newsfirstkannada.com

ಟೇಬಲ್​ ಟಾಪರ್ಸ್​ ನಡುವೆ ಬಿಗ್ ಫೈಟ್​.. ಕೋಲ್ಕತ್ತಾ ವಿರುದ್ಧ ರಾಯಲ್ಸ್​ಗೆ ಗೆಲುವು ಅಷ್ಟು ಸುಲಭವಲ್ಲ!

Share :

Published April 16, 2024 at 2:19pm

    ಐಪಿಎಲ್​ ಟೂರ್ನಿಯ 31ನೇ ಪಂದ್ಯದಲ್ಲಿ ಗೆಲ್ಲುವರು ಯಾರು?

    ಕ್ರಿಕೆಟ್ ಫ್ಯಾನ್ಸ್​ಗೆ ರಸದೌತಣ ಉಣ ಬಡಿಸುತ್ತಿರುವ ಐಪಿಎಲ್​

    ಸಂಜು ಸ್ಯಾಮ್ಸನ್​ ತಂಡಕ್ಕೆ ಟಕ್ಕರ್ ಕೊಡುತ್ತಾ ನೈಟ್​ ರೈಡರ್ಸ್​

ಭಾರತದಲ್ಲಿ ಐಪಿಎಲ್​ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಉಣ ಬಡಿಸುತ್ತಿವೆ. RCB-SRH ಪ್ಲೇಯರ್ಸ್​ ಮದಗಜಗಳಂತೆ ಕಾದಾಡಿದವು. ಆದರೆ ಅಂತಿಮ ಹೋರಾಟದಲ್ಲಿ 25 ರನ್​ಗಳಿದ ಬೆಂಗಳೂರು ಶರಣಾಯಿತು. ಸದ್ಯ ಇಂದಿನ ಐಪಿಎಲ್​ ಟೂರ್ನಿಯ 31ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​​​ ಜೊತೆ ರಾಜಸ್ಥಾನ್​ ರಾಯಲ್ಸ್​​ ತಂಡ ಸೆಣಸಾಟ ನಡೆಸಲಿದೆ.

ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ್​ ರಾಯಲ್ಸ್​ ಬಲಿಷ್ಠವಾಗಿದ್ದು ಕೇವಲ ಒಂದು ಮ್ಯಾಚ್ ಅನ್ನು ಮಾತ್ರ ಸೋತಿದ್ದು ಉಳಿದ 5 ಪಂದ್ಯಗಳಲ್ಲೂ ಅಮೋಘ ಗೆಲುವು ಪಡೆದುಕೊಂಡಿದೆ. ರಾಯಲ್ಸ್​ ಬ್ಯಾಟ್ಸ್​ಮನ್​ಗಳು, ಬೌಲರ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಂದಿನ ಕೋಲ್ಕತ್ತಾದ ಜೊತೆಗಿನ ಮ್ಯಾಚ್ ಗೆಲ್ಲುವುದು ರಾಜಸ್ಥಾನ್​ಗೆ ಚಾಲೆಂಜ್ ಎಂದು ಹೇಳಬಹುದು. ಏಕೆಂದರೆ ತವರಿನಲ್ಲಿ ಕೋಲ್ಕತ್ತಾವನ್ನ ಬಗ್ಗಿಸುವುದು ಕಷ್ಟ ಆಗಿದೆ.

ಇದನ್ನೂ ಓದಿ: ಕರುನಾಡ ಕುಳ್ಳ, ನಟ, ನಿರ್ಮಾಪಕ ದ್ವಾರಕೀಶ್‌ ನಿಧನ

ಇದನ್ನೂ ಓದಿ: ಧೋನಿ ಬ್ಯಾಟಿಂಗ್​ ಎಂಜಾಯ್ ಮಾಡಿದ ಬಾಲಿವುಡ್ ಸ್ಟಾರ್ಸ್​.. ಮಹಿ ಸಿಕ್ಸ್​ಗೆ ಕರೀನಾ, ನೇಹಾ ಫುಲ್ ಶಾಕ್ 

ಈ ಟೂರ್ನಿಯಲ್ಲಿ ಕೆಕೆಆರ್ ಬಿಗಿ ಹಿಡಿತ ಸಾಧಿಸಿದ್ದು ಹೊಡಿಬಡಿ ಆಟಗಾರರಿಂದಲೇ ತುಂಬಿದೆ. ಪಿಲಿಪ್ ಸಾಲ್ಟ್​, ಸುನಿಲ್ ಓಪನಿಂಗ್​​ ಅಲ್ಲಿ ಅಬ್ಬರಿಸ್ತಾರೆ. ಕ್ಯಾಪ್ಟನ್​ ಶ್ರೇಯಸ್ ಅಯ್ಯರ್, ರಸೆಲ್ ಹಾಗೂ ರಿಂಕು ಸಿಂಗ್ ಅಖಾಡಕ್ಕೆ ಇಳಿದರೆ ಪಂದ್ಯದ ದಿಕ್ಕನ್ನೇ ಬದಲಿಸೋ ಛಲವಂತರು. ತವರಿನಲ್ಲೇ ಪಂದ್ಯ ನಡೆಯುತ್ತಿದ್ದರಿಂದ ಕೆಕೆಆರ್ ವಿರುದ್ಧ ರಾಜಸ್ಥಾನ್​ಗೆ ಗೆಲುವು ಸ್ವಲ್ಪ ಕಷ್ಟ ಎನಿಸಬಹುದು.

ಈ ಎರಡು ಟೀಮ್​ಗಳು ಟೇಬಲ್​ ಟಾಪ್​ನಲ್ಲಿದ್ದು ರಾಜಸ್ಥಾನ್ ಮೊದಲ ಸ್ಥಾನದಲ್ಲಿದ್ರೆ, ಕೋಲ್ಕತ್ತಾ 2ನೇ ಸ್ಥಾನದಲ್ಲಿದೆ. ಒಂದು ವೇಳೆ ಇವತ್ತು ಕೋಲ್ಕತ್ತಾ ಗೆದ್ದರೂ ಸಮಾನ ಅಂಕ ಪಡೆಯಲಿದೆ. ಅದರಂತೆ ಇಂದಿನ ಪಂದ್ಯ ಸಂಜೆ 7:30ಕ್ಕೆ ಕೊಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ನಡೆಯಲಿದೆ. ಈಗಾಗಲೇ ಅಭಿಮಾನಿಗಳು ಸ್ಟೇಡಿಯಂನತ್ತ ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೇಬಲ್​ ಟಾಪರ್ಸ್​ ನಡುವೆ ಬಿಗ್ ಫೈಟ್​.. ಕೋಲ್ಕತ್ತಾ ವಿರುದ್ಧ ರಾಯಲ್ಸ್​ಗೆ ಗೆಲುವು ಅಷ್ಟು ಸುಲಭವಲ್ಲ!

https://newsfirstlive.com/wp-content/uploads/2024/04/RR_KKR.jpg

Load More