/newsfirstlive-kannada/media/post_attachments/wp-content/uploads/2023/07/kiccha.jpg)
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅತ್ತ ರಾಜಕಾರಣಿಗಳು ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇಂತಹ ಸಮಯದಲ್ಲಿ ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​​​ ರಾಜಕಾರಣಕ್ಕೆ ಎಂಟ್ರಿ ಕೊಡೋ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ನಟ ಚಂದನ್ ಮಾಲೀಕತ್ವದ ಮಂಡಿಪೇಟ್ ತಟ್ಟೆ ಇಡ್ಲಿ ಉದ್ಘಾಟನೆ ಮಾಡಿದ ಕಿಚ್ಚ ಸುದೀಪ್​ ಬಳಿಕ ಮಾತನಾಡಿದ್ದಾರೆ. ಈಗ ಹೋಟೆಲ್ ಉದ್ಘಾಟನೆ ಬರ್ತೀನೋ, ಇಲ್ಲವೋ ಅಂದುಕೊಂಡಿದ್ರು. ಆದರೆ ನಾನು ಬಂದೆ. ಅದೇ ಥರಾ ರಾಜಕಾರಣಕ್ಕೂ ಈ ಥರಾ ಬರ್ತೀನೋ ಇಲ್ಲವೋ ಅನ್ನೋ ಗೊಂದಲದ ವಿಚಾರ ಓಡಾಡ್ತಿದೆ. ನಾನು ರಾಜಕಾರಣಕ್ಕೆ ಬಂದಾಗ ಗೊತ್ತಾಗುತ್ತೆ ಅಂತಾ ಮಾರ್ಮಿಕವಾಗಿ ಮಾತ್ನಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಹೋಗ್ತಾರಾ ಕಿಚ್ಚ?
ಇನ್ನೂ ಯಾರೂ ಬಂದು ಕರೆದಿಲ್ಲ. ಯಾರಾದರೂ ಕರೆದರೆ ನೋಡ್ತೀನಿ. ಸದ್ಯಕ್ಕೆ ಸಿನಿಮಾ ಕಡೆ ಕೆಲಸಗಳಿಗೆ. ಅದರ ಕಡೆ ಯೋಚನೆ ಮಾಡ್ತಿದ್ದೀನಿ. ಆ ಎಲೆಕ್ಷನ್ ಟೈಂನಲ್ಲಿ ಯಾವ ಕಾರಣಕ್ಕೆ ಕೆಲವರ ಪರ ಪ್ರಚಾರ ಮಾಡಿದ್ದೇ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಎಲೆಕ್ಷನ್​ ಅಂದ್ರೆ ಸ್ವಲ್ಲ ದೂರಾನೆ.
ಮ್ಯಾಕ್ಸ್​ ಸಿನಿಮಾ ಬಗ್ಗೆ ಏನಂದ್ರು?
ಮ್ಯಾಕ್ಸ್​ ಸಿನಿಮಾ ಕ್ರಿಕೆಟ್​ನಿಂದಾಗಿ ಲೇಟ್​ ಆಗಿದ್ದಲ್ಲ. ಇನ್ನು 15 ದಿನದಲ್ಲಿ ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗುತ್ತೆ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us