500ನೇ ಅಂತರಾಷ್ಟ್ರೀಯ ಪಂದ್ಯ ಆಡಲು ಕಿಂಗ್ ಕೊಹ್ಲಿ ರೆಡಿ..!
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡಿಯುತ್ತಾರಾ ಕೊಹ್ಲಿ..?
ದಿ ಗ್ರೇಟ್ ಸಚಿನ್-ಧೋನಿ ಸಾಲಿಗೆ ಸೇರಲಿರುವ ಕಿಂಗ್ ಕೊಹ್ಲಿ..!
ಟ್ರಿನಿಡಾಡ್ ಟೆಸ್ಟ್. ಸರಣಿ ಗೆಲುವಿನ ದೃಷ್ಟಿಯಿಂದ ಈ ಪಂದ್ಯ ಟೀಮ್ ಇಂಡಿಯಾಗೆ ತುಂಬಾನೇ ಇಂಪಾರ್ಟೆಂಟ್. ಸರಣಿಯಲ್ಲಿ 1-0 ಮುನ್ನಡೆಯಲ್ಲಿರೋ ಭಾರತಕ್ಕೆ ಈ ಪಂದ್ಯ ಎಷ್ಟು ಮುಖ್ಯನೋ, ರನ್ ರಾಕ್ಷಸ ವಿರಾಟ್ ಕೊಹ್ಲಿಗೂ ಅದಕ್ಕಿಂತ ಮಹತ್ವವೆನಿಸಿದೆ. ಯಾಕಂದ್ರೆ ಟ್ರಿನಿಡಾಡ್ ಟೆಸ್ಟ್, ಕೊಹ್ಲಿ ಪಾಲಿಗೆ ಬರೀ ಪಂದ್ಯ ಆಗಿರಲ್ಲ. ಅದೊಂದು ವೃತ್ತಿಜೀವನದ ರಿಮಾರ್ಕೆಬಲ್ ಇನ್ನಿಂಗ್ಸ್ ಅನ್ನಿಸಿಕೊಳ್ಳಲಿದೆ.
ಟ್ರಿನಿಡಾಡ್ ಟೆಸ್ಟ್ ವಿಶ್ವಸಾಮ್ರಾಟನಿಗೆ ವೆರಿ ಸ್ಪೆಷಲ್
ಜುಲೈ 20. ಅಂದ್ರೆ ಭಾರತ-ವೆಸ್ಟ್ಇಂಡೀಸ್ ನಡುವಿನ 2ನೇ ಟೆಸ್ಟ್ ಆರಂಭಗೊಳ್ಳುವ ದಿನ. ಈ ದಿನ ಮಾಡ್ರನ್ ಕ್ರಿಕೆಟ್ ದೊರೆ ಅನ್ನಿಸಿಕೊಂಡ ವಿರಾಟ್ ಕೊಹ್ಲಿ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಅಂದು ಪ್ಯಾಡ್ ಕಟ್ಟಿ ಕಣಕ್ಕಿಳಿದ್ರೆ ಸಾಕು, ಹೊಸ ಭಾಷ್ಯ ರಚನೆಯಾಗಲಿದೆ. ಇಡೀ ಕ್ರಿಕೆಟ್ ಜಗತ್ತು ಅಂದು ಕೊಹ್ಲಿ ಜಪ ಮಾಡಲಿದೆ. ಯಾಕಂದ್ರೆ ಅಂದು ರನ್ ಮಷೀನ್ ಆಡ್ತಿರೋದು ಸಾಮಾನ್ಯ ಪಂದ್ಯವಲ್ಲ, ಅದು 500ನೇ ಅಂತರಾಷ್ಟ್ರೀಯ ಪಂದ್ಯ ಆಗಿರಲಿದೆ.
ಹೌದು, ಬರೀ ಕೊಹ್ಲಿಯಷ್ಟೇ ಅಲ್ಲ, ಅಭಿಮಾನಿಗಳ ಭಕ್ತ ವರ್ಗ ಕೂಡ ಆ ಕ್ಷಣವನ್ನ ಕಣ್ತುಂಬಿಕೊಳ್ಳಲು ಬಲು ಜತನದಿಂದ ಕಾಯ್ತಿದ್ದಾರೆ. ವಿರಾಟ್ ಮೂರು ಮಾದರಿ ಕ್ರಿಕೆಟ್ನಲ್ಲಿ ಈವರೆಗೆ ಒಟ್ಟು 499 ಪಂದ್ಯಗಳನ್ನ ಆಡಿದ್ದಾರೆ. ವಿಂಡೀಸ್ ವಿರುದ್ಧ 2ನೇ ಟೆಸ್ಟ್ನಲ್ಲಿ ಕಣಕ್ಕಿಳಿದು ಬಿಟ್ರೆ ಕೊಹ್ಲಿ ಪಾಲಿಗೆ ಅದು 500ನೇ ಅಂತರಾಷ್ಟ್ರೀಯ ಪಂದ್ಯವಾಗಿರಲಿದೆ. ಜೊತೆಗೆ ಇದು ಭಾರತ-ವಿಂಡೀಸ್ ನಡುವಿನ 100ನೇ ಟೆಸ್ಟ್ ಕೂಡ. ಈ ಎರಡು ಕಾರಣಕ್ಕಾಗಿ ಟ್ರಿನಿಡಾಡ್ ಟೆಸ್ಟ್, ಸೆಂಚುರಿ ಸ್ಪೆಷಲಿಸ್ಟ್ ಕೊಹ್ಲಿಗೆ ವೆರಿ ವೆರಿ ಸ್ಪೆಷಲ್ ಅನ್ನಿಸಿದೆ.
ದಿ ಗ್ರೇಟ್ ಸಚಿನ್-ಧೋನಿ ಸಾಲಿಗೆ ಕಿಂಗ್ ಕೊಹ್ಲಿ..!
ಕಿಂಗ್ ಕೊಹ್ಲಿ ಮನೋಜ್ಞ ಆಟಕ್ಕೆ ಉಡೀಸ್ ದಾಖಲೆಗಳಿಗೆ ಲೆಕ್ಕವಿಲ್ಲ. ಈ ದಾಖಲೆಗಳ ಒಡೆಯ ಈಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮತ್ತು ಎಂಎಸ್ ಧೋನಿ ಸಾಲಿಗೆ ಸೇರುವ ಸಮಯ ಬಂದಿದೆ. ವಿಂಡೀಸ್ ಎದುರು 2ನೇ ಟೆಸ್ಟ್ ಆಡಿಬಿಟ್ರೆ ಭಾರತ ಪರ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ 4ನೇ ಹಾಗೂ ವಿಶ್ವದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಭಾರತ ಪರ 500* ಪಂದ್ಯ ಆಡಿದವರಿವರು
ಸಚಿನ್ ತೆಂಡೂಲ್ಕರ್ – 668
ಎಂಎಸ್ ಧೋನಿ – 538
ರಾಹುಲ್ ದ್ರಾವಿಡ್ – 509
ವಿರಾಟ್ ಕೊಹ್ಲಿ – 499
ಮೂರು ಮಾದರಿಯಲ್ಲಿ ಒಟ್ಟು 668 ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ 538 ಪಂದ್ಯ ಆಡಿದ್ದು 2ನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಹಾಲಿ ಹೆಡ್ಕೋಚ್ ರಾಹುಲ್ ದ್ರಾವಿಡ್ 509 ಪಂದ್ಯವನ್ನಾಡಿ ಧೋನಿ ನಂತರದ ಸ್ಥಾನದಲ್ಲಿದ್ರೆ, 499 ಪಂದ್ಯ ಆಡಿರುವ ವಿರಾಟ್ ಕೊಹ್ಲಿ 4ನೇ ಸ್ಥಾನ ಸಂಪಾದಿಸಿದ್ದಾರೆ.
ಸ್ಪೆಷಲ್ ಪಂದ್ಯದಲ್ಲಿ ಮೂಡಿ ಬರುತ್ತಾ 76ನೇ ಶತಕ..!
ವಿರಾಟ್ ಕೊಹ್ಲಿಗೆ ಟ್ರಿನಿಡಾಡ್ ಟೆಸ್ಟ್ 500ನೇ ಪಂದ್ಯ ಆಗಿರೋದ್ರಿಂದ ಭಾರೀ ನಿರೀಕ್ಷೆಗಳು ಗರಿಗೆದರಿವೆ. ಯಾಕಂದ್ರೆ ವಿಂಡೀಸ್ ಎದುರಿನ ಮೊದಲ ಟೆಸ್ಟ್ನಲ್ಲಿ ವಿರಾಟ್ ರನ್ ಭರಾಟೆ ನಡೆಸಿದ್ರು. ಅತ್ಯಾಮೂಲ್ಯ 76 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಸೆಂಚುರಿ ಸನಿಹದಲ್ಲಿ ಎಡವಿದ್ದ ರನ್ ಮಷೀನ್ ತ್ರಿಬಲ್ ಡಿಜಿಟ್ ದಾಟಲು ಹಪಾಹಪಿಸ್ತಿದ್ದಾರೆ. ಹೀಗಾಗಿ ಟ್ರಿನಿಡಾಡ್ ಟೆಸ್ಟ್ನಲ್ಲಿ ಕಿಂಗ್ ಕೊಹ್ಲಿ ಸೆಂಚುರಿ ಹೊಡೆಯುವ ನಿರೀಕ್ಷೆ ಹೆಚ್ಚಿದೆ. ಹಾಗೇನಾದ್ರು ಆಗಿಬಿಟ್ರೆ ಸ್ಪೆಷಲ್ ಪಂದ್ಯದಲ್ಲಿ 76ನೇ ಶತಕ ದಾಖಲಾಗಲಿದೆ.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡಿತಾರಾ ಕೊಹ್ಲಿ..?
ಟ್ರಿನಿಡಾಡ್ ಪಂದ್ಯದಲ್ಲಿ ವಿಶ್ವಸಾಮ್ರಾಟನಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಸುವರ್ಣ ಅವಕಾಶವಿದೆ. ಅದೇನಂದ್ರೆ ಟೆಸ್ಟ್ನಲ್ಲಿ 29ನೇ ಶತಕದ ಜೊತೆ ವಿದೇಶಿ ನೆಲದಲ್ಲಿ 4 ವರ್ಷಗಳ ಬಳಿಕ ಶತಕ ಸಿಡಿಸಿದಂತಾಗಲಿದೆ. ಕೊಹ್ಲಿ 2019 ರಲ್ಲಿ ಆಸೀಸ್ ವಿರುದ್ಧ ಏಷ್ಯದಾಚೆಗೆ ಕೊನೆ ಬಾರಿ ಶತಕ ಹೊಡೆದಿದ್ರು. ವಿಂಡೀಸ್ ಎದುರಿನ 2ನೇ ಟೆಸ್ಟ್ನಲ್ಲಿ ಮೂರಂಕಿ ದಾಟಿದ್ರೆ ಸುದೀರ್ಘ ವಿದೇಶಿ ಸೆಂಚುರಿ ಬರ ಕೊನೆಗೊಳ್ಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ