/newsfirstlive-kannada/media/post_attachments/wp-content/uploads/2024/06/kiccha1.jpg)
ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್ ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಂದು ಈ ಕೇಸ್ನಲ್ಲಿ A1 ಆರೋಪಿಯಾಗಿರೋ ಪವಿತ್ರಾ ಗೌಡ ಹಾಗೂ ಕೆಲ ಆರೋಪಿಗಳ ಮನೆಗೆ ಪೊಲೀಸ್ ಅಧಿಕಾರಿಗಳು ಮಹಜರು ಮಾಡಿದ್ರು.
ಇದನ್ನೂ ಓದಿ:VIDEO: ‘ಆ ಹೆಣ್ಣಿಗೆ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು’- ಕಿಚ್ಚ ಸುದೀಪ್
ಈ ಕೇಸ್ ಸಂಬಂಧ ಆರೋಪಿಗಳ ಮನೆಯಲ್ಲಿ ಕೆಲವೊಂದು ಸಾಕ್ಷ್ಯಗಳು ಸಿಕ್ಕಿವೆ. ಜೊತೆಗೆ ಕೊಲೆ ನಡೆದ ದಿನ ಆರೋಪಿಗಳು ಧರಿಸಿಕೊಂಡಿದ್ದ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಕೊಲೆ ಕೇಸ್ ಹಿಂದೆ ನಟ ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ಇಡೀ ಚಿತ್ರರಂಗವೇ ಶಾಕ್ಗೆ ಒಳಗಾಗಿತ್ತು. ಬಳಿಕ ಈ ಕೇಸ್ ಬಗ್ಗೆ ಪೊಲೀಸ್ ಅಧಿಕಾರಿಗಳು ಸತ್ಯ ಸತ್ಯಗಳ ಬಗ್ಗೆ ಸಾಕ್ಷ್ಯಿ ಸಂಗ್ರಹಿಸಿಕೊಂಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಟ ಕಿಚ್ಚ ಸುದೀಪ್ ಅವರು, ಯಾರೋ ಒಬ್ಬರು ಬರ್ತಾರೆ. ನಮಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದಾರೆ ಮನೆಯಲ್ಲಿ ಅಂತಾರೇ ಅಂತ ಇನ್ನೊಬ್ಬರ ಮನೆಗೆ ಹೋಗುತ್ತಾರೆ. ಅವರಿಗೆ ಸಪೋರ್ಟ್ ಕೇಳುತ್ತಾರೆ. ಆಗ ಇವರಿಗೆ ಅವರು ಸಪೋರ್ಟ್ ಮಾಡುತ್ತಾರೆ. ಕೊನೆಯದಾಗಿ ಅವರಿಬ್ಬರು ಒಂದಾಗುತ್ತಾರೆ. ಸಪೋರ್ಟ್ ಮಾಡಿದವರು ಗೂಬೆಗಳ ಹಾಗೇ ಕಾಣಿಸುತ್ತಾರೆ. ಪಾಠ ಮುಗಿತು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ