Advertisment

ಐಸ್ ಕ್ರೀಂ​ ಕೊಡಿಸುವ ನೆಪದಲ್ಲಿ ಬಾಲಕನ ಕಿಡ್ನಾಪ್​.. 10 ಲಕ್ಷಕ್ಕೆ ಬೇಡಿಕೆ.. ಸಿಲಿಕಾನ್​ ಸಿಟಿ ಪೊಲೀಸರಿಗೆ ಆರೋಪಿ ಸಿಕ್ಕಿದ್ದೇಗೆ?

author-image
AS Harshith
Updated On
ಐಸ್ ಕ್ರೀಂ​ ಕೊಡಿಸುವ ನೆಪದಲ್ಲಿ ಬಾಲಕನ ಕಿಡ್ನಾಪ್​.. 10 ಲಕ್ಷಕ್ಕೆ ಬೇಡಿಕೆ.. ಸಿಲಿಕಾನ್​ ಸಿಟಿ ಪೊಲೀಸರಿಗೆ ಆರೋಪಿ ಸಿಕ್ಕಿದ್ದೇಗೆ?
Advertisment
  • ಸಿನಿಮಾ ಸ್ಟೈಲ್​ನಲ್ಲಿ ಬಾಲಕನ ಅಪಹರಿಸಿದ ಆರೋಪಿ
  • 24 ವರ್ಷದ ಯುವಕನಿಂದ 9 ವರ್ಷದ ಬಾಲಕನ ಕಿಡ್ನಾಪ್​
  • ಕಿಡ್ನಾಪ್​ ಮಾಡಿ ಪೋಷಕರಿಗೆ ಹತ್ತು ಲಕ್ಷ ರೂಪಾಯಿ ಬೇಡಿಕೆ

ಬೆಂಗಳೂರು: ಬಾಲಕನೋರ್ವನನ್ನು ಸಿನಿಮಾ ಸ್ಟೈಲ್ ನಲ್ಲಿ ಅಪಹರಣ ಮಾಡಿದ ಪ್ರಕರಣ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕತೋಗೂರು ಬಳಿ ನಡೆದಿದೆ. ಬ್ಯುಸಿನೆಸ್ ಲಾಸ್ ಅಗಿದ್ದಕ್ಕೆ ಕಿಡ್ನಾಪ್ ಮಾಡಲಾಗಿದೆ.

Advertisment

ಆರೋಪಿ ಮೊಹಮದ್ ಜಶಿಮುದ್ದೀನ್ ಶೇಕ್‌(24) ಎಂಬಾತನಿಂದ 9 ವರ್ಷದ ಬಾಲಕನ ಕಿಡ್ನಾಪ್ ಆಗಿದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.

publive-image

ಮೊಹಮ್ಮದ್ ಜಶಿಮುದ್ದೀನ್ ಜಾರ್ಖಾಂಡ್ ಮೂಲದವನಾಗಿದ್ದು,  ಬಾಲಕನನ್ನು ಐಸ್ ಕ್ರೀಮ್ ಆಮಿಷ ತೋರಿಸಿ ಕಿಡ್ನಾಪ್ ಮಾಡಲಾಗಿದೆ. ಅಂದಹಾಗೆಯೇ ಈ ಘಟನೆ ಜೂನ್​ 17 ನೇ ತಾರೀಖು ನಡೆದಿದೆ.

ಇದನ್ನೂ ಓದಿ: ಒಂದಲ್ಲ.. ಎರಡಲ್ಲ.. ದರ್ಶನ್​ ಮೇಲಿರೋ ಕ್ರಿಮಿನಲ್ ಕೇಸ್​ಗಳೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

Advertisment

ಮನೆ ಬಳಿಯಿದ್ದ ಬಾಲಕನಿಗೆ ಮೊಹಮದ್ ಜಶಿಮುದ್ದೀನ್ ಶೇಕ್‌ ಐಸ್ ಕ್ರೀಂ ಕೊಡಿಸುವುದಾಗಿ ಆಸೆ ತೋರಿಸಿ ಕಿಡ್ನಾಪ್ ಮಾಡಿದ್ದಾನೆ. ಬಳಿಕ ಪೋಷಕರಿಗೆ ಕರೆ ಮಾಡಿ ಹತ್ತು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಬಳಿಕ ಪದೇ ಪದೇ ಲೋಕೇಶನ್ ಬದಲಿಸುತ್ತಾ ಚಳ್ಳೇಹಣ್ಣು ತಿನ್ನಿಸಲು ನೋಡಿದ್ದಾನೆ.

publive-image

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಕೊಟ್ಟ ರೋಹಿತ್, ವಿರಾಟ್.. ಅಫ್ಘಾನ್ ವಿರುದ್ಧ ಏನೆಲ್ಲ ಆಯಿತು ಗೊತ್ತಾ?

ಕೊನೆಗೆ ಬಾಲಕನನ್ನ ರಕ್ಷಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿ ಮೊಹಮದ್ ಜಶಿಮುದ್ದೀನ್ ಶೇಕ್​ನನ್ನು ಅರೆಸ್ಟ್ ಮಾಡಿದ್ದಾರೆ. 18 ನೇ ತಾರೀಖು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ.

Advertisment

ಇದನ್ನೂ ಓದಿ: ದರ್ಶನ್​ ‘ಡೆವಿಲ್’​ ಸಿನಿಮಾಗೆ ಬಂಡವಾಳ ಹಾಕಿದ್ದು ಈ ನಾಯಕ! ಶೂಟಿಂಗ್ ಸ್ಥಗಿತವಾಗಿ ಕಣ್ಣೀರು

ಪೊಲೀಸರ ಕ್ಷೀಪ್ರ ಕಾರ್ಯಚರಣೆಯಿಂದ ಬಾಲಕ ಪೋಷಕರ ಮಡಿಲು ಸೇರಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment