/newsfirstlive-kannada/media/post_attachments/wp-content/uploads/2024/07/kishan3.jpg)
ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಧಾರಾವಾಹಿ ಎಂದರೆ ಅದು ನಿನಗಾಗಿ. ಸಿನಿಮಾ ನಾಯಕಿಯ ಕಥೆ ಇದಾಗಿದ್ದು, ಹೀರೋಯಿನ್ ಬದುಕು ಯಾವಾಗಲು ಬಿಂದಾಸ್ ಆಗಿರುತ್ತೆ, ಅವ್ರಿಗೇನು ಕಮ್ಮಿ ಅನ್ನೋ ಮಾತುಗಳು ಕೇಳಿ ಬರುವುದು ಸಹಜ. ಆದ್ರೇ ಅಸಲಿಯಲ್ಲಿ ಅವ್ರಿಗೂ ನೋವಿರುತ್ತೆ. ಬಣ್ಣ ಹಚ್ಚಿ ಕಣ್ಣಿಗೆ ಕಲರ್ಫುಲ್ ಆಗಿ ಕಾಣಿಸುವಷ್ಟು ಕಲಾವಿದರ ಬದುಕು ಇರೋದಿಲ್ಲ. ಇದೇ ಎಳೆಯನ್ನು ಇಟ್ಕೊಂಡು ಬಂದಿರೋ ನಿನಗಾಗಿ ಸೀರಿಯಲ್ ಅನ್ನು ಅದ್ಧೂರಿಯಾಗಿ ಲಾಂಚ್ ಮಾಡಲಾಗುತ್ತು.
ಇದನ್ನೂ ಓದಿ:ಸಿನಿಮಾವನ್ನೇ ಮೀರಿಸುತ್ತೆ ಈ ಸೀರಿಯಲ್.. ದಿವ್ಯಾ ಉರುಡುಗ ನಟನೆಗೆ ಕನ್ನಡಿಗರು ಕೊಟ್ರು ಫುಲ್ ಮಾರ್ಕ್ಸ್!
ಆದರೆ ದಿನ ಕಳೆದಂತೆ ನಿನಗಾಗಿ ಸೀರಿಯಲ್ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಸೀರಿಯಲ್ ಶುರುವಾದ ಮೊದಲ ಸಂಚಿಕೆ ಪ್ರೊಮೋದಲ್ಲೇ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿತ್ತು. ಇದೀಗ ಅದೇ ಸಾಲಿನಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ, ಡ್ಯಾನ್ಸರ್ ಕಿಶನ್ ಬಿಳಗಲಿ ನೋಡುಗರ ಕಣ್ಮನ ಸೆಳೆಯುತ್ತಿದ್ದಾರೆ. ಹೌದು, ಮೊನ್ನೆ ಮೊನ್ನೆಯಷ್ಟೇ ನಿನಗಾಗಿ ಸೀರಿಯಲ್ಗೆ ಎಂಟ್ರಿ ಕೊಟ್ಟ ಕಿಶನ್ ಬಿಳಗಲಿ ಈಗ ವಿಲನ್ ಆಗಿಬಿಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಸಸ್ಪೆನ್ಸ್ ಕ್ಯಾರೆಕ್ಟರ್ ಮೂಲಕ ಎಂಟ್ರಿ ಕೊಟ್ಟ ಕಿಶನ್ ರಚನಾಳನ್ನು ನೋಡಿ ಫುಲ್ ಫಿದಾ ಆಗಿಬಿಟ್ಟಿದ್ದಾರೆ. ರಚನಾ ನನ್ನವಳು, ಅವರನ್ನು ಯಾರು ಕಣ್ಣು ಎತ್ತಿ ನೋಡಬಾರದು. ಮಿಸ್ ಆಗಿ ನೋಡಿದ್ರೆ ಅಷ್ಟೇ ಅವರ ಕತೆ ಅನ್ನೋ ರೀತಿ ಮಾಡಿ ಬಿಡ್ತಾನೆ.
ಇನ್ನ, ಸದಾ ಒಂದಲ್ಲಾ ಒಂದು ವಿಭಿನ್ನವಾಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿರುವ ಕಿಶನ್ ಈಗ ಕಿರುತೆರೆ ಎಂಟ್ರಿ ಕೊಟ್ಟಿರುವುದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಜೊತೆಗೆ ಮೊದಲ ಸೀರಿಯಲ್ನಲ್ಲಿ ವೀಕ್ಷಕರನ್ನು ಮೆಚ್ಚಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಶನ್ ಅವರ ಅಭಿನಯದ ಬಗ್ಗೆ ಜೋರಾಗಿ ಮಾತುಕತೆ ನಡೆಯುತ್ತಿದೆ. ಸದ್ಯ ನಿನಗಾಗಿ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ