/newsfirstlive-kannada/media/post_attachments/wp-content/uploads/2024/09/Kiccha-sudeep-1.jpg)
ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಅಭಿಮಾನಿಗಳ ಜೊತೆಗೆ 51ನೇ ಹುಟ್ಟುಹಬ್ಬವನ್ನು ಸುದೀಪ್​ ಆಚರಿಸಿಕೊಂಡಿದ್ದಾರೆ. ಬರ್ತ್​ ಡೇ ದಿನಂದಂದು ಮ್ಯಾಕ್ಸ್​ ಸಿನಿಮಾದ ಜೊತೆಗೆ ಹೊಸ ಸಿನಿಮಾದ ಕುರಿತು ಅನೌನ್ಸ್​ ಮಾಡಿದ್ದಾರೆ.
​ಕಿಚ್ಚ ಸುದೀಪ್​​ ‘ಬಿಲ್ಲ ರಂಗ ಬಾಷ’ ಸಿನಿಮಾದ ಕುರಿತು ಅನೌನ್ಸ್​ಮೆಂಟ್​​ ಮಾಡಿದ್ದಾರೆ. ಮ್ಯಾಕ್ಸ್​ ಬಳಿಕ ಕಿಚ್ಚಾ ‘ಬಿಲ್ಲ ರಂಗ ಬಾಷ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜನ್ಮ ದಿನದಂದು ಹೊಸ ಸಿನಿಮಾದ ಅನೌನ್ಸ್​ಮೆಂಟ್​​ ಜೊತೆಗೆ ಅಭಿಮಾನಿಗಳಿಗೆ ಸರ್​ಪ್ರೈಸ್​​ ನೀಡಿದ್ದಾರೆ.
ಇದನ್ನೂ ಓದಿ: VIDEO: ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ ಎಂದ ಕಿಚ್ಚ ಸುದೀಪ್​! ಹುಟ್ಟುಹಬ್ಬದಂದು ಹಿಂಗದ್ರಾ?
ಅಂದಹಾಗೆಯೇ ‘ಬಿಲ್ಲ ರಂಗ ಬಾಷ’ ಅನೂಪ್​​ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುವ ಸಿನಿಮಾವಾಗಿದೆ. ವಿಶ್ರಾಂತ್ ರೋಣ ಸಿನಿಮಾದ ಬಳಿಕ ಕಿಚ್ಚ ಸುದೀಪ್​ ಮತ್ತೆ ಒಂದಾಗುತ್ತಿದ್ದಾರೆ. ಸದ್ಯ ಮ್ಯಾಕ್ಸ್​ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಿಚ್ಚ ಇದಾದ ಬಳಿ ‘ಬಿಲ್ಲ ರಂಗ ಬಾಷ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಅನೂಪ್​ ಭಂಡಾರಿ ಮತ್ತು ಕಿಚ್ಚ ಸುದೀಪ್​ ಹೊಸದೊಂದು ಅನೌನ್ಸ್​​ಮೆಂಟ್​ ಕೊಡುವುದಾಗಿ ಹಿಂಟ್​ ಕೊಟ್ಟಿದ್ದರು. ಅಭಿಮಾನಿಗಳಿಗೂ ಈ ಕುರಿತಾಗಿ ನೀರಿಕ್ಷೆಯಿತ್ತು. ಇವರಿಬ್ಬರು ಜೊತೆಯಾದಾಗ ಹೊಸ ಸಿನಿಮಾ ಮಾಡಲಿದ್ದಾರೆ ಎಂಬುದು ಅಭಿಮಾನಿಗಳ ಮನದಾಳದ ನಿರೀಕ್ಷೆಯಾಗಿತ್ತು. ಆದರೀಗ ಆ ನಿರೀಕ್ಷೆ ಸತ್ಯವಾಗಿದೆ.
‘A Tale From The Future’ Presenting the Official Title Logo and Concept video of Billa Ranga Baasha - First Blood.@anupsbhandari@primeshowtweets@Niran_Reddy@chaitanyaniran@BRBmovie#BRBFirstBlood#BRBMoviepic.twitter.com/iRabUt6NlC
— Kichcha Sudeepa (@KicchaSudeep)
‘A Tale From The Future’ Presenting the Official Title Logo and Concept video of Billa Ranga Baasha - First Blood.@anupsbhandari@primeshowtweets@Niran_Reddy@chaitanyaniran@BRBmovie#BRBFirstBlood#BRBMoviepic.twitter.com/iRabUt6NlC
— Kichcha Sudeepa (@KicchaSudeep) September 2, 2024
">September 2, 2024
‘ಬಿಲ್ಲ ರಂಗ ಬಾಷ’ ಸಿನಿಮಾವನ್ನು ನಿರಂಜನ್​ ರೆಡ್ಡಿ ಮತ್ತು ಚೈತನ್ಯ ರೆಡ್ಡಿಯವರ ಹನುಮಾನ್​​ ಪ್ರೊಡಕ್ಷನ್​ನಿಂದ ನಿರ್ಮಾಣವಾಗುತ್ತಿದೆ. 2209 A.Dಯ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ರಕ್ತ ಚರಿತ್ರೆಯನ್ನು ಹೇಳುತ್ತಿದೆ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
ಇನ್ನು ಅನೂಪ್​ ಭಂಡಾರಿ ಮ್ಯಾಕ್ಸ್​ ಸಿನಿಮಾಗೂ ಹಾಡು ಬರೆದಿದ್ದಾರೆ. ಇಂದು ಮ್ಯಾಕ್ಸ್​ ಸಿನಿಮಾದ ಮಾಸ್​ ಹಾಡು ಬಿಡುಗಡೆಯಾಗಿದೆ. ವಿಜಯ್​ ಕಾರ್ತಿಕೇಯನ್​​​ ನಿರ್ದೇಶನದಲ್ಲಿ ಮ್ಯಾಕ್ಸ್​ ಸಿನಿಮಾ ಮೂಡಿ ಬರುತ್ತಿದೆ. ಅಜನೀಶ್​ ಲೋಕನಾಥ್​ ಅವರ ಸಂಗೀತ ನಿರ್ದೇಶನದಲ್ಲಿ ಮತ್ತು ಅನೂಪ್​ ಭಂಡಾರಿ ಸಾಹಿತ್ಯದಲ್ಲಿ ಮ್ಯಾಕ್ಸ್​ ಮಾಸ್​ ಹಾಡು ಇಂದು ರಿಲೀಸ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us