newsfirstkannada.com

​ಸ್ಟಾರ್ಕ್​ ಕೊಟ್ಟ ಶಾಕ್​ಗೆ ಹೈದ್ರಾಬಾದ್​ ಕಂಗಾಲ್.. 3ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಕೆಕೆಆರ್

Share :

Published May 27, 2024 at 6:44am

Update May 27, 2024 at 6:45am

    ಬೌಂಡರಿ-ಸಿಕ್ಸರ್​ ಆರ್ಭಟಕ್ಕೆ ಸುಸ್ತಾದ ಹೈದರಾಬಾದ್​.!

    ಹೈದರಾಬಾದನ್ನು 113 ರನ್​ಗೆ ಕಟ್ಟಿ ಹಾಕಿದ ಕೆಕೆಆರ್​

    ಕುಸಿದ ಪ್ಯಾಟ್​ ಕಮಿನ್ಸ್​ ಆತ್ಮವಿಶ್ವಾಸ.. ಕೆಕೆಆರ್​ಗೆ ಟ್ರೋಫಿ

ಕಳೆದ 2 ತಿಂಗಳಿಂದ ರಂಜಿಸಿದ ಕ್ರಿಕೆಟ್​ ಜಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ. ಫೈನಲ್​ ಫೈಟ್​ನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​ಗೆ ಶಾಕ್​ ಕೊಟ್ಟು, ಕೆಕೆಆರ್​ ಐಪಿಎಲ್​​ ಕಿರೀಟಕ್ಕೆ ಮುತ್ತಿಕ್ಕಿದೆ. 3ನೇ ಬಾರಿ ಐಪಿಎಲ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 

ಟೂರ್ನಿಯುದ್ದಕ್ಕೂ ಸಾಲಿಡ್​ ಪರ್ಫಾಮೆನ್ಸ್​ ನೀಡಿ ಫೈನಲ್ಸ್​ಗೆ ರಾಯಲ್​ ಎಂಟ್ರಿ ಕೊಟ್ಟಿದ್ದ ಹೈದ್ರಾಬಾದ್​ ತಂಡ ಆರಂಭದಲ್ಲೇ ಎಡವಿತು. ನಾಯಕ ಪ್ಯಾಟ್​ ಕಮಿನ್ಸ್​ ಟಾಸ್​ ಗೆದ್ದು ತೆಗೆದುಕೊಂಡ ನಿರ್ಧಾರವೇ ತಂಡದ ಗೆಲುವಿಗೆ ಮುಳುವಾಗಿಬಿಡ್ತು. ಚೆಪಾಕ್​ ಅಂಗಳದಲ್ಲಿ ಇದ್ರ ಅಡ್ವಾಂಟೇಜ್​ ತೆಗೆದುಕೊಂಡು ಆರ್ಭಟಿಸಿದ ಕೆಕೆಆರ್​​, ಗೆಲುವಿನ ನಗಾರಿ ಬಾರಿಸಿತು. 3ನೇ ಬಾರಿ ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಿತು.

ಮಿಚೆಲ್​ ಸ್ಟಾರ್ಕ್​ ಕೊಟ್ಟ ಶಾಕ್​ಗೆ ಹೈದ್ರಾಬಾದ್​ ಕಂಗಾಲ್​.!

ಫೈನಲ್​ ಫೈಟ್​ನಲ್ಲಿ ಟಾಸ್​ ಗೆದ್ದ ಪ್ಯಾಟ್​ ಕಮಿನ್ಸ್​ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್​​ ಆಯ್ದುಕೊಂಡ್ರು. ಆದ್ರೆ, ಕಮಿನ್ಸ್​​ ಲೆಕ್ಕಾಚಾರ ಆರಂಭದಲ್ಲೇ ಉಲ್ಟಾ ಹೊಡೀತು. ಮೊದಲ ಓವರ್​ನಲ್ಲೇ ಮಿಚೆಲ್​​ ಸ್ಟಾರ್ಕ್​​ ಶಾಕ್​ ಕೊಟ್ರು. ಅಭಿಶೇಕ್​ ಶರ್ಮಾ 2 ರನ್​ಗಳಿಸಿ ನಿರ್ಗಮಿಸಿದ್ರು. 2ನೇ ಓವರ್​​ನಲ್ಲಿ ವೈಭವ್​ ಅರೋರಾ, ಟ್ರಾವಿಸ್​ ಹೆಡ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು.

ಪವರ್​ ಪ್ಲೇನಲ್ಲೇ 3 ವಿಕೆಟ್​ ಡಮಾರ್​, ಕುಸಿದ SRH.!

ಮೊದಲ 2 ಓವರ್​ನಲ್ಲಿ 2 ವಿಕೆಟ್​ ಕಳೆದುಕೊಂಡ ಸನ್​ರೈಸರ್ಸ್​ ಹೈದ್ರಾಬಾದ್​​, ಮಿಚೆಲ್​ ಸ್ಟಾರ್ಕ್​ ಅವಕಾಶವನ್ನೇ ನೀಡಲಿಲ್ಲ. ನಿಧಾನಕ್ಕೆ ಕ್ರಿಸ್​ ಕಚ್ಚಿ ನಿಲ್ಲೋ ಯತ್ನದಲ್ಲಿದ್ದ ರಾಹುಲ್​ ತ್ರಿಪಾಠಿಯನ್ನ ಖೆಡ್ಡಾಗೆ ಕೆಡವಿದ್ರು. ಬಳಿಕ ಕಣಕ್ಕಿಳಿದ ಬರ್ತ್​​​ ಡೇ ಬಾಯ್​​ ನಿತಿಶ್​​ ರೆಡ್ಡಿ 13 ರನ್​​ಗಳಿಸಿ ಆಟ ಅಂತ್ಯಗೊಳಿಸಿದ್ರು.

ಬೌಲರ್​ಗಳ ಪರಾಕ್ರಮ, SRH ಬ್ಯಾಟರ್​​​ಗಳ ಪರೇಡ್.!

ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡದ ಬೌಲರ್​​ಗಳು ಪರಾಕ್ರಮದ ಮುಂದೆ ಸನ್​ರೈಸರ್ಸ್​ ಬ್ಯಾಟರ್ಸ್​​ ಮಕಾಡೆ ಮಲಗಿದ್ರು. ಸೌತ್​ ಆಫ್ರಿಕನ್​ ಸ್ಟಾರ್​​ಗಳಾದ ಏಡೆನ್​ ಮರ್ಕರಮ್​, ಹೆನ್ರಿಚ್​ ಕ್ಲಾಸೆನ್​​ ಎಚ್ಚರಿಕೆಯ ಆಟಕ್ಕೆ ಮುಂದಾದ್ರು. ಆದ್ರೆ, ಬಿಗ್​ಸ್ಕೋರ್​ ಕಲೆ ಹಾಕುವಲ್ಲಿ ಎಡವಿದ್ರು. ಆ್ಯಂಡ್ರೆ ರೆಸೆಲ್​​​ ಮರ್ಕರಮ್​ಗೆ, ಹರ್ಷಿತ್​ ರಾಣಾ ಕ್ಲಾಸೆನ್​ ಆಟಕ್ಕೆ ಬ್ರೇಕ್​ ಹಾಕಿದ್ರು.

ಬಳಿಕ ಕಣಕ್ಕಿಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ತಂಡಕ್ಕೆ ನೆರವಾಗಲಿಲ್ಲ. ನಾಯಕ ಪ್ಯಾಟ್​ ಕಮಿನ್ಸ್​ ಗಳಿಸಿದ 24 ರನ್​ಗಳೇ ತಂಡ ಪರ ಹೈಯೆಸ್ಟ್​ ಸ್ಕೋರ್​ ಆಯ್ತು. ಕೇವಲ 18.3 ಓವರ್​​ಗಳಲ್ಲಿ ಆಲೌಟ್​ ಆದ ಸನ್​ರೈಸರ್ಸ್​ ಹೈದ್ರಾಬಾದ್​ ಕೇವಲ 113 ರನ್​ಗಳನ್ನ ಕಲೆ ಹಾಕಿತು.

ಇದನ್ನೂ ಓದಿ: VIDEO: ಹೈದರಾಬಾದ್​​ ಸೋಲುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಕಾವ್ಯಾ ಮಾರನ್​​​!

114 ರನ್​ಗಳ ಸುಲಭದ ಟಾರ್ಗೆಟ್​ ಬೆನ್ನತ್ತಿದ ಕೆಕೆಆರ್​ ಕೂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಆರಂಭಿಕನಾಗಿ ಕಣಕ್ಕಿಳಿದ ಸುನಿಲ್​ ನರೈನ್​, ಸಿಕ್ಸರ್​ ಸಿಡಿಸಿ ಭರ್ಜರಿ ಆರಂಭ ಮಾಡಿದ್ರು. ಆದ್ರೆ, ಮರು ಎಸೆತದಲ್ಲೇ ಕಮಿನ್ಸ್​, ನರೈನ್​ ವಿಕೆಟ್​ ಕಬಳಿಸಿದ್ರು. ಆದ್ರೆ, ಆ ಬಳಿಕ ಜೊತೆಯಾದ ರೆಹಮಾನುಲ್ಲಾ ಗುರ್ಬಾಜ್​​, ವೆಂಕಟೇಶ್​ ಅಯ್ಯರ್​ ಹೈದ್ರಾಬಾದ್​ ಬೌಲರ್​ಗಳನ್ನ ಕಾಡಿದ್ರು.

ಚೆಪಾಕ್​ನಲ್ಲಿ ವೆಂಕಟೇಶ್​ ಅಯ್ಯರ್​ ರೌದ್ರಾವತಾರ.!

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​​, ಹೈದ್ರಾಬಾದ್​ ಬೌಲರ್​ಗಳನ್ನ ರುಬ್ಬಿದ್ರು. ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿ 24 ಎಸೆತಗಳಲ್ಲೇ ಹಾಫ್​ ಸೆಂಚುರಿ ಚಚ್ಚಿದ್ರು. ವೆಂಕಟೇಶ್​ ಅಯ್ಯರ್​ಗೆ ಸಾಥ್​ ಕೊಟ್ಟ ರೆಹಮಾನುಲ್ಲಾ ಗುರ್ಬಾಜ್,​ 39 ರನ್​ಗಳಿಸಿದ್ರು.

39 ರನ್​​ಗಳಿಸಿ ಗುರ್ಬಾಜ್​ ಔಟಾದ್ರು, ಬಳಿಕ ಕಣಕ್ಕಿಳಿದ ಶ್ರೇಯಸ್​​ ಅಯ್ಯರ್​​ ಅಜೇಯ 6 ರನ್​ಗಳಿಸಿದ್ರು. ವಿನ್ನಿಂಗ್​​ ಶಾಟ್​ ಬಾರಿಸಿದ ವೆಂಕಟೇಶ್​ ಅಯ್ಯರ್​ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ಕೆಕೆಆರ್​​, 3ನೇ ಬಾರಿ ಐಪಿಎಲ್​ ಕಿರೀಟಕ್ಕೆ ಮುತ್ತಿಕ್ಕಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

​ಸ್ಟಾರ್ಕ್​ ಕೊಟ್ಟ ಶಾಕ್​ಗೆ ಹೈದ್ರಾಬಾದ್​ ಕಂಗಾಲ್.. 3ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಕೆಕೆಆರ್

https://newsfirstlive.com/wp-content/uploads/2024/05/KKR-4.jpg

Load More