newsfirstkannada.com

ದರ್ಶನ್‌ಗೆ ಸ್ನೇಹಿತರಾಗಿ ಏನ್‌ ಹೇಳ್ತೀರಾ ಅಂದ್ರೆ ಕಿಚ್ಚ ಸುದೀಪ್‌ ಏನಂದ್ರು ಗೊತ್ತಾ?- ವಿಡಿಯೋ!

Share :

Published June 16, 2024 at 10:05pm

Update June 16, 2024 at 10:44pm

    ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಅಂಡ್​ ಗ್ಯಾಂಗ್​ ಅಮಾನುಷ ಹಲ್ಲೆ

    ನಟ ದರ್ಶನ್​ ಹಲವು ಕ್ರೌರ್ಯಕ್ಕೆ ಬೇಸತ್ತು ಹೋಗಿದ್ದ ಇಡೀ ಸ್ಯಾಂಡಲ್​ವುಡ್​​

    ಇಷ್ಟು ವರ್ಷ ಕಾಪಾಡಿಕೊಂಡು ಬಂದಿರೋ ಚಿತ್ರರಂಗದ ಘನತೆ ಮಣ್ಣು ಪಾಲು

ಚಿತ್ರದುರ್ಗ ಯುವಕ ರೇಣುಕಾಸ್ವಾಮಿ ಮೇಲೆ ನಡೆದಿರೋದು ಅಮಾನುಷ ಹಲ್ಲೆ, ರಾಕ್ಷಸಿ ಕೃತ್ಯ. ಮಾನವ ಸಮಾಜ ಕ್ಷಮಿಸಲು ಸಾಧ್ಯವೇ ಇಲ್ಲದ್ದು. ಇಷ್ಟೆಲ್ಲ ಆಗಿ, ದರ್ಶನ್‌ ಅರೆಸ್ಟ್‌ ಆಗಿರೋ ಸಿನಿಮಾ ರಂಗದವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಯಾವ ಸ್ಟಾರ್‌ ಹೀರೋಗಳು ಖಂಡಿಸೋ ಕೆಲಸ ಮಾತಾಡಿರಲಿಲ್ಲ. ಆದರೆ ಕಿಚ್ಚ ಸುದೀಪ್‌ ಅವರು ಈ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ತಮಗನ್ನಿಸಿದ್ದನ್ನು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ಯಾರೂ ರಿಯಾಕ್ಟ್​ ಮಾಡ್ತಿಲ್ಲ. ಎಲ್ಲರೂ ದರ್ಶನ್​ ಕ್ರೌರ್ಯಕ್ಕೆ ಬೇಸತ್ತು ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಿತ್ರರಂಗ ದರ್ಶನ್​ನ ಬ್ಯಾನ್​ ಮಾಡೋದಕ್ಕಗಲ್ವಾ? ಆ ರೇಣುಕಾಸ್ವಾಮಿಯ ಪತ್ನಿಗೆ ನ್ಯಾಯ ಸಿಗೋದಿಲ್ಲ. ಹಿಗೊಂದಿಷ್ಟು ಪ್ರಶ್ನೆಗಳು ರಾಜ್ಯದ ಜನತೆಯನ್ನ ದಟ್ಟವಾಗಿ ಕಾಡ್ತಿದ್ವು. ಇನ್​ಫ್ಯಾಕ್ಟ್​ ಡಿ ಗ್ಯಾಂಗ್​ ಉಪಟಳಕ್ಕೆ ಬೇಸತ್ತು ಇಡೀ ಸ್ಯಾಂಡಲ್​ವುಡ್​ ಹೆದರಿ ಕುಳಿತಿದೆ ಅನ್ನೋ ಮಾತುಗಳು ಕೇಳಿಬರ್ತಿದ್ವು. ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್​ಗಳು, ದೊಡ್ಡ ಡೊಡ್ಡ ವ್ಯಕ್ತಿಗಳು ಅನಿಸಿಕೊಂಡವ್ರು ಈ ಪ್ರಕರಣದಲ್ಲಿ ಯಾಕ್​ ರಿಯಾಕ್ಟ್​ ಮಾಡ್ತಿಲ್ಲ ಅನ್ನೋ ಪ್ರಶ್ನೆಗಳು ಭುಗಿಲೆದ್ದಿರೋವಾಗ ಕಿಚ್ಚ ಸುದೀಪ್​ ಅಚ್ಚರಿ ಎಂಬಂತೆ ಪ್ರಕರಣದ ಬಗ್ಗೆ ರಿಯಾಕ್ಟ್​ ಮಾಡಿದ್ದಾರೆ. ಒಂದು ಕಾಲದಲ್ಲಿ ದರ್ಶನ್‌ ಜೊತೆಗೆ ಕುಚಿಕು ಕುಚಿಕು ಅಂತಾ ಸ್ಟೆಪ್​ ಹಾಕ್ತಿದ್ದ ಕಿಚ್ಚ ಸುದೀಪ್​ ರೇಣುಕಾಸ್ವಾಮಿ ಕುಟುಂಬಕ್ಕೆ ಆಗಿರೋ ಅನ್ಯಾಯದ ಬಗ್ಗೆ ನೋವು ತೋಡಿಕೊಂಡಿದ್ದಾರೆ.

ಒಂದು ಜೀವಾನೇ ಹೋಗಿದೆ. ಒಬ್ಬ ಅಮಾಯಕನನ್ನ ಚಿತ್ರಹಿಂಸೆ ಕೊಟ್ಟು ಕ್ರೂರವಾಗಿ ಕೊಲೆ ಮಾಡಲಾಗಿದೆ. ಒಂದೇ ಒಂದು ಚಾಡಿ 18 ಕುಟುಂಬಗಳು ದಿಕ್ಕೇ ತೋಚದೇ ಕಂಗಾಲಾಗುವಂತೆ ಮಾಡ್ಬಿಟ್ಟಿದೆ. ರಾಜ್ಯವೇ ಬೆಚ್ಚಿ ಬಿದ್ದಿರೋ ಕ್ರೈಂ ಕತೆಯೊಂದರ ಪಾತ್ರಧಾರಿಗಳನ್ನಾಗಿ ಮಕ್ಕಳನ್ನ ನೋಡ್ತಿರೋ ತಾಯಂದಿರು, ಸಹೋದರಿಯರ ನೋವು ಹೇಳತೀರದಾಗಿದೆ. ಎಷ್ಟು ದೊಡ್ಡ ಅನಾಹುತ. ಸಾಲು ಸಾಲು ಶಾಪ, ಆಕ್ರೋಶ. ಇಷ್ಟೆಲ್ಲಾ ಅನಾಹುತಗಳ ನಡುವೆ ಕನ್ನಡ ಚಿತ್ರರಂಗದವ್ರು ಯಾಕೆ ಧ್ವನಿ ಎತ್ತುತ್ತಿಲ್ಲ? ಕನ್ನಡ ನಾಡು ನಡಿ ವಿಚಾರದಲ್ಲಿ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದವರು ಈಗ ಏಕೆ ರೇಣುಕಾಸ್ವಾಮಿ ಕುಟುಂಬದ ಪರ ಮಾಡ್ತಿಲ್ಲ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಆದ್ರೆ, ಸುದೀಪ್‌ ಯಾವುದೇ ಅಂಜಿಕೆ, ಅಳುಕಿಲ್ಲದೇ ಇನ್​ಡೈರೆಕ್ಟಾಗೇ ಡಿ ಗ್ಯಾಂಗ್​ ಕರಾಳ ಕ್ರೌರ್ಯದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕು, ಎಲ್ಲಕ್ಕಿಂತ ಹೆಚ್ಚಾಗಿ 5 ತಿಂಗಳ ಗರ್ಭಿಣಿ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು ಅಂತಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: VIDEO: ‘ಆ ಹೆಣ್ಣಿಗೆ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು’- ಕಿಚ್ಚ ಸುದೀಪ್‌

ರೇಣುಕಾಸ್ವಾಮಿಯ ಹತ್ಯೆ ಕೇಸ್‌ನಲ್ಲಿ ದರ್ಶನ್‌, ಪವಿತ್ರಾ ಗೌಡ ಅರೆಸ್ಟ್‌ ಆಗಿದ್ದು ಕನ್ನಡ ಚಿತ್ರರಂಗಕ್ಕೆ ಕಳಂಕ. ಸ್ಯಾಂಡಲ್‌ವುಡ್‌ ಇತಿಹಾಸದಲ್ಲಿ ಇಲ್ಲಿವರೆಗೂ ಯಾರೂ ಕೊಲೆ ಕೇಸ್‌ನಲ್ಲಿ ಸ್ಟಾರ್‌ ನಟರು ಜೈಲು ಸೇರಿದಿಲ್ಲ. ನಮ್ಮ ನಟರ ಹೆಸರು ಕೇಳಿದ್ರೆ ಅಕ್ಕ ಪಟ್ಟದ ಇಂಡಸ್ಟ್ರಿಯವ್ರು ಗೌರವ ಕೊಡ್ತಾ ಇದ್ರು. ಅಂತಂಥಹ ಸಭ್ಯವಂತ ನಟರನ್ನ ಕೊಟ್ಟಂತಹ ರಂಗ ನಮ್ಮ ಕನ್ನಡ ಚಿತ್ರರಂಗ. ಆದ್ರೆ, ದರ್ಶನ್​ನಂತಹ ಸ್ಟಾರ್​ನಟನೊಬ್ಬ ಕೊಲೆ ಕೇಸಲ್ಲಿ ಅರೆಸ್ಟ್‌ ಆಗಿ ಜೈಲು ಸೇರಿದ್ದು ಚಂದನವನಕ್ಕೆ ಮೆತ್ತಿಕೊಂಡ ಕಳಂಕ. ಅದರಲ್ಲಿಯೂ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿರೋದು, ಅಮಾನುಷ್ಯ ಕೌರ್ಯ ಮೆರೆದಿರೋದಕ್ಕೆ ಇಡೀ ರಾಷ್ಟ್ರವೇ ಕಂಬನಿ ಮಿಡಿಯುತ್ತಿದೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗ್ಬೇಕು ಅನ್ನೋ ಕೂಗು ಜೋರಾಗಿ ಕೇಳಿಬರ್ತಿದೆ. ಹೀಗಾಗಿ ಇದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ದೊಡ್ಡ ಕಳಂಕ. ಇಷ್ಟು ವರ್ಷ ಕಾಪಾಡಿಕೊಂಡು ಬಂದಿರೋ ಚಿತ್ರರಂಗದ ಘತನೆ ಮಣ್ಣು ಪಾಲಿಗಿದೆ. ಹಿಗಾಗಿಯೇ ಸುದೀಪ್‌ ಹೇಳಿರೋದು. ಚಿತ್ರರಂಗಕ್ಕೆ ಆಪಾದನೆಗಳಿಂದ ಕ್ಲೀನ್‌ಚಿಟ್‌ ಸಿಗ್ಬೇಕು ಅಂತಾ. ಚಿತ್ರರಂಗ ಕಳಂಕ ರಹಿತ ಆಗ್ಬೇಕು ಅಂತಾದ್ರೆ, ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗ್ಬೇಕು. ಕನ್ನಡ ಸಿನಿಮಾ ರಂಗ ರೇಣುಕಾಸ್ವಾಮಿ ಜೊತೆ ನಿಲ್ಲಬೇಕು. ಹಾಗಾದ್ರೆ ಮಾತ್ರ ನ್ಯಾಯ ಸಿಗಲು ಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ಗೆ ಸ್ನೇಹಿತರಾಗಿ ಏನ್‌ ಹೇಳ್ತೀರಾ ಅಂದ್ರೆ ಕಿಚ್ಚ ಸುದೀಪ್‌ ಏನಂದ್ರು ಗೊತ್ತಾ?- ವಿಡಿಯೋ!

https://newsfirstlive.com/wp-content/uploads/2024/06/SUDEEP-1.jpg

Load More