ದಿಢೀರ್​ ಬಿಗ್​ಬಾಸ್​ಗೆ ಗುಡ್​ ಬೈ ಹೇಳಿದ ಕಿಚ್ಚ ಸುದೀಪ್​​; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

author-image
Gopal Kulkarni
Updated On
ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್​ ಶಾಕ್​; ಏಕಾಏಕಿ ಕುಸಿತ ಕಂಡ ವೀಕ್ಷಕರ ನೆಚ್ಚಿನ ಸೀರಿಯಲ್​
Advertisment
  • ಅಚ್ಚರಿ ರೀತಿಯಲ್ಲಿ ಬಿಗ್​ಬಾಸ್​ಗೆ ವಿದಾಯ ಹೇಳಿದ ಕಿಚ್ಚ ಸುದೀಪ್
  • 11ನೇ ಆವೃತ್ತಿಯೇ ಕೊನೆಯ ನಿರೂಪಣೆ ಎಂದು ಹೇಳಿದ್ದೇಕೆ ಕಿಚ್ಚ
  • ಎಕ್ಸ್​ ಖಾತೆಯಲ್ಲಿ ವಿದಾಯದ ಬಗ್ಗೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

ಸತತ 11 ವರ್ಷಗಳಿಂದ ಕಿಚ್ಚ ಸುದೀಪ್​ ಕನ್ನಡದ ಬಿಗ್​ಬಾಸ್​ನ್ನು ನಿರೂಪಿಸುತ್ತಾ ಬಂದಿದ್ದಾರೆ. ಸುದೀಪ್​ಗೆ ಸುದೀಪೇ ಸಾಟಿ ಎನ್ನುವ ಮಟ್ಟಕ್ಕೆ ಸುದೀಪ್ ಈ ಒಂದು ಕಾರ್ಯಕ್ರಮವನ್ನ ಹೆಗಲು ಮೇಲೆ ಹೊತ್ತುಕೊಂಡು ಸರಾಗವಾಗಿ ನಡೆಸಿಕೊಡುತ್ತಾ ಬಂದಿದ್ದಾರೆ. ಆದ್ರೆ ಈಗ ಬಿಗ್​ಬಾಸ್​ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಕಿಚ್ಚ ಸುದೀಪ್

ಇದನ್ನೂ ಓದಿ:BBK11: ನರಕದ ವಿವಾದ.. ಮಹಿಳಾ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ ಕಿಚ್ಚ ಸುದೀಪ್; ಕಾರಣವೇನು?

ಈ ಬಗ್ಗೆ ಟ್ವೀಟ್ ಮಾಡಿರುವ ಸ್ಯಾಂಡಲ್​ವುಡ್ ಸ್ಟಾರ್ ಕಿಚ್ಚ ಸುದೀಪ್​. ಬಿಗ್​ಬಾಸ್ 11ನೇ ಸೀಸನ್​ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಹೇಳಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸುದೀಪ್​ ಬಿಗ್ ಬಾಸ್ 11 ಕ್ಕೆ ಉತ್ತಮ ರೆಸ್ಪಾನ್ಸ್ ಕೊಟ್ಟಿರುವುದಕ್ಕೆ ಧನ್ಯವಾದಗಳು.

ಇದನ್ನೂ ಓದಿ:BBK11: ಜಗದೀಶ್ ಮನೆಯ ಕ್ಯಾಪ್ಟನ್ ಆಗ್ತಾರಾ? ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್!

ನನ್ನ ಹಾಗೂ ಶೋ ಮೇಲೆ ನಿಮಗೆಷ್ಟು ಪ್ರೀತಿ ಇದೆ ಎಂಬುದು ಮೊದಲ ವಾರ ಬಂದಿರುವ ಟಿವಿಆರ್ ನಿಂದಲೇ ತಿಳಿಯುತ್ತಿದೆ. 11 ವರ್ಷ ಈ ಪಯಣ ಅದ್ಬುತ . ಇದು ನನ್ನ ಕೊನೆಯ ಸೀಸನ್ . ನನ್ನ ನಿರ್ಧಾರವನ್ನ ಚಾನಲ್ ಮತ್ತು ಇಷ್ಟು ವರ್ಷ ಬಿಗ್ ಬಾಸ್ ವೀಕ್ಷಿಸಿದ ಜನರು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment