ಮೌನ ಮುರಿದ ಕಿಚ್ಚ ಸುದೀಪ್‌.. ಬಿಗ್​ಬಾಸ್​ನಲ್ಲಿ ಅವಮಾನ ಆಗಿದ್ದು ನಿಜನಾ? ಡೈರೆಕ್ಟರ್ ಪ್ರಕಾಶ್ ಬಗ್ಗೆ ಹೇಳಿದ್ದೇನು?

author-image
admin
Updated On
ಮೌನ ಮುರಿದ ಕಿಚ್ಚ ಸುದೀಪ್‌.. ಬಿಗ್​ಬಾಸ್​ನಲ್ಲಿ ಅವಮಾನ ಆಗಿದ್ದು ನಿಜನಾ? ಡೈರೆಕ್ಟರ್ ಪ್ರಕಾಶ್ ಬಗ್ಗೆ ಹೇಳಿದ್ದೇನು?
Advertisment
  • ಕಿಚ್ಚ ಸುದೀಪ್ ಇಲ್ಲದ ಬಿಗ್ ಬಾಸ್ ಬಗ್ಗೆ ಬಹಳಷ್ಟು ಚರ್ಚೆ
  • ಬಿಗ್​ಬಾಸ್​ಗೆ ಕಿಚ್ಚ ಸುದೀಪ್‌ ವಿದಾಯಕ್ಕೆ ಅಸಲಿ ಕಾರಣವೇನು?
  • ಬಿಗ್ ಬಾಸ್ ಕನ್ನಡದ ಡೈರೆಕ್ಟರ್ ಪ್ರಕಾಶ್ ನಡುವೆ ಮನಸ್ತಾಪ ಸತ್ಯನಾ?

ಬಿಗ್ ಬಾಸ್ ಸೀಸನ್ 11 ಇದೇ ನನ್ನ ಕೊನೆಯ ಸೀಸನ್ ಅಂತ ಕಿಚ್ಚ ಸುದೀಪ್ ಅವರು ತಮ್ಮ ಮಹತ್ವದ ನಿರ್ಧಾರ ತಿಳಿಸಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಸುದೀಪ್ ವಿದಾಯ ಘೋಷಿಸಿದ ಮೇಲೆ ಕನ್ನಡ ಕಿರುತೆರೆಯಲ್ಲೇ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ಸುದೀಪ್ ಇಲ್ಲದ ಬಿಗ್ ಬಾಸ್ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದ್ದು, ಕಿಚ್ಚನ ಬೇಸರಕ್ಕೆ ಕಾರಣ ಏನು ಅನ್ನೋದು ಬಹು ಚರ್ಚಿತ ವಿಚಾರವಾಗಿದೆ.

ಇದನ್ನೂ ಓದಿ: 10+1 ಸೀಸನ್.. ಬಿಗ್​​ಬಾಸ್​ಗೆ ದಿಢೀರ್‌ ಗುಡ್​​ ಬೈ ಹೇಳಿದ್ದೇಕೆ ಕಿಚ್ಚ ಸುದೀಪ್‌? 10 ಕಾರಣಗಳು ಇಲ್ಲಿವೆ! 

ಸೀಸನ್ 11ರ ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್ ಮುಗಿಯುವಷ್ಟರಲ್ಲೇ ಕಿಚ್ಚ ಸುದೀಪ್ ಅವರು ಮಹತ್ವದ ತೀರ್ಮಾನಕ್ಕೆ ಬಂದಿದ್ದರು. ಇದ್ದಕ್ಕಿದ್ದಂತ ಸುದೀಪ್ ಅವರ ನಿರ್ಧಾರಕ್ಕೆ ಅಚ್ಚರಿಗೆ ಕಾರಣವಾಗಿದೆ. ಬಿಗ್ ಬಾಸ್ ಪ್ರೇಕ್ಷಕರು, ಸುದೀಪ್ ಅಭಿಮಾನಿಗಳು ಆ ಶಾಕ್‌ನಿಂದ ಇನ್ನೂ ಹೊರಗಡೆಯೇ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಅಸಲಿಗೆ ಆಗಿದ್ದೇನು ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

publive-image

ಬಿಗ್​ಬಾಸ್​ಗೆ ಕಿಚ್ಚನ ವಿದಾಯಕ್ಕೆ ಅಸಲಿ ಕಾರಣವೇನು? ಬಿಗ್​ಬಾಸ್​ನಲ್ಲಿ ಸುದೀಪ್​ಗೆ ಅವಮಾನ ಆಗಿದ್ದು ನಿಜನಾ? ಸುದೀಪ್ ಹಾಗೂ ಬಿಗ್ ಬಾಸ್ ಕನ್ನಡದ ಡೈರೆಕ್ಟರ್ ಪ್ರಕಾಶ್ ನಡುವೆ ಮನಸ್ತಾಪ ಸತ್ಯನಾ? ಹೀಗೆ ಹತ್ತಾರು ಪ್ರಶ್ನೆಗಳು ಹಾಗೂ ವದಂತಿಗಳಿಗೆಲ್ಲಾ ಕಿಚ್ಚ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ಟ್ವೀಟ್ ಮಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಸುದೀಪ್ ಅವರೇ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸುದೀಪ್

ಕಿಚ್ಚನ ‘ಬಿಗ್’ ಸತ್ಯ!
ತಮ್ಮ ಟ್ವೀಟ್‌ಗೆ ಪ್ರೀತಿ ಮತ್ತು ಬೆಂಬಲ ಸೂಚಿಸಿದವರಿಗೆ ಧನ್ಯವಾದ ತಿಳಿಸಿರುವ ಕಿಚ್ಚ ಸುದೀಪ್ ಅವರು ಡೈರೆಕ್ಟರ್ ಪ್ರಕಾಶ್ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಡೈರೆಕ್ಟರ್ ಪ್ರಕಾಶ್ ತುಂಬಾ ಪ್ರತಿಭಾವಂತ & ಶಕ್ತಿಯುತ ವ್ಯಕ್ತಿ. ನಾನು ಡೈರೆಕ್ಟರ್ ಪ್ರಕಾಶ್ ಅವರ ಬಗ್ಗೆ ಗೌರವ ಹೊಂದಿದ್ದೇನೆ. ನನ್ನ ಜೊತೆ ಕೆಲಸ ಮಾಡ್ತಿರೋ ತಂಡ ಆರೋಪ ಎದುರಿಸುತ್ತಿದೆ. ಅನಗತ್ಯ ಆರೋಪ ಎದುರಿಸುತ್ತಿರುವಾಗ ಸುಮ್ಮನೆ ಕುಳಿತುಕೊಳ್ಳಲ್ಲ. ಸುದೀಪ್-ಪ್ರಕಾಶ್ ಡೈರೆಕ್ಟರ್ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment