newsfirstkannada.com

ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ.. ವ್ಯಾಘ್ರ ತಿಂದು ತೇಗಿದ ಮೃತದೇಹಕ್ಕಾಗಿ ಹುಡುಕಾಟ 

Share :

Published May 26, 2024 at 7:10am

Update May 26, 2024 at 7:11am

    ರೈತ ಮಹಿಳೆ ಮೇಲೆ ದಾಳಿ ನಡೆಸಿದ ಹುಲಿ

    ಮೇಕೆ ಮೇಯಿಸುತ್ತಿದ್ದಾಗ ಹಠಾತ್ ದಾಳಿ ನಡೆಸಿದ ವ್ಯಾಘ್ರ

    ಮಹಿಳೆ ಕೊಂದು ಹೊತ್ತೊಯ್ದ ಹುಲಿ, ಮೃತದೇಹಕ್ಕಾಗಿ ಹುಡುಕಾಟ

ಮೈಸೂರು: ರೈತ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಅಲ್ಲಿನ ಮೂರ್ಬಾಂದ್ ಬೆಟ್ಟದ ಸಮೀಪದಲ್ಲಿ ನಡೆದಿದೆ. ಹುಲಿ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ.

ಚಿಕ್ಕಿ (48) ಹುಲಿ ದಾಳಿಗೆ ಬಲಿಯಾದ ಮಹಿಳೆ. ಎಚ್.ಡಿ.ಕೋಟೆ ತಾಲ್ಲೂಕು ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ. ಮೇಕೆ ಮೇಯಿಸುತ್ತಿದ್ದಾಗ ಹಠಾತ್ ಮಹಿಳೆ ಮೇಲೆ ಹುಲಿ ದಾಳಿ ಮಾಡಿದೆ.

ಇದನ್ನೂ ಓದಿ: ಭಾರೀ ಆತಂಕ ಸೃಷ್ಟಿಸಿದ ‘ರೆಮಲ್’ ಸೈಕ್ಲೋನ್.. ರಾಜ್ಯಕ್ಕೂ ತಟ್ಟಲಿದೆಯಾ ರಣ‘ಚಂಡಿ’ ಎಫೆಕ್ಟ್​?

ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಹಿಳೆಯ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಇನ್ನು ಮೃತದೇಹ ಸಿಕ್ಕಿಲ್ಲ. ಮಹಿಳೆಯ ಕಾಲು ಮಾತ್ರ ಸಿಕ್ಕಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ.. ವ್ಯಾಘ್ರ ತಿಂದು ತೇಗಿದ ಮೃತದೇಹಕ್ಕಾಗಿ ಹುಡುಕಾಟ 

https://newsfirstlive.com/wp-content/uploads/2024/05/Tiiger-Attack.jpg

Load More