಣಿಗೆ ಮಾಡಲಾಗುತ್ತದೆ. ಶಂಗುಮುಖಂ ಕಡಲತೀರವನ್ನು ತಲುಪಲು ದೇವರ ಮೆರವಣಿಗೆ ತಿರುವನಂತಪುರಂ ರನ್‌ವೇ ಮಾರ್ಗದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ರನ್‌ವೇಯನ್ನು ಪರಿಶೀಲನೆ ನಡೆಸಿದ ಬಳಿಕ ವಿಮಾನ ಸೇವೆಯನ್ನು ಆರಂಭಿಸಲಾಗುತ್ತದೆ. 1932ರಲ್ಲಿ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದ್ರು ಅದಕ್ಕಿಂತಲೂ ಮುಂಚೆಯೇ ಪ್ರತಿ ಎರಡು ವರ್ಷಕ್ಕೊಮ್ಮೆ ಈ ಮಾರ್ಗದಲ್ಲಿ ದೇವರ ಮೆರವಣಿಗೆ ಹೋಗುವ ಸಂಪ್ರದಾಯವಿದೆ. ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಈ ಆಚರಣೆಯನ್ನೇ ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Video: ದೇವರ ಮೆರವಣಿಗೆ ಸಾಗೋವರೆಗೂ ವಿಮಾನ ಹಾರಂಗಿಲ್ಲ; ಶತಮಾನದ ಈ ಆಚರಣೆಯೇ ರೋಚಕ!

https://newsfirstlive.com/wp-content/uploads/2023/10/Thiruvanthapuram.jpg

Load More