/newsfirstlive-kannada/media/post_attachments/wp-content/uploads/2024/09/bigg-boss8.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಆಗಿ ಓಪನಿಂಗ್ ಕಂಡಿದೆ. ಬಿಗ್​ಬಾಸ್​ ಸೀಸನ್ 1ರಿಂದ 10ರವರೆಗೂ ನಟ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಈಗ ಬಿಗ್​​ಬಾಸ್​ ಸೀಸನ್​ 11ಕ್ಕೂ ಕೂಡ ಅವರೇ ನಿರೂಪಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!
/newsfirstlive-kannada/media/post_attachments/wp-content/uploads/2023/11/kiccha-1.jpg)
ಬಿಗ್​ಬಾಸ್‌ನಲ್ಲಿ ವೀಕ್ಷಕರಿಗೆ ಹಲವು ವಿಚಾರಗಳು ಮನರಂಜನೆ ನೀಡುತ್ತವೆ. ಸುದೀಪ್ ನಿರೂಪಣೆಯಿಂದಾಗಿ ಕಾರ್ಯಕ್ರಮದ ಮತ್ತಷ್ಟೂ ರಂಗು ಹೆಚ್ಚಾಗುತ್ತದೆ. ಅದು ಮಾತ್ರವಲ್ಲದೇ ಕಿಚ್ಚ ಸುದೀಪ್​ ಅವರು ಧರಿಸುವ ಭಿನ್ನ ವಿಭಿನ್ನ ಕಾಸ್ಟ್ಯೂಮ್‌ಗಳು ಕೂಡ ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುತ್ತದೆ. ಸುದೀಪ್ ಯಾವ ರೀತಿ ಬಟ್ಟೆ ಧರಿಸಿ ಬರುತ್ತಾರೆ ಎಂಬ ಕುತೂಹಲ ಸಾಕಷ್ಟು ಅಭಿಮಾನಿಗಳಿಗೆ ಇರುತ್ತದೆ. ಇನ್ನೂ ಫ್ಯಾಷನ್ ವಿಚಾರದಲ್ಲಿ ಅವರನ್ನು ಅನುಕರಣೆ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಈವರೆಗೂ ಬಿಗ್ ಬಾಸ್ ವೇದಿಕೆಯ ರಂಗು ಹೆಚ್ಚಿಸಿದ ಕಿಚ್ಚನ ಕಾಸ್ಟ್ಯೂಮ್‌ಗಳ ಬಗ್ಗೆ ಮತ್ತೊಂದು ಮಾಹಿತಿ ಸಿಕ್ಕಿದೆ.
View this post on Instagram
ಈ ಬಾರಿಯ ಬಿಗ್​ಬಾಸ್​ ಸೀಸನ್ 11ಕ್ಕೆ ಕಿಚ್ಚ ಸುದೀಪ್​ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಗ್ರ್ಯಾಂಡ್ ಓಪನಿಂಗ್ ದಿನವೇ ಕಿಚ್ಚ ಸುದೀಪ್ ಅವರು ಧರಿಸಿದ ಕಾಸ್ಟ್ಯೂಮ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇನ್ನೂ ಕಿಚ್ಚ ಸುದೀಪ್ ಅವರು ಪೆಸ್ಟಲ್ ಬೇಜ್ ಕಲರ್​ನ ಇಂಡೋ ಕೊರಿಯೋ ಸೂಟ್​ ಧರಿಸಿದ್ದಾರೆ. ಈ ಕಾಸ್ಟ್ಯೂಮ್​ಗೆ ಜಪಾನಿಸ್ ಮೆಟಿರಿಯಲ್ ಯೂಸ್ ಮಾಡಿದ್ದಾರೆ. ಇದರ ಜೊತೆಗೆ ಇನ್ನರ್ ಜಾಕೆಟ್ ಹೈ ನೆಕ್ ಸ್ಲೀವ್ ಸ್ಟೈಲ್​ನಲ್ಲಿ ವಿನ್ಯಾಸ ಮಾಡಲಾಗಿದೆ. ಅಲ್ಲದೇ ಶರ್ಟ್ ಕೂಡ ಹೈ ನೆಕ್ ಸ್ವೀವ್ ಡಿಸೈನ್ ಹೊಂದಿದೆ. ಕಿಚ್ಚ ಸುದೀಪ್​ ಪ್ಲೇಟಡ್ ಹೈ ರಿಸೆ ವೈಡ್ ಲೆಗ್ ಪಾಂಟ್ಸ್ ಅನ್ನು ಧರಿಸಿಕೊಂಡಿದ್ದಾರೆ. ಈ ಕಾಸ್ಟೂಮ್​ಗೆ 30 ಸಾವಿರ ಮಣಿಗಳನ್ನು ಬಳಸಲಾಗಿದೆ.
/newsfirstlive-kannada/media/post_attachments/wp-content/uploads/2024/09/kiccha-1.jpg)
ಇನ್ನೂ ಮುಖ್ಯವಾಗಿ ಕಿಚ್ಚ ಸುದೀಪ್ ಧರಿಸಿದ ಜಾಕೆಟ್ ಬರೋಬ್ಬರಿ 6.5 ಕೆಜಿ ತೂಕವನ್ನು ಹೊಂದಿದೆ. ಈ ಕಾಸ್ಟ್ಯೂಮ್ ರೆಡಿ ಮಾಡಲು ಡಿಸೈನರ್​ಗಳು 10ಕ್ಕೂ ಹೆಚ್ಚು ದಿನ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಬಾಟಲ್ ಪೈಪ್ ಸ್ಟುಡಿಯೋದ ಸಿಗ್ನೆಚರ್ ಸ್ಟೈಲ್ ಇದಾಗಿದೆ. ಈ ಕಾಸ್ಟ್ಯೂಮ್ ಅನ್ನು ರೆಡಿ ಮಾಡಿದ್ದು ಡಿಸೈನರ್ ಭರತ್​ ಸಾಗರ್ ಅವರ ಮೂಲಕ ವಿನ್ಯಾಸ ಆಗಿದೆ. ಈ ಬಗ್ಗೆ ಖುದ್ದು ನ್ಯೂಸ್ ಫಸ್ಟ್​ಗೆ ಡಿಸೈನರ್ ಭರತ್ ಸಾಗರ್ ಅವರೇ ಮಾಹಿತಿ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us