Advertisment

ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ನಾನು ಯಾವತ್ತೂ ಮಾಡಲ್ಲ-ಕಿಚ್ಚ ಸುದೀಪ್​

author-image
Veena Gangani
Updated On
ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ನಾನು ಯಾವತ್ತೂ  ಮಾಡಲ್ಲ-ಕಿಚ್ಚ ಸುದೀಪ್​
Advertisment
  • ಕೇವಲ ಸಿನಿಮಾದಿಂದ ಹೀರೋ ಆಗೋಕೆ ಆಗೋದಿಲ್ಲ, ಆದರೆ..!
  • ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ನಾನು ಎಂದೂ ಮಾಡಲ್ಲ
  • ಅಭಿಮಾನಿಗಳ ಮುಂದೆಯೇ ಕೇಕ್​ ಮಾಡಿದ ನಟ ಕಿಚ್ಚ ಸುದೀಪ್

ಬೆಂಗಳೂರು: ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬ ಆಚರಣೆ ಮಾಡಲು ಜಿಲ್ಲೆ ಜಿಲ್ಲೆಯಿಂದ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಜಯನಗರದ ಎಂಇಎಸ್​ ಗ್ರೌಂಡ್​ನಲ್ಲಿ ಅಭಿಮಾನಿಗಳಿಗಾಗಿಯೇ ಬರ್ತ್​ ಡೇ ಕೇಕ್​ ಕಟಿಂಗ್​ ಹಮ್ಮಿಕೊಂಡಿದ್ದರು. ಹೀಗಾಗಿ ಸಾವಿರಾರು ಪ್ರಮಾಣದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಕಿಚ್ಚ ಸುದೀಪ್​ ಅವರು ಬಂದ ಕೂಡ ಕೇಕ್​ ಮಾಡಿ ಸಂಭ್ರಮಿಸಿದ್ದಾರೆ.

Advertisment

ಇದನ್ನೂ ಓದಿ:51ನೇ ವಸಂತಕ್ಕೆ ಕಾಲಿಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್; ಕೇಕ್​ ಕಟ್​ ಮಾಡಿ ಬಾದ್​ ಷಾ ಸಂಭ್ರಮ

publive-image

ಇನ್ನು ಇದೇ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತಾಡಿದ ಕಿಚ್ಚ ಸುದೀಪ್​, ಅಭಿಮಾನಿಗಳು ತೋರಿಸೋ ಪ್ರೀತಿಯಿಂದ ನಾನು ಇವತ್ತು ಇಲ್ಲಿದ್ದೀನಿ. ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾನು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ಮಾಡಲ್ಲ. ಬರೀ ಸಿನಿಮಾದಿಂದ ಹೀರೋ ಆಗೋಕೆ ಆಗಲ್ಲ. ವ್ಯಕ್ತಿದಿಂದ ನಾವು ದೊಡ್ಡೋರು ಆಗೋಕೆ ಸಾಧ್ಯ.

ನಾವು ಬೆಳಗ್ಗೆ ಎದ್ದು ಮುಖಕ್ಕೆ ಮೇಕಪ್ ಹಾಕೋದೆ ನಿಮಗೋಸ್ಕರ. ಅಭಿಮಾನಿಗಳಿಂದ ಬರೋ ಕೂಗು ನನ್ನನ್ನು ತಗ್ಗಿಸಿ, ಬಗ್ಗಿಸಿ ಇರುವಂತೆ ಮಾಡುತ್ತೆ. ನನ್ನ ಫ್ಯಾನ್ಸ್ ಒಳ್ಳೆಯವ್ರು. ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ. ನನ್ನ ಅಭಿಮಾನಿಗಳಿಂದ ನಾನು. ಆದಷ್ಟು ಬೇಗ ಮ್ಯಾಕ್ಸ್ ರಿಲೀಸ್ ಡೇಟ್ ಹೇಳ್ತೀನಿ. ಮ್ಯಾಕ್ಸ್ ಸಿನಿಮಾ ತಡ ಆಯ್ತು.‌ ಆದ್ರೆ ಆದಷ್ಟು ಬೇಗ ಸಿನಿಮಾ ರಿಲೀಸ್ ಆಗುತ್ತೆ ಎಂದಿದ್ದಾರೆ.

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment