newsfirstkannada.com

BIGG BOSS: ಇಶಾನಿ, ರಕ್ಷಕ್‌ಗೆ ಬೆಂಡೆತ್ತಿದ ಕಿಚ್ಚ ಸುದೀಪ್‌.. ಬಿಗ್‌ಬಾಸ್‌ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!

Share :

Published January 20, 2024 at 3:32pm

Update January 20, 2024 at 3:36pm

  ಬಿಗ್‌ಬಾಸ್ ಸೀಸನ್‌ 10ರ ಕಟ್ಟ ಕಡೆಯ ವಾರದ ಕತೆ ಸೂಪರ್

  ಕಂಟೆಸ್ಟೆಂಟ್‌ಗಳ ಮಾತಿಗೆ ಕೆರಳಿದ ಕಿಚ್ಚ ಸುದೀಪ್ ಕೌಂಟರ್

  ರಕ್ಷಕ್ ಅಲ್ವಾ ದೇವ್ರು ನಿಮಗೆ ಒಳ್ಳೆದು ಮಾಡ್ಲಿ ಚೆನ್ನಾಗಿರಿ

ಬಿಗ್‌ಬಾಸ್ ಸೀಸನ್‌ 10ರಲ್ಲಿ ಕಿಚ್ಚ ಸುದೀಪ್‌ ಮತ್ತೆ ಫೈರ್ ಆಗಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಪಂಚಾಯ್ತಿ ಮಾಡುವಾಗ ಬೆಂಕಿ, ಬಿರುಗಾಳಿಯ ಮಾತುಗಳನ್ನಾಡಿದ್ದಾರೆ. ಹಳೇ ಕಂಟೆಸ್ಟೆಂಟ್‌ಗಳಾದ ಇಶಾನಿ ಹಾಗೂ ರಕ್ಷಕ್‌ ಬುಲೆಟ್ ಮೇಲೆ ಕೆರಳಿ ಕೆಂಡವಾಗಿದ್ದಾರೆ.

ಬಿಗ್‌ಬಾಸ್ ಸೀಸನ್‌ 10ರ ಕಟ್ಟ ಕಡೆಯ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಈ ಪಂಚಾಯ್ತಿಯಲ್ಲಿ ಪ್ರಮುಖವಾಗಿ ಕಳೆದ ವಾರ ಮನೆಯಿಂದ ಹೊರಗಡೆ ಹೋದ ಕಂಟೆಸ್ಟೆಂಟ್‌ಗಳ ಮಾತು ಕಿಚ್ಚ ಸುದೀಪ್ ಅವರನ್ನು ಕೆರಳಿಸಿದೆ. ಒಂದು ಮಾತಿಗೂ ಖಡಕ್ ಕೌಂಟರ್ ಕೊಟ್ಟಿರೋ ಕಿಚ್ಚ ಸುದೀಪ್‌ ಗರಂ ಆಗಿದ್ದಾರೆ.

ವಾರದ ಕತೆಯಲ್ಲಿ ಕಳೆದ ವಾರ ಮನೆಯಲ್ಲಾದ ಘಟನೆಯನ್ನ ಕಿಚ್ಚ ಸುದೀಪ್ ಅವರು ಖಂಡಿಸಿದ್ದಾರೆ. ವಾಪಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಕಂಟಸ್ಟೆಂಟ್‌ಗಳು ಆಡಿದ ಮಾತಿಗೆ ಕೌಂಟರ್ ಕೊಟ್ಟಿದ್ದಾರೆ. ಇಶಾನಿ ಅವರು ಸೋತು ಹೊರಗಡೆ ಹೋಗಿ ಏನು ಕಲಿತುಕೊಂಡು ಬಂದ್ರಿ. ಇನ್ನು ಕಂಟೆಸ್ಟೆಂಟ್ ಹೆಸರು ರಕ್ಷಕ್ ಅಲ್ವಾ ದೇವ್ರು ನಿಮಗೆ ಒಳ್ಳೆದು ಮಾಡ್ಲಿ ಚೆನ್ನಾಗಿರಿ ಎಂದು ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದರ ಜೊತೆಗೆ ನಮ್ರತಾ ಅವರ ಜೊತೆ ಹೊರಗಡೆ ವಿಚಾರ ಹೇಳಿದ ಸ್ನೇಹಿತ್ ಅವರ ಮಾತಿಗೆ ಕಿಚ್ಚ ಸುದೀಪ್ ಹೊರಗಡೆ ಏನಾಗಿದೆ ಅಂತ ಫೈಟ್ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: BBK10: ಕಿಚ್ಚನ​ ಕಡೆಯ ಪಂಚಾಯ್ತಿ.. ಲಾಸ್ಟ್​ ಸ್ಟೇಜ್​ನಲ್ಲಿ ಉಳಿಯೋರು, ಹೋಗೋರು ಯಾರು? ಗೆಸ್ ಮಾಡಿ

ಪ್ರಮುಖವಾಗಿ ಕಳೆದ ವಾರ ಇಶಾನಿ, ರಕ್ಷಕ್, ಸ್ನೇಹಿತ್ ಮಾತುಗಳಿಂದ ಬಿಗ್‌ಬಾಸ್ ಮನೆಯಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿತ್ತು. ಇದರಿಂದ ಡ್ರೋನ್ ಪ್ರತಾಪ್, ನಮ್ರತಾ ಬಹಳಷ್ಟು ನೋವು ಅನುಭವಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರು ಇಶಾನಿ, ರಕ್ಷಕ್, ಸ್ನೇಹಿತ್ ಅವರನ್ನು ತರಾಟೆ ತೆಗೆದುಕೊಂಡಿದ್ದು, ಡ್ರೋನ್ ಪ್ರತಾಪ್‌, ನಮ್ರತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬಿಗ್‌ಬಾಸ್‌ ಸೀಸನ್‌ 10ರ ಕಡೇ ವಾರದ ಕತೆ ಇಂದು ಪ್ರಸಾರವಾಗಲಿದ್ದು, ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ನಡೆದಿರೋ ಸ್ಪರ್ಧಿಗಳ ಜಗಳಕ್ಕೂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಇಶಾನಿ, ರಕ್ಷಕ್‌ಗೆ ಬೆಂಡೆತ್ತಿದ ಕಿಚ್ಚ ಸುದೀಪ್‌.. ಬಿಗ್‌ಬಾಸ್‌ ವಾರದ ಕತೆಯಲ್ಲಿ ಬೆಂಕಿ, ಬಿರುಗಾಳಿ!

https://newsfirstlive.com/wp-content/uploads/2024/01/bigg-boss-6-1.jpg

Load More