2007ರಲ್ಲಿ ತಂದೆಯ ಕಣ್ಣ ಮುಂದೆಯೇ ಕಿಡ್ನಾಪ್ ಆಡಿದ್ದ ಬಾಲಕ
ಅಂದು ಗನ್ ತೋರಿಸಿ, ಬೆದರಿಸಿ ಕಿಡ್ನಾಪ್ ಮಾಡಿದ್ದ ಕಿರಾತಕರು
ಅಪಹರಣಕಾರರಿಗೆ ಸರಿಯಾಗಿ ಶಿಕ್ಷೆ ಸಿಗುವಂತೆ ಮಾಡಿದ ವಕೀಲ
17 ವರ್ಷದ ಹಿಂದೆ ಅಪಹರಣಕ್ಕೊಳಗಾದ ಬಾಲಕನೋರ್ವ ಈಗ ವಕೀಲನಾಗಿ ತನ್ನ ಪ್ರಕರಣವನ್ನು ತಾನೇ ಕೋರ್ಟ್ನಲ್ಲಿ ವಾದಿಸಿದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಈ ಘಟನೆಗೆ ಸಾಕ್ಷಿಯಾಗಿದೆ.
ಆಗ್ರಾದ ಹರ್ಷ್ ಗಾರ್ಗ್ ಅವರು 17 ವರ್ಷದ ಹಿಂದೆ ಅಪಹರಣಕ್ಕೆ ಒಳಗಾಗಿದ್ದರು. 2007ರಲ್ಲಿ ಕಿಡ್ನಾಪ್ಗೆ ಒಳಗಾಗಿದ್ದರು. ಈ ಫಟನೆಯ ಬಳಿಕ ವಕೀಲನಾಗಬೇಕೆಂದು ಬಯಸಿ ಕೊನೆಗೆ ಅದೇ ವೃತ್ತಿಯನ್ನು ಬಯಸಿದರು. ಈ ವರ್ಷ ಜೂನ್ ತಿಂಗಳಿನಲ್ಲಿ ತನ್ನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ನೊಂದಿಗೆ ವಾದ ಮಂಡಿಸಿದ್ದಾರೆ ಗೆದ್ದಿದ್ದಾರೆ.
ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿಗೆ ಗಿನ್ನೆಸ್ ವಿಶ್ವ ದಾಖಲೆ ಗರಿ.. 24 ಸಾವಿರ ನೃತ್ಯ ಪ್ರದರ್ಶನ ನೀಡಿದ ನಟ!
ಹರ್ಷ್ ಗಾರ್ಗ್ ವಾದದ ಬಳಿಕ ನ್ಯಾಯಾಲಯವು ಆರೋಪಿಗಳಾದ ಗುಡ್ಡನ್ ಕಚ್ಚಿ, ರಾಜೇರ್ಶ್ ಶರ್ಮಾ, ರಾಜ್ ಕುಮಾರ್, ಫತೇ ಸಿಂಗ್ ಅಲಿಯಾಸ್ಚಿಗ್ಗಾ, ಅಮರ್ ಸಿಂಗ್, ಬಲ್ಟೀರ್, ರಾಮ್ ಪ್ರಕಾಶ ಮತ್ತು ಭಿಕಮ್ ಅಲಿಯಾಸ್ ಭಿಕಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಂದು ಏನಾಗಿತ್ತು?
ಹರ್ಷ್ ಗಾರ್ಗ್ ಅವರು ಫೆಬ್ರವರಿ 10, 2007ರಂದು ತಂದೆ ರವಿ ಗಾರ್ಗ್ ಜೊತೆಗೆ ಸ್ಥಳೀಯ ಮೆಡಿಕಲ್ ಸ್ಟೋರ್ನಲ್ಲಿ ಕುಳಿತ್ತಿದ್ದರು. ಸಂಜೆ 7 ಗಂಟೆ ಸುಮಾರಿಗೆ ರಾಜಸ್ಥಾನ ನೋಂದಣಿಯ 4 ಚಕ್ರದ ವಾಹನ ಅಲ್ಲಿಗೆ ಬಂದಿತ್ತು.
ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಐಫೋನ್ 17 ಕುರಿತ ಮಾಹಿತಿ.. ಡಿಸ್ಪ್ಲೇನಲ್ಲಿ ದೊಡ್ಡ ಬದಲಾವಣೆ
ಕಾರಿನಿಂದ ಇಳಿದ ಅಪಹರಣಕಾರರು ನೇರವಾಗಿ ರವಿ ಗಾರ್ಗ್ ಬಳಿ ಬಂದು ಗನ್ ತೋರಿಸಿ ಮಗನನ್ನು ಕಿಡ್ನಾಪ್ ಮಾಡಿದ್ದಾರೆ. ಈ ವೇಳೆ ತಡೆದ ರವಿ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ 55 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅದೇ ವರ್ಷ ಮಾರ್ಚ್ 7 ರಂದು ಹರ್ಷ್ ಗಾರ್ಗ್ ತಪ್ಪಿಸಿಕೊಳ್ಳುವ ಮೂಲಕ ಬಚಾವ್ ಆದರು. ಕೊನೆಗೆ ಹರ್ಷ್ ಗಾರ್ಗ್ನನ್ನು ಹಿಂಬಾಲಿಸುವ ವೇಳೆ ಪೊಲೀಸರು ಇರೋದು ಗೊತ್ತಾಯಿತು. ಕೊನೆಗೆ ಪರಾರಿಯಾಗಲು ಹೊರಟ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ