ಮುಂದಿನ ವರ್ಷ ಬರಲಿರುವ ಐಫೋನ್ 17
ಬಿಡುಗಡೆಗೊಂಡು ಮಾರಾಟ ಪ್ರಾರಂಭಿಸಿದ iPhone 16
ಐಫೋನ್ 17 ಡಿಸ್ಪ್ಲೇ ಬರಲಿದೆಯಂತೆ ಬಹುದೊಡ್ಡ ಬದಲಾವಣೆ
ಐಫೋನ್ 16 (iPhone 16) ಸರಣಿ ಬಿಡುಗಡೆಗೊಂಡು ಮಾರಾಟ ಪ್ರಾರಂಭಿಸಿದೆ. ಈಗಾಗಲೇ ಜನರು ಹೊಸ ಐಫೋನ್ ಖರೀದಿಸಲು ಮುಂಬೈ, ದೆಹಲಿಯಂತಹ ನಗರಗಳಲ್ಲಿ ಕ್ಯೂನಿಂತ ದೃಶ್ಯವನ್ನು ನೋಡಿರಬಹುದು. ಅಷ್ಟರಮಟ್ಟಿಗೆ ಐಫೋನ್ ಕ್ರೇಜ್ ಹೆಚ್ಚಾಗಿದ್ದು, ಅದರಲ್ಲೂ ಹೊಸ ಐಫೋನ್ಗಾಗಿ ಮುಗಿಬಿದ್ದಿದ್ದಾರೆ. ಅದರೀಗ ಐಫೋನ್ 16 ಸರಣಿ ಬಿಡುಗಡೆಗೊಂಡ ಬಳಿಕ ಐಫೋನ್ 17 (iPhone 17) ಕುರಿತಾದ ಮಾಹಿತಿ ಸೋರಿಕೆಯಾಗಿದೆ.
ಮುಂದಿನ ವರ್ಷ ಐಫೋನ್ 17 ಸರಣಿ ಬಿಡುಗಡೆಗೊಳ್ಳಲಿದೆ. ಆದರೀಗ ಬಿಡುಗಡೆಗೂ ಮುನ್ನವೇ ಅದರ ಕುರಿತಾದ ಮಾಹಿತಿ ಸೋರಿಕೆಯಾಗಿದೆ. ಪ್ರಮುಖ ಡಿಸ್ಪ್ಲೇ ಅಪ್ಗ್ರೇಡ್ ಕುರಿತಂತೆ ಮಾಹಿತಿ ಹರಿದಾಡುತ್ತಿದೆ.
ಇದನ್ನೂ ಓದಿ: Amazon Great Indian Festival Sale: ಬರೀ ₹70000ಕ್ಕೆ ಖರೀದಿಸಿ SAMSUNG S23 ಅಲ್ಟ್ರಾ ಸ್ಮಾರ್ಟ್ಫೋನ್
ರಾಸ್ ಯಂಗ್ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಐಫೋನ್ 17 ಪ್ರೊಮೋಷನಲ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಅಂದರೆ 120Hz ಡಿಸ್ಪ್ಲೇ ಜೊತೆಗೆ ಐಫೋನ್ 17 ಬರಲಿದೆ. ಪ್ರೊ ಮಾಡೆಲ್ಗಾಗಿ ಪ್ರೊಮೋಷನಲ್ ತಂತ್ರಜ್ಞಾನವನ್ನು ಅಳವಡಿಸಲಾಗಿತ್ತು. ಆದರೆ ಸ್ಟ್ಯಾಂಡರ್ಡ್ ಮಾಡೆಲ್ಗಳಿಗೂ ಅದು ಬರಲಿದೆ ಎಂಬ ವದಂತಿಗಳಿವೆ. ಇದು ಸುಲಭವಾದ ಸ್ಕ್ರೋಲಿಂಗ್, ವಿಡಿಯೋ ಪ್ಲೇಬ್ಯಾಕ್ ಅನುಭವ ಒದಗಿಸುತ್ತದೆ’ ಎಂದು ಹೇಳಿದೆ.
ಇದನ್ನೂ ಓದಿ: Mark Zuckerberg ಧರಿಸಿರುವ ವಾಚ್ನ ಬ್ರ್ಯಾಂಡ್ ಯಾವುದು? ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ
ಸದ್ಯ 60Hz ರಿಫ್ರೆಶ್ ದರದಲ್ಲಿ ಕಾರ್ಯ ನಿರ್ವಹಿಸುವ ಐಫೋನ್ ಮಾದರಿಗಳು ದೊಡ್ಡ ಅಪ್ಗ್ರೇಡ್ ಅನ್ನು ಗುರುತಿಸುತ್ತಿದೆ. ಅಂದಹಾಗೆಯೇ ಇದು ಸದ್ಯ ಸೋರಿಕೆಯಾದ ಮಾಹಿತಿಯಾಗಿದ್ದು, ಮುಂದಿನ ವರ್ಷ ಐಫೋನ್ 17 ಬಿಡುಗಡೆಗೊಳ್ಳಲಿದೆ. ಅಲ್ಲಿ ತನಕ ಅದರ ಬಿಡುಗಡೆಗಾಗಿ ಕಾಯಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ