newsfirstkannada.com

ಆರ್​ಸಿಬಿಯಂತೆ KKR ತಂಡಕ್ಕೂ ಕಾಡಿದ ಕಂಟಕ.. ಹೀಗಾದ್ರೆ ಟ್ರೋಫಿ ಗೆಲ್ಲೋದು ಕಷ್ಟ

Share :

Published May 26, 2024 at 8:39am

    ಇಂದು ಸನ್​ರೈಸರ್ಡ್​ ಮತ್ತು ಕೆಕೆಆರ್​ ನಡುವೆ ಫೈನಲ್​ ಪಂದ್ಯ

    ಎಲಿಮಿನೇಟ್​​ ಪಂದ್ಯದ ಸಮಯದಲ್ಲಿ ಕೊಹ್ಲಿಗಿತ್ತು ಬೆದರಿಕೆ

    ಮಳೆ ಬಂದರೆ ಪಂದ್ಯ ನಡೆಯೋದು ಡೌಟ್​? ಟ್ರೋಫಿ ಯಾರ ಪಾಲು?

ಆರ್​ಸಿಬಿ ಮತ್ತು ರಾಜಸ್ಥಾನ್​ ಎಲಿಮಿನೇಟ್​​ ಪಂದ್ಯದ ದಿನ ಕಂಟಕವೊಂದು ಎದುರಾಗಿತ್ತು. ಕೊಹ್ಲಿಗೆ ಬೆದರಿಕೆ ಕರೆ ಇದ್ದ ಕಾರಣ ಆರ್​ಸಿಬಿ ಅಭ್ಯಾಸವನ್ನು ಮೊಟಕುಗೊಳಿಸಿತ್ತು. ಮಾತ್ರವಲ್ಲದೆ ಸುದ್ದಿಗೋಷ್ಠಿಯನ್ನು ನಡೆಸಿರಲಿಲ್ಲ. ಅದರಂತೆಯೇ ಕೋಲ್ಕತ್ತಾಗೂ ನಿನ್ನೆ ಕಂಟಕ ಎಂದುರಾಗಿತ್ತು. ಅಭ್ಯಾಸ ಮಾಡಲು ಸಾಧ್ಯವಾಗದಂತೆ ಮಳೆ ಉಪಟಳ ನೀಡಿದೆ.

ಇಂದು ಚೆನ್ನೈನ ಚಿದಂಬರಂ ಮೈದಾನದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ ಜೊತೆಗೆ ಕೆಕೆಆರ್​ ಫೈನಲ್​ ಪಂದ್ಯ ಎದುರಿಸುತ್ತಿದೆ. ಆದರೆ ಅದಕ್ಕೂ ಮುನ್ನ ತಂಡ ತನ್ನ ಅಭ್ಯಾಸದಲ್ಲಿ ನಿರತವಾಗಿದೆ. ಆದರೆ ನಿನ್ನೆ ಅಭ್ಯಾಸಕ್ಕೆಂದು ಮೈದಾನಕ್ಕಿಳಿದ ಕೆಕೆಆರ್​ ತಂಡಕ್ಕೆ ಮಳೆ ಸಂಕಷ್ಟ ನೀಡಿದೆ.

ಇಂದು ಮಳೆ ಬರುತ್ತಾ?

ಈ ಬಾರಿಯ ಮೂರು ಐಪಿಎಲ್​ ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಆ ಕಾರಣಕ್ಕೆ ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಗಿತ್ತು. ಆದರೆ ಹಮಾಮಾನ ಇಲಾಖೆ ನೀಡಿದ ಮುನ್ಸೂಚನೆ ಗಮನಿಸಿದರೆ ರೆಮಲ್​ ಚಂಡ ಮಾರುತ ಬೀಸುವ ಲಕ್ಷಣ ಕಾಣುತ್ತಿದೆ. ಒಂದು ವೇಳೆ ಸೈಕ್ಲೋನ್​ ಭೀತಿಯಿಂದ ಇಂದಿನ ಪಂದ್ಯ ರದ್ದಾದರೆ ಯಾರ ಮುಡಿಗೆ ಟ್ರೋಫಿ ಸೇರಲಿದೆ ಎಂಬ ಲೆಕ್ಕಾಚಾರ ಅಭಿಮಾನಿಗಳ ತಲೆ ಕೆಡಿಸಿದೆ.

ಇಂದು ಮಳೆ ಬಂದರೆ ಗತಿ ಏನು?

ಇಂದು ಪಂದ್ಯದ ವೇಳೆ ಮಳೆ ಶಾಕ್ ಕೊಟ್ಟರೆ ಅದಕ್ಕಾಗಿ ದಿನವೊಂದನ್ನು ಮೀಸಲಿಟ್ಟು ಆಡಿಸಲಾಗುತ್ತದೆ. ಒಂದು ವೇಳೆ ಮೀಸಲು ದಿನದಂದೂ ಸಹ ಮಳೆ ಬಂದರೆ 5 ಓವರ್​ನಲ್ಲಿ ಪಂದ್ಯವಾಡಿಸಲು ಸಾಧ್ಯವಾಗುತ್ತದಾ ಎಂದು ನೋಡಲಾಗುತ್ತದೆ.

ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ.. ವ್ಯಾಘ್ರ ತಿಂದು ತೇಗಿದ ಮೃತದೇಹಕ್ಕಾಗಿ ಹುಡುಕಾಟ 

ಐದು ಓವರ್​ನ ಪಂದ್ಯ ಸಹ ಸಾಧ್ಯವಾಗದೆ ಹೋದರೆ ಸೂಪರ್​ ಓವರ್​ ಮೂಲಕ ಪಂದ್ಯ ನಡೆಸುವ ಸಾಧ್ಯತೆ ಇದೆ. ಇವೆಲ್ಲ ಅಡಚಣೆ ಎದುರಾದರೆ, ಧಾರಾಕಾರ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗುವುದಿಲ್ಲ ಎಂಬುದಾದರೆ ಪಾಯಿಂಟ್​ ಟೇಬಲ್​ ಪ್ರಕಾರ ಕೋಲ್ಕತ್ತಾ ಟ್ರೋಫಿ ಮುಡಿಗೇರಿಸಿಕೊಳ್ಳುವ ಸಾಧ್ಯತೆ ಬಹುಪಾಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​ಸಿಬಿಯಂತೆ KKR ತಂಡಕ್ಕೂ ಕಾಡಿದ ಕಂಟಕ.. ಹೀಗಾದ್ರೆ ಟ್ರೋಫಿ ಗೆಲ್ಲೋದು ಕಷ್ಟ

https://newsfirstlive.com/wp-content/uploads/2024/05/KKR-1-1.jpg

Load More