Advertisment

ಮೊದಲ ಪಂದ್ಯದಲ್ಲೇ ಕೈಕೊಟ್ಟ ಸ್ಟಾರ್​.. ಟೀಂ ಇಂಡಿಯಾದ ಮೊದಲ ಪ್ರಯೋಗ ಫೇಲ್..!

author-image
Ganesh
Updated On
ಮೊದಲ ಪಂದ್ಯದಲ್ಲೇ ಕೈಕೊಟ್ಟ ಸ್ಟಾರ್​.. ಟೀಂ ಇಂಡಿಯಾದ ಮೊದಲ ಪ್ರಯೋಗ ಫೇಲ್..!
Advertisment
  • ಐರ್ಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ ತಂಡ
  • ಕ್ಯಾಪ್ಟನ್ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್
  • ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ

ಭಾರತ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಬುಧವಾರ ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಭಾರತದ ಪರವಾಗಿ ತಮ್ಮ 38 ನೇ T20I ಅರ್ಧಶತಕವನ್ನು ಬಾರಿಸಿದರು.

Advertisment

ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಐರ್ಲೆಂಡ್‌ನ್ನು 96 ರನ್‌ಗಳಿಗೆ ಆಲೌಟ್ ಮಾಡಿದ್ರು. ನಂತರ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್‌ಕೀಪರ್ ರಿಷಬ್ ಪಂತ್ 2024 ರ ಟಿ 20 ವಿಶ್ವಕಪ್‌ನ ತಮ್ಮ ಆರಂಭಿಕ ಪಂದ್ಯದಲ್ಲಿ ಭಾರತವನ್ನು ಎಂಟು ವಿಕೆಟ್‌ಗಳ ವಿಜಯದತ್ತ ಮುನ್ನಡೆಸಿ ಐರ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಜಯವನ್ನು ದಾಖಲಿಸಿತು.

ಇದನ್ನೂ ಓದಿ:ಮೋದಿ ಮುಂದೆ ನಾಯ್ಡು ಭಾರೀ ಡಿಮ್ಯಾಂಡ್.. ದೊಡ್ಡ ದೊಡ್ಡ ಹುದ್ದೆಗಳ ಮೇಲೆ ಕಣ್ಣು.. ಅವು ಯಾವುದು?

publive-image

ಆದರೆ ಟೀಂ ಇಂಡಿಯಾ ಮಾಡಿದ ಮೊದಲ ಪ್ರಯೋಗ ಫೇಲ್ ಆಗಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆರಂಭಿಕ ಆಟಗಾರರಾಗಿ ಕ್ರೀಸ್​ಗೆ ಬಂದಿದ್ದರು. ಕೊಹ್ಲಿ ಐದು ಬಾಲ್ ಆಡಿ ಕೇವಲ ಒಂದು ರನ್ ಬಾರಿಸಿ ಔಟ್ ಆಗಿ ಹೋಗಿದ್ದಾರೆ. ಇದರಿಂದ ಕೊಹ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅವರಿಗೆ ವಿಶ್ರಾಂತಿ ನೀಡಿದ್ದು ಹೆಚ್ಚಾಗಿದೆ. ಅದಕ್ಕೆ ಆಡಲಿಲ್ಲ, ಐಪಿಎಲ್​ನಲ್ಲಿ ಓಪನಿಂಗ್ ಬ್ಯಾಟ್ಸ್​ಮನ್​ ಆಗಿ ಮಿಂಚುವ ವಿರಾಟ್​ಗೆ ಇಲ್ಲಿ ಏನಾಗಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಕೊಹ್ಲಿ ಅದೇ ರೀತಿ ಕೆಟ್ಟ ಪ್ರದರ್ಶನ ಮುಂದುವರಿಸಿದ್ರೆ ಯಂಗ್​ಸ್ಟರ್​ ಜೈಸ್ವಾಲ್​ರನ್ನು ಕಣಕ್ಕೆ ಇಳಿಸಿ ಎಂಬ ಆಗ್ರಹ ಕೇಳಿಬಂದಿದೆ.

Advertisment

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment