/newsfirstlive-kannada/media/post_attachments/wp-content/uploads/2024/04/VASUKI_NAG_1.jpg)
ಭಾರತದ ಗುಜರಾತ್​ನ ಕಚ್​​ನ ಕಲ್ಲಿದ್ದಲು ಗಣಿಯಲ್ಲಿ ಬೃಹತ್​​ ಗಾತ್ರದ ಪಳೆಯುಳಿಕೆಗಳು ಪತ್ತೆಯಾಗಿದ್ದು, ಇದು ವಿಶ್ವದ ಅತಿ ದೊಡ್ಡ ಹಾವು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದು 1,000 ಕೆ.ಜಿ ತೂಕವಿದ್ದು ಅನಕೊಂಡಾಗಿಂತಲೂ ದೈತ್ಯದ್ದು ಎಂದು ಅಂದಾಜಿಸಲಾಗಿದೆ. ಆದರೆ ಇದರ ತಲೆ ಬುರೆಡೆ ಇನ್ನುವರೆಗೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
2005ರಲ್ಲಿ ಪತ್ತೆಯಾಗಿರುವ ಈ ಬೃಹತ್ ಹಾವಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇದಕ್ಕೆ ವಾಸುಕಿ ಇಂಡಿಕಸ್ ಅಂತಾ ರೂರ್ಕಿ ಐಐಟಿಯ ಪ್ರೊಫೆಸರ್ ದೇಬ್​ಜಿತ್ ದತ್ತಾ ಸೇರಿ ವಿಜ್ಞಾನಿಗಳ ಸಂಶೋಧನಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸುಮಾರು 36 ರಿಂದ 50 ಅಡಿ ಉದ್ದವಿದ್ದು ಗಣಿಯಲ್ಲಿ ಭಾರೀ ಗಾತ್ರದ 27 ಪಳೆಯುಳಿಕೆಗಳು ಪತ್ತೆಯಾಗಿವೆ. ಇದರಲ್ಲಿ ಹಾವಿನ ತಲೆ ಬುರಡೆ ಇರುವ ಪಳೆಯುಳಿಕೆ ಇಲ್ಲ. ಇದಕ್ಕಾಗಿ ಸಂಶೋಧನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2024/04/SNAKE_1.jpg)
ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.. ಇದು ಅನಕೊಂಡಗಿಂತ ಅತಿ ದೊಡ್ಡ ವಾಸುಕಿ ಸರ್ಪ..!
ವಾಸುಕಿ ಇಂಡಿಕಸ್ ವಿಷಕಾರಿಯಾಗಿರಲಿಲ್ಲ ಎನ್ನುವುದು ಗೊತ್ತಾಗಿದೆ. ಇದು ಅನಕೊಂಡ, ಹೆಬ್ಬಾವಿನಂತೆ ನಿಧಾನವಾಗಿ ಚಲಿಸಿ ಬೇಟೆಯಾಡುತ್ತಿತ್ತು. ಜಾಗತಿಕವಾಗಿ ತಾಪಮಾನ ಹೆಚ್ಚಳದಿಂದ ಈ ಹಾವುಗಳ ಸಂತತಿ ಭಾರತದಲ್ಲಿ ನಶಿಸಿ ಹೋಗಿವೆ ಎಂದು ನಂಬಲಾಗಿದೆ. ಮೊಸಳೆ, ತಿಮಿಂಗಿಲ ಹಾಗೂ ಆಮೆಗಳ ಪಳೆಯುಳಿಕೆ ಅದರ ಸಮೀಪದಲ್ಲೇ ಸಿಕ್ಕಿವೆ. ಇದರಿಂದಾಗಿ ವಾಸುಕಿ ಇಂಡಿಕಸ್​ ದೊಡ್ಡ ದೊಡ್ಡ ಮೊಸಳೆ, ತಿಮಿಂಗಿಲ ಹಾಗೂ ಆಮೆಗಳನ್ನು ತಿನ್ನುತ್ತಿತ್ತು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us