ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್
51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸುದೀಪ್
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬರುತ್ತಿರೋ ಸಿನಿಮಾ
ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಅಭಿಮಾನಿಗಳ ಜೊತೆಗೆ 51ನೇ ಹುಟ್ಟುಹಬ್ಬವನ್ನು ಸುದೀಪ್ ಆಚರಿಸಿಕೊಂಡಿದ್ದಾರೆ. ಬರ್ತ್ ಡೇ ದಿನಂದಂದು ಮ್ಯಾಕ್ಸ್ ಸಿನಿಮಾದ ಜೊತೆಗೆ ಹೊಸ ಸಿನಿಮಾದ ಕುರಿತು ಅನೌನ್ಸ್ ಮಾಡಿದ್ದಾರೆ.
ಕಿಚ್ಚ ಸುದೀಪ್ ‘ಬಿಲ್ಲ ರಂಗ ಬಾಷ’ ಸಿನಿಮಾದ ಕುರಿತು ಅನೌನ್ಸ್ಮೆಂಟ್ ಮಾಡಿದ್ದಾರೆ. ಮ್ಯಾಕ್ಸ್ ಬಳಿಕ ಕಿಚ್ಚಾ ‘ಬಿಲ್ಲ ರಂಗ ಬಾಷ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜನ್ಮ ದಿನದಂದು ಹೊಸ ಸಿನಿಮಾದ ಅನೌನ್ಸ್ಮೆಂಟ್ ಜೊತೆಗೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಇದನ್ನೂ ಓದಿ: VIDEO: ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ ಎಂದ ಕಿಚ್ಚ ಸುದೀಪ್! ಹುಟ್ಟುಹಬ್ಬದಂದು ಹಿಂಗದ್ರಾ?
ಅಂದಹಾಗೆಯೇ ‘ಬಿಲ್ಲ ರಂಗ ಬಾಷ’ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುವ ಸಿನಿಮಾವಾಗಿದೆ. ವಿಶ್ರಾಂತ್ ರೋಣ ಸಿನಿಮಾದ ಬಳಿಕ ಕಿಚ್ಚ ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. ಸದ್ಯ ಮ್ಯಾಕ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಿಚ್ಚ ಇದಾದ ಬಳಿ ‘ಬಿಲ್ಲ ರಂಗ ಬಾಷ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಕನ್ನಡ ಕಿರುತೆರೆಯ ಇಬ್ಬರು ನಟಿಯರು; ಯಾರಿವರು ಗೊತ್ತಾ?
ಇತ್ತೀಚೆಗೆ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಹೊಸದೊಂದು ಅನೌನ್ಸ್ಮೆಂಟ್ ಕೊಡುವುದಾಗಿ ಹಿಂಟ್ ಕೊಟ್ಟಿದ್ದರು. ಅಭಿಮಾನಿಗಳಿಗೂ ಈ ಕುರಿತಾಗಿ ನೀರಿಕ್ಷೆಯಿತ್ತು. ಇವರಿಬ್ಬರು ಜೊತೆಯಾದಾಗ ಹೊಸ ಸಿನಿಮಾ ಮಾಡಲಿದ್ದಾರೆ ಎಂಬುದು ಅಭಿಮಾನಿಗಳ ಮನದಾಳದ ನಿರೀಕ್ಷೆಯಾಗಿತ್ತು. ಆದರೀಗ ಆ ನಿರೀಕ್ಷೆ ಸತ್ಯವಾಗಿದೆ.
‘A Tale From The Future’ Presenting the Official Title Logo and Concept video of Billa Ranga Baasha – First Blood.@anupsbhandari @primeshowtweets @Niran_Reddy @chaitanyaniran @BRBmovie #BRBFirstBlood #BRBMovie pic.twitter.com/iRabUt6NlC
— Kichcha Sudeepa (@KicchaSudeep) September 2, 2024
‘ಬಿಲ್ಲ ರಂಗ ಬಾಷ’ ಸಿನಿಮಾವನ್ನು ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿಯವರ ಹನುಮಾನ್ ಪ್ರೊಡಕ್ಷನ್ನಿಂದ ನಿರ್ಮಾಣವಾಗುತ್ತಿದೆ. 2209 A.Dಯ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ರಕ್ತ ಚರಿತ್ರೆಯನ್ನು ಹೇಳುತ್ತಿದೆ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
ಇನ್ನು ಅನೂಪ್ ಭಂಡಾರಿ ಮ್ಯಾಕ್ಸ್ ಸಿನಿಮಾಗೂ ಹಾಡು ಬರೆದಿದ್ದಾರೆ. ಇಂದು ಮ್ಯಾಕ್ಸ್ ಸಿನಿಮಾದ ಮಾಸ್ ಹಾಡು ಬಿಡುಗಡೆಯಾಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಮ್ಯಾಕ್ಸ್ ಸಿನಿಮಾ ಮೂಡಿ ಬರುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಮತ್ತು ಅನೂಪ್ ಭಂಡಾರಿ ಸಾಹಿತ್ಯದಲ್ಲಿ ಮ್ಯಾಕ್ಸ್ ಮಾಸ್ ಹಾಡು ಇಂದು ರಿಲೀಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ