ಅಪ್ಪನ ಹಾದಿಯನ್ನೇ ಹಿಡಿದ ನಟ ಸುದೀಪ್​ ಮಗಳು; ಸಾನ್ವಿ ಲುಕ್​​ಗೆ ಫ್ಯಾನ್ಸ್​ ಬಹುಪರಾಕ್

author-image
Veena Gangani
Updated On
KicchaSudeep: ಬಿಗ್ ಬಾಸ್ ಫ್ಯಾನ್ಸ್‌ಗೆ ಬಿಗ್ ಶಾಕ್‌.. ಅಪ್ಪನ ನಿರ್ಧಾರಕ್ಕೆ ಸಾನ್ವಿ ಸುದೀಪ್ ಏನಂದ್ರು?
Advertisment
  • ಸಖತ್​ ವೈರಲ್​ ಆಯ್ತು ಕಿಚ್ಚ ಸುದೀಪ್ ಮಗಳು ಕ್ಯೂಟ್ ಫೋಟೋ
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಸಾನ್ವಿ ಸುದೀಪ್​
  • ಮಲ್ಟಿ ಟ್ಯಾಲೆಂಟೆಡ್‌, ಸಖತ್ ಬ್ಯೂಟಿಫುಲ್‌ ಹುಡುಗಿ ಕಿಚ್ಚನ ಮಗಳು

ಸ್ಯಾಂಡಲ್​ವುಡ್​​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಮಗಳು ಸಾನ್ವಿ ಸುದೀಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಲ್ಟಿ ಟ್ಯಾಲೆಂಟೆಡ್‌ ಮತ್ತು ಸಖತ್ ಬ್ಯೂಟಿಫುಲ್‌ ಹುಡುಗಿ ತಮ್ಮ ಹಾಡಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಸಾನ್ವಿ ಮತ್ತೆ ಸುದ್ದಿಯಲ್ಲಿದ್ದಾರೆ.

publive-image

ಇದನ್ನೂ ಓದಿ:ಕತ್ತಿನ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡ ನಟ ಸುದೀಪ್​ ಮಗಳು ಸಾನ್ವಿ; PIKU ಎಂದರೇನು..?

ಒಂದಲ್ಲಾ ಒಂದು ವಿಚಾರಕ್ಕೆ ನಟ ಸುದೀಪ್​ ಮಗಳು ಸಾನ್ವಿ ಸುದ್ದಿಯಲ್ಲಿ ಇರುತ್ತಾರೆ. ಇಇತ್ತೀಚೆಗೆಷ್ಟೇ ಸಾನ್ವಿ ಅವರು ಟಾಟ್ಯೂವೊಂದನ್ನು ಹಾಕಿಸಿಕೊಂಡು ಟ್ರೆಂಡಿಂಗ್​ನಲ್ಲಿ ಇದ್ದರು. ಇದೀಗ ಮತ್ತೆ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.

publive-image

ಕಿಚ್ಚ ಸುದೀಪ್​ ಪುತ್ರಿ ಸಾನ್ವಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ಸಾನ್ವಿ ಅವರು ಚೂಡಿದಾರ್ ಸಖತ್ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಬ್ಲಾಕ್ ಅಂಡ್ ಬ್ಲಾಕ್​ ಲುಕ್​ನಲ್ಲಿ ವಿಲನ್​ ರೀತಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ವಾವ್​ ಸಾನ್ವಿ ಅಕ್ಕ ಸೂಪರ್​​, ಬ್ಯೂಟಿಫುಲ್, ಜಸ್ಟ್​ ಲುಕಿಂಗ್ ಲೈಕ್ ಆ ವಾವ್ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment