newsfirstkannada.com

‘ನೀನೊಬ್ಬ ಜೋಕರ್​​’- ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಕೆವಿನ್​ ಪೀಟರ್ಸನ್!

Share :

Published May 27, 2024 at 7:46pm

    2ನೇ ಬಾರಿಗೆ ಆರೆಂಜ್​ ಕ್ಯಾಪ್​ ಗೆದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ಕೊಹ್ಲಿ

    ಮತ್ತೆ ಆರ್​​ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್​ ರಾಯುಡು

    ವಿರಾಟ್​ ಬಗ್ಗೆ ಮಾತಾಡಿದ ಅಂಬಾಟಿ ರಾಯುಡುಗೆ ಫುಲ್​​ ಕ್ಲಾಸ್​​​!

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಕೆಣಕಿದ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ಅವರನ್ನು ದಿಗ್ಗಜ ಕೆವಿನ್ ಪೀಟರ್ಸನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೈದರಾಬಾದ್​​ ವಿರುದ್ಧ ಕೆಕೆಆರ್​​ ಫೈನಲ್​ ಪಂದ್ಯದಲ್ಲಿ ಗೆದ್ದ ಕೂಡಲೇ ಲೈವ್​ ಟಿವಿಯಲ್ಲಿ ಮಾತಾಡಿದ್ದ ಅಂಬಾಟಿ ರಾಯುಡು ಆರೆಂಜ್ ಕ್ಯಾಪ್‌ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್​ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೀಯಾಳಿಸಿದ್ದರು. ಈ ಕೂಡಲೇ ಸಿಟ್ಟಿಗೆದ್ದ ಕೆವಿನ್​ ಪೀಟರ್ಸನ್​​ ನೀನು ಜೋಕರ್​ ಎಂದು ಕಿಡಿಕಾರಿದ್ದಾರೆ.

ನೀನೋರ್ವ ಜೋಕರ್​​, ಕೊಹ್ಲಿ ಬಗ್ಗೆ ಹಾಗೇ ಮಾತಾಡಬಾರದು ಎಂದು ರಾಯುಡುಗೆ ಕೆವಿನ್​ ಪೀಟರ್ಸನ್​ ಬೈದರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಇನ್ನು, 2024ರ ಐಪಿಎಲ್​ ಸೀಸನ್​​ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್‌ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್​ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಇದನ್ನೂ ಓದಿ: ಮತ್ತೆ ಆರ್​​ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ನೀನೊಬ್ಬ ಜೋಕರ್​​’- ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಕೆವಿನ್​ ಪೀಟರ್ಸನ್!

https://newsfirstlive.com/wp-content/uploads/2024/05/Kohli_Rayudu.jpg

Load More