ಅಂದು ದಿನೇಶ್​ ಕಾರ್ತಿಕ್​ಗೆ ಅವಮಾನ ಮಾಡಿದ್ದ ಕೆಕೆಆರ್​​.. ಇಂದು ಸೇಡು ತೀರಿಸಿಕೊಳ್ತಾರಾ ಡಿಕೆ?

author-image
Ganesh Nachikethu
Updated On
ಆರ್​​ಸಿಬಿಗೆ ಬಿಗ್​ ಶಾಕ್​​.. ಎಲ್ಲಾ ಮಾದರಿ ಕ್ರಿಕೆಟ್​ಗೂ ಗುಡ್​ ಬೈ ಹೇಳ್ತಾರೆ ಸ್ಟಾರ್​ ಪ್ಲೇಯರ್​!
Advertisment
  • ಆರ್​​​ಸಿಬಿ ಸ್ಟಾರ್​​ ಫಿನಿಶರ್​​ ದಿನೇಶ್​ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​​
  • ಕೆಕೆಆರ್​​ಗೆ ಬಿಗ್​ ವಾರ್ನಿಂಗ್​ ಕೊಟ್ಟ ಸ್ಟಾರ್​​ ದಿನೇಶ್​​ ಕಾರ್ತಿಕ್​​..!
  • ಅಂದು ಅವಮಾನ ಮಾಡಿದ್ದ ಕೆಕೆಆರ್​ಗೆ ವಿರುದ್ಧ ಸೇಡು ತೀರಿಸಿಕೊಳ್ತಾರಾ?

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಶುರುವಾಗಿ ಒಂದು ವಾರ ಕಳೆದಿದೆ. ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಳಿಕ ನಡೆದ ಪಂಜಾಬ್​ ಕಿಂಗ್ಸ್​ ವಿರುದ್ಧ ಪಂದ್ಯದಲ್ಲಿ ರೋಚಕ ಗೆಲವು ಸಾಧಿಸಿತ್ತು. ಆರ್​ಸಿಬಿ ಕಳೆದ ಎರಡು ಪಂದ್ಯಗಳಲ್ಲೂ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಮೊದಲ ಪಂದ್ಯದಲ್ಲಿ ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್​ಗೆ ಬಂದ ದಿನೇಶ್​ ಕಾರ್ತಿಕ್​ 2 ಸಿಕ್ಸರ್​​, 3 ಫೋರ್​ ಸಮೇತ 38 ರನ್​ ಸಿಡಿಸಿ ಆರ್​​​ಸಿಬಿಗೆ ಆಸರೆಯಾಗಿದ್ದರು. ಇದಾದ ಬಳಿಕ ಪಂಜಾಬ್​ ವಿರುದ್ಧ ಪಂದ್ಯದಲ್ಲೂ ದಿನೇಶ್​ ಕಾರ್ತಿಕ್​ ಕೇವಲ 10 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 28 ರನ್​ ಸಿಡಿಸಿ ಆರ್​​ಸಿಬಿಯನ್ನು ಗೆಲ್ಲಿಸಿದ್ರು.

publive-image

ಇನ್ನು, ಇಂದು ಮೂರನೇ ಪಂದ್ಯದಲ್ಲಿ ಆರ್​​ಸಿಬಿ ಕೆಕೆಆರ್​ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲೂ ಎಲ್ಲರ ಕಣ್ಣು ದಿನೇಶ್​ ಕಾರ್ತಿಕ್​ ಮೇಲೆ ಇದೆ. ಈ ಬಗ್ಗೆ ಮಾತಾಡಿರೋ ದಿನೇಶ್​ ಕಾರ್ತಿಕ್​​, ಆರ್​​ಸಿಬಿಗೆ ಕಪ್​ ಗೆಲ್ಲಿಸೋದು ಅಷ್ಟೇ ನನ್ನ ಗುರಿ. ನನಗೆ ಆರ್​​ಸಿಬಿ ಬೇಕಾದಂತೆ ಆಡಲು ಸ್ವಾತಂತ್ರ್ಯ ಕೊಟ್ಟಿದೆ. ಹೀಗಾಗಿ ಕ್ರೀಸ್​ನಲ್ಲಿ ಇರೋವರೆಗೂ ಬೌಲರ್​ಗಳನ್ನು ಟಾರ್ಗೆಟ್​ ಮಾಡುತ್ತಲೇ ಇರುತ್ತೇನೆ ಎಂದರು. ಈ ಹಿಂದೆ ತನ್ನನ್ನು ಕ್ಯಾಪ್ಟನ್ಸಿಯಿಂದ ಕಿತ್ತು ಹಾಕಿ ಅವಮಾನ ಮಾಡಿದ್ದ ಕೆಕೆಆರ್​​ಗೆ ದಿನೇಶ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: RCBಯ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಫಾಫ್ v/s ರಿಂಕು, ರಸೆಲ್, ರಾಣಾ.. ಗೆಲ್ಲೋದ್ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment