newsfirstkannada.com

ಸಂಡೇ ಅಂದ್ರೆ ಪ್ಯಾಟ್​ ಕಮಿನ್ಸ್ ಸೋತಿದ್ದೇ ಇಲ್ಲ.. ಇದಕ್ಕೆ ಬ್ರೇಕ್ ಹಾಕ್ತಾರಾ ಯಂಗ್​ ಕ್ಯಾಪ್ಟನ್​ ಶ್ರೇಯಸ್?

Share :

Published May 26, 2024 at 12:45pm

Update May 26, 2024 at 12:53pm

    ಇಂಡಿಯನ್ ಕ್ಯಾಪ್ಟನ್ ವರ್ಸಸ್ ಆಸ್ಟ್ರೇಲಿಯನ್ ಕ್ಯಾಪ್ಟನ್ ಮಧ್ಯೆ ಜಿದ್ದು

    ನಾಯಕನಾಗಿ ಪ್ಯಾಟ್​ ಕಮಿನ್ಸ್​ ಫೈನಲ್ ಮ್ಯಾಚ್ ಸೋತಿದ್ದೇ ಇಲ್ಲವಾ..?

    ಭಾರೀ ಕ್ಯುರಿಯಾಸಿಟಿ ಹುಟ್ಟು ಹಾಕಿದೆ ಇಂದಿನ ಐಪಿಎಲ್​ ಫೈನಲ್​ ಪಂದ್ಯ

ಐಪಿಎಲ್​ನ ಫೈನಲ್​ ಫೈಟ್​ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವರ್ಸಸ್ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗ್ತಿವೆ. ಆದ್ರೆ ಇಂದಿನ ಈ ಫೈಟ್ ಪರೋಕ್ಷವಾಗಿ ಇಂಡಿಯನ್ ವರ್ಸಸ್ ಆಸ್ಟ್ರೇಲಿಯನ್ ಕ್ಯಾಪ್ಟನ್ ಆಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲ, ಪ್ಯಾಟ್ ಕಮಿನ್ಸ್ ಮತ್ತೊಂದು ಕಿರೀಟಕ್ಕೆ ಮುಡಿಗೇರಿಸಿಕೊಳ್ಳುವ ಲೆಕ್ಕಚಾರದಲ್ಲಿದ್ರೆ, ಇತ್ತ ದಿ ಗ್ರೇಟ್ ಲೀಡರ್​ಗೆ ಶ್ರೇಯಸ್​ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ.

ಪ್ಯಾಟ್ ಕಮಿನ್ಸ್​ ದಿ ಗ್ರೇಟ್ ಲೀಡರ್.. ವಿಶ್ವ ಕ್ರಿಕೆಟ್​ನ ಸಕ್ಸಸ್​ಫುಲ್ ಕ್ಯಾಪ್ಟನ್​. ಜಸ್ಟ್ ಕೆಲವೇ ಕೆಲ ವರ್ಷಗಳಲ್ಲಿ ತಾನೇನು ಅನ್ನೋದನ್ನ ನಿರೂಪಿಸದ ನಾಯಕ. ಆದ್ರೀಗ ಇದೇ ಆಸಿಸ್ ನಾಯಕನಿಗೆ, ಐಪಿಎಲ್​ ಎಂಬ ಬಿಗ್ ಟೂರ್ನ್​​ಮೆಂಟ್ ಗೆಲ್ಲೋ ಚಾಲೆಂಜ್ ಮುಂದಿದೆ.

ಇದನ್ನೂ ಓದಿ: ಗೇಮಿಂಗ್‌ ಝೋನ್​ನಲ್ಲಿ ಅಗ್ನಿ ದುರಂತ ಕೇಸ್​; ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ

2021ರಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವದ ಚುಕ್ಕಾಣಿ ಹಿಡಿದ ಈತ, ವಿಶ್ವ ಕ್ರಿಕೆಟ್​ನಲ್ಲಿ ಮುಟ್ಟಿದೆಲ್ಲ ಚಿನ್ನ. ಆದ್ರೀಗ ಅದೇ ಅದೃಷ್ಟದ ಪರೀಕ್ಷೆಗೆ ಇಳಿಯುತ್ತಿರುವ ಪ್ಯಾಟ್ ಕಮಿನ್ಸ್​, ಫ್ರಾಂಚೈಸಿ ಲೀಗ್​ನಲ್ಲೂ ಹೊಸ ಮೈಲುಗಲ್ಲು ಬರೆಯಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್​ನಲ್ಲಿ ಟ್ರೋಫಿ ಗೆದ್ದ 4ನೇ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು, ತುದಿಗಾಲಿನಲ್ಲಿ ನಿಂತಿದ್ದಾರೆ.

ಟೆಸ್ಟ್ ಚಾಂಪಿಯನ್ ಶಿಪ್​ ಟು ಏಕದಿನ ವಿಶ್ವಕಪ್​..!

2021ರ ಡಿಸೆಂಬರ್​ನಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪಟ್ಟಕ್ಕೇರಿದ ಪ್ಯಾಟ್​​, ಈಗ ವಿಶ್ವ ಕ್ರಿಕೆಟ್​ನಲ್ಲೂ ಮಾಡ್ರನ್ ಡೇ ಕ್ಯಾಪ್ಟನ್ ಆಗಿ ಮಿಂಚುತ್ತಿದ್ದಾರೆ. 1 ವರ್ಷದ ಅವಧಿಯಲ್ಲಿ ಪ್ಯಾಟ್ ಕಮಿನ್ಸ್​ ನಾಯಕನಾಗಿ ಮಾಡಿದ ಸಾಲು ಸಾಲು ಸಾಧನೆಗಳೇ, ಇಂದು ಮಾಡ್ರನ್ ಡೇ ಕ್ರಿಕೆಟ್​ನ ಶ್ರೇಷ್ಠ ನಾಯಕನ ಪಟ್ಟಕ್ಕೇರುವಂತೆ ಮಾಡಿದೆ. ಅದಕ್ಕೆಲ್ಲ ಕಾರಣ, ಕಮಿನ್ಸ್ ನಾಯಕನಾಗಿ ಗೆದ್ದ ಟ್ರೋಫಿಗಳೇ ಆಗಿವೆ.

ಜೂನ್​ನಲ್ಲಿ ಭಾರತ ಎದುರು ಟೆಸ್ಟ್ ಚಾಂಪಿಯನ್​ಶಿಫ್​ಗೆ ಮುತ್ತಿಟ್ಟಿದ್ದ ಆಸ್ಟ್ರೇಲಿಯಾ, ನಂತರ ಜುಲೈನಲ್ಲಿ ಇಂಗ್ಲೆಂಡ್ ಎದುರು ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಬೆನ್ನಲ್ಲೇ ಏಕದಿನ ನಾಯಕತ್ವದ ಪಟ್ಟವೂ ಗಿಟ್ಟಿಸಿಕೊಂಡ ಕಮಿನ್ಸ್, ನವೆಂಬರ್​ನಲ್ಲಿ ನಡೆದ ಏಕದಿನ ವಿಶ್ವಕಪ್ ಕಿರೀಟವನ್ನು ಆಸ್ಟ್ರೇಲಿಯಾ ಮುಡಿಗೇರಿಸಿದ್ರು.

ವಿಶ್ವ ಗೆದ್ದ ನಾಯಕನಿಗೆ IPL ಫೈನಲ್ ಸವಾಲ್..!

ನಾಯಕನಾಗಿ ಕಮಿನ್ಸ್ ಕಂಡ ಯಶಸ್ಸು, ಐಪಿಎಲ್​ನಲ್ಲಿ ಕೋಟಿ ಕೋಟಿ ಜೇಬಿಗಿಳಿಸುವಂತೆ ಮಾಡಿತ್ತು. ಈ ವೇಳೆ ಹಲವರು ಟೀಕಿಸಿದ್ದು ಉಂಟು. ​ಏಕದಿನ, ಟೆಸ್ಟ್​ ನಾಯಕನಿಗೆ ಟಿ20 ಫಾರ್ಮೆಟ್​ನ ಗಮ್ಮುತ್ ಏನ್ ಗೊತ್ತು ಎಂದು ಪ್ರಶ್ನಿಸಿದ್ದು ಉಂಟು. ಆದ್ರೆ ಇದನ್ನೇ ಸಾವಲಾಗಿ ಸ್ವೀಕರಿಸಿದ ಕಮಿನ್ಸ್, ಆರೆಂಜ್ ಆರ್ಮಿಯ ಆಟದ ಶೈಲಿಯನ್ನೇ ಬದಲಿಸಿದರು. ತಂಡವನ್ನ ಫೈನಲ್​​ಗೂ ಕರೆತಂದ ಪ್ಯಾಟ್ ಕಮಿನ್ಸ್​, ಈಗ ಫೈನಲ್ ಗೆಲ್ಲುವ ಹೊಸ್ತಿಲ್ಲಿಲ್ಲ ಇದ್ದಾರೆ.

ಇದನ್ನೂ ಓದಿ: KKR vs SRH; ಗಂಭೀರ್ ಚಾಣಕ್ಷತನ, ಕ್ಯಾಪ್ಟನ್ ಕಮಿನ್ಸ್​ ಬುದ್ಧಿವಂತಿಕೆ.. 2 ತಂಡದ ಬಲಾಬಲ ಏನು?

ಪ್ಯಾಟ್ ಕಮಿನ್ಸ್​ ನಾಯಕತ್ವದ ಸನ್ ರೈಸರ್ಸ್ ಫೈನಲ್​​ಗೆ ಎಂಟ್ರಿ ನೀಡಿದ್ದೆ ತಡ, ಸಂಡೇ ಲಕ್ ಪ್ಯಾಟ್ ಕಮಿನ್ಸ್​ ಕೈ ಹಿಡಿಯುತ್ತೆ ಎಂಬ ಲೆಕ್ಕಚಾರಗಳು ನಡೀತಿವೆ. ಇದಕ್ಕೆ ಕಾರಣ, ನಾಯಕನಾಗಿ ಪ್ಯಾಟ್ ಕಮಿನ್ಸ್, ಸಂಡೇ ನಡೆದ ಮಹತ್ವದ ಫೈನಲ್ ಪಂದ್ಯಗಳಲ್ಲಿ ಸೋತಿದ್ದೇ ಇಲ್ಲ. ಆದ್ರೀಗ ಈ ಶ್ರೇಷ್ಠ ನಾಯಕನ ಎದುರು, ಯಂಗ್ ಕ್ಯಾಪ್ಟನ್ ಶ್ರೇಯಸ್​ ತೊಡೆ ತಟ್ಟಿದ್ದಾರೆ. ಕ್ಯಾಪ್ಟನ್ ಪ್ಯಾಟ್ ತಂತ್ರಕ್ಕೆ, ಹೈಪ್ರೆಶರ್​ ಗೇಮ್​ನಲ್ಲಿ ಯಾವ ರೀತಿಯ ಪ್ರತಿತಂತ್ರಗಳನ್ನ ಹೆಣೆಯುತ್ತಾರೆ ಅನ್ನೋದು, ಭಾರೀ ಕ್ಯುರಿಯಾಸಿಟಿ ಹುಟ್ಟಿಹಾಕಿದೆ.

ಇದನ್ನೂ ಓದಿ: ನಿತ್ಯ ಲೈಂಗಿಕ ಕಿರುಕುಳ.. ತನ್ನ ಮೇಲೆ ಅತ್ಯಾಚಾರ ಎಸಗ್ತಿದ್ದ ವ್ಯಕ್ತಿಯನ್ನ ಕೊಂದ ಬಾಲಕ

ಇಂದಿನ ಕದನ ಪರೋಕ್ಷ ಇಂಡಿಯನ್ ಕ್ಯಾಪ್ಟನ್ ವರ್ಸಸ್ ಆಸ್ಟ್ರೇಲಿಯನ್ ಕ್ಯಾಪ್ಟನ್ ಅಂತಾನೇ ಬಿಂಬಿತವಾಗಿದ್ದು, ಏಕದಿನ ವಿಶ್ವಕಪ್ ಸೋಲಿಗೆ ಪಾಠ ಕಲಿಸಬೇಕು ಅನ್ನೋದು, ಬಹುತೇಕ ಭಾರತೀಯರ ಆಶಯ. ಇದಕ್ಕೆ ಶ್ರೇಯಸ್ ಅಯ್ಯರ್, ಯಾವ ರೀತಿಯ ಉತ್ತರ ನೀಡ್ತಾರೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಂಡೇ ಅಂದ್ರೆ ಪ್ಯಾಟ್​ ಕಮಿನ್ಸ್ ಸೋತಿದ್ದೇ ಇಲ್ಲ.. ಇದಕ್ಕೆ ಬ್ರೇಕ್ ಹಾಕ್ತಾರಾ ಯಂಗ್​ ಕ್ಯಾಪ್ಟನ್​ ಶ್ರೇಯಸ್?

https://newsfirstlive.com/wp-content/uploads/2024/05/KKR_SRH_FINAL.jpg

Load More