Advertisment

ವಿಶ್ವಕಪ್ ಫೈನಲ್ ಕ್ಯಾಚ್ ವಿವಾದಕ್ಕೆ ಟ್ವಿಸ್ಟ್.. ದೊಡ್ಡ ಹೇಳಿಕೆ ಕೊಟ್ಟ ದಕ್ಷಿಣ ಆಫ್ರಿಕಾ ಆಟಗಾರ

author-image
Ganesh
Updated On
ವಿಶ್ವಕಪ್ ಫೈನಲ್ ಕ್ಯಾಚ್ ವಿವಾದಕ್ಕೆ ಟ್ವಿಸ್ಟ್.. ದೊಡ್ಡ ಹೇಳಿಕೆ ಕೊಟ್ಟ ದಕ್ಷಿಣ ಆಫ್ರಿಕಾ ಆಟಗಾರ
Advertisment
  • ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್​ ಬಗ್ಗೆ ಚರ್ಚೆ
  • ಜೂನ್ 29 ರಂದು ಭಾರತ ಟಿ20 ವಿಶ್ವಕಪ್​​ಗೆ ಮುತ್ತಿಟ್ಟಿದೆ
  • ವಿಶ್ವಕಪ್​​​ ಗೆದ್ದ ಬೆನ್ನಲ್ಲೇ ಭಾರೀ ಚರ್ಚೆಯಲ್ಲಿದೆ ಆ ಕ್ಯಾಚ್

ಜೂನ್ 9 ರಂದು ನಡೆದ ವಿಶ್ವಕಪ್ ಫೈನಲ್​​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​​ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಆಗಿದೆ. ರೋಹಿತ್ ಪಡೆ ವಿಶ್ವಕಪ್ ಗೆಲ್ಲಲು ಕಾರಣ ಕೊನೆಯ ಓವರ್​ನಲ್ಲಿ ಸೂರ್ಯ ಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ ಅನ್ನೋದನ್ನ ಯಾರೂ ಮರೆಯುವಂತಿಲ್ಲ.

Advertisment

ಸೂರ್ಯ ತೆಗೆದುಕೊಂಡ ಡೇವಿಡ್ ಮಿಲ್ಲರ್ ಅವರ​ ಕ್ಯಾಚ್​ ಭಾರೀ ಚರ್ಚೆಯಲ್ಲಿದೆ. ಸೂರ್ಯ ಅವರು ಕ್ಯಾಚ್​ ಪಡೆಯುವ ಸಂದರ್ಭದಲ್ಲಿ ಬೌಂಡರಿ ಲೈನ್ ಟಚ್ ಆಗಿದೆ ಎಂದು ಕೆಲವರು ಹೇಳ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಸೂರ್ಯ ಬೌಂಡರಿ ಲೈನ್ ಟಚ್ ಮಾಡದೇ ಇರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ.

ಇದನ್ನೂ ಓದಿ:ಮೂರು ಕ್ಯಾಚ್.. ಮೂರು ವಿಶ್ವಕಪ್.. ಇವರು ಹಿಡಿದಿದ್ದು ಬರೀ ಕ್ಯಾಚ್ ಅಲ್ಲ, ವಿಶ್ವ ಕಿರೀಟ..!

ಈ ನಡುವೆ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಸ್ಪಿನ್ನರ್ ಕೇಶವ್ ಮಹಾರಾಜ್ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಎಚ್ಚರದಿಂದ ಇರಬೇಕು. ಅಂದಿನ ನಿರ್ಧಾರವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ ಸೋಲಿನಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಯಾವುದೇ ನಿರ್ಧಾರ ತೆಗೆದುಕೊಂಡರೂ, ತೆಗೆದುಕೊಳ್ಳದೇ ಇದ್ದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನಕಾರಾತ್ಮಕ ವಿಷಯಗಳ ಬಗ್ಗೆ ಚರ್ಚಿಸೋದ್ರಿಂದ ಪ್ರಯೋಜನ ಇಲ್ಲ. ನಾವು ಚರ್ಚೆ ಮಾಡಬೇಕಾಗಿರೋದು ತುಂಬಾ ಇದೆ. ನಡೆದದ್ದನ್ನು ಮರೆತು ಮುನ್ನಡೆಯಬೇಕು ಎಂದಿದ್ದಾರೆ.

Advertisment

ಕೊನೆಯ ಓವರ್..!
ಫೈನಲ್​​​​ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 176 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾಗೆ ಕೊನೆಯ ಓವರ್‌ನಲ್ಲಿ ಗೆಲ್ಲಲು 16 ರನ್ ಬೇಕಿತ್ತು. ಪಾಂಡ್ಯ ಬೌಲಿಂಗ್ ಮಾಡಲು ಬಂದರು. ಅವರು ಎಸೆದ ಮೊದಲ ಬಾಲ್ ಫುಲ್-ಟಾಸ್ ಆಗಿತ್ತು. ಅದನ್ನು ಡೇವಿಡ್ ಮಿಲ್ಲರ್ ಬಿಗ್ ಶಾಟ್ ಹೊಡೆಯಲು ಬ್ಯಾಟ್ ಬೀಸಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಅದನ್ನು ಕ್ಯಾಚ್ ಆಗಿ ಕನ್ವರ್ಟ್ ಮಾಡಿದ್ದರು. ಕಗಿಸೊ ರಬಾಡ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರೂ ದಕ್ಷಿಣ ಆಫ್ರಿಕಾ 7 ರನ್​ಗಳಿಂದ ಸೋತಿತು.

ಇದನ್ನೂ ಓದಿ:ಇರುವೆಗಳೂ ಆಪರೇಷನ್ ಮಾಡ್ತವೆ..! ಮನುಷ್ಯರ ಹೊರತುಪಡಿಸಿದ್ರೆ ಈ ಕಲೆಗಾರಿಕೆ ಇರೋದು ಇವುಗಳಿಗೆ ಮಾತ್ರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment