ಕೆ.ಎಲ್.ರಾಹುಲ್ ವಿಚಾರವಂತೂ ಸದ್ಯಕ್ಕೆ ಟ್ರೆಂಡ್ ಆಗ್ಬಿಟ್ಟಿದೆ
ಮೆಗಾ ಆಕ್ಷನ್ಗೆ ಕೆ.ಎಲ್ ರಾಹುಲ್ ಎಂಟ್ರಿಕೊಡೋದು ಪಕ್ಕಾ?
ದಿನೇಶ್ ಕಾರ್ತಿಕ್ ನಿರ್ಗಮನದಿಂದ ಆರ್ಸಿಬಿ ಕೀಪರ್ ಸ್ಥಾನ?
ಕೆ.ಎಲ್.ರಾಹುಲ್ ವಿಚಾರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ. ಅತ್ತ ಕ್ಯಾಪ್ಟನ್ಸಿ ನೀಡ್ತಿಲ್ಲ. ಇತ್ತ ರಿಟೈನ್ ಮಾಡ್ತೀನಿ ಅಂತಾ ಕನ್ಫರ್ಮ್ ಮಾಡಿಲ್ಲ. ಕಾದು ನೋಡೋ ಆಟಕ್ಕೆ ಲಕ್ನೋ ಮುಂದಾಗಿದೆ. ಆದ್ರೆ, ಇದೇ ಗ್ಯಾಪ್ ಅಲ್ಲಿ ಬಿಗ್ ಫಿಶ್ ಬೇಟೆಯಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೆಡಿಯಾಗ್ತಿದೆ.
ಸೀಸನ್-18ರ ಮೆಗಾ ಹರಾಜಿಗೆ 3 ತಿಂಗಳು ಬಾಕಿಯಿದೆ. ಆದ್ರೆ, ಐಪಿಎಲ್ ಅಖಾಡದ ಚರ್ಚೆ ಮಾತ್ರ ದಿನೇ ದಿನೇ ಕಾವೇರುತ್ತಿದೆ. ಕನ್ನಡಿಗ ಕೆ.ಎಲ್.ರಾಹುಲ್ ವಿಚಾರವಂತೂ ಸದ್ಯದ ಟ್ರೆಂಟ್ ಆಗ್ಬಿಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಆರ್ಸಿಬಿ ಕ್ಯಾಂಪ್ನ ಖುಷಿಯನ್ನ ಹೆಚ್ಚಿಸ್ತಿವೆ.
ಇದನ್ನೂ ಓದಿ: ಕನ್ನಡಿಗ KL ರಾಹುಲ್ಗೆ ಬಿಗ್ ಶಾಕ್.. ಲಕ್ನೋ ಟೀಮ್ ಕ್ಯಾಪ್ಟನ್ಸಿ ಕಿತ್ತುಕೊಂಡ ಸಂಜೀವ್ ಗೋಯೆಂಕಾ; ಹೇಳಿದ್ದೇನು?
ಲಕ್ನೋ ಸೂಪರ್ ಜೈಂಟ್ಸ್ ನಡೆ ಆರ್ಸಿಬಿಗೆ ವರದಾನ!
ಕೆ.ಎಲ್.ರಾಹುಲ್ ವಿಚಾರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕಾದು ನೋಡೋ ಆಟಕ್ಕೆ ಮುಂದಾಗಿದೆ. ರಾಹುಲ್ಗೆ ಕ್ಯಾಪ್ಟನ್ಸಿ ನೀಡೋಕೆ ನೋ ಎಂದಿರೋ ಲಕ್ನೋ, ಫಸ್ಟ್ ಚಾಯ್ಸ್ ಪ್ಲೇಯರ್ ಆಗಿ ರಿಟೈನ್ ಮಾಡೋಕೂ ರೆಡಿಯಿಲ್ಲ. ಮೊನ್ನೆ ಓನರ್ ಜೊತೆ ಓಪನ್ ಆಗಿ ಮಾತುಕತೆ ನಡೆಸಿದ್ರೂ, ಆನ್ಸರ್ ಮಾತ್ರ ಕೊಟ್ಟಿಲ್ಲ. ಇದನ್ನೆಲ್ಲ ನೋಡ್ತಾ ಇದ್ರೆ, ರಾಹುಲ್ ಮೆಗಾ ಹರಾಜಿಗೆ ಬರೋದು ಬಹುತೇಕ ಕನ್ಫರ್ಮ್.
ನಾಯಕನ ಹುಡುಕಾಟದಲ್ಲಿದ್ದ ಆರ್ಸಿಬಿ ಫುಲ್ ಖುಷ್..!
17 ಸೀಸನ್ಗಳಿಂದ ದಿಗ್ಗಜ ಆಟಗಾರರನ್ನೇ ಕಂಡಿದ್ದರೂ ಆರ್ಸಿಬಿ ಟ್ರೋಫಿ ಗೆದ್ದಿಲ್ಲ. ಫ್ಲಾಪ್ ಆಗಿರುವ ಫಾಫ್ ಡುಪ್ಲೆಸಿಯನ್ನ ಈ ಬಾರಿ ಕೈ ಬಿಡಲು ಮುಂದಾಗಿರುವ ಆರ್ಸಿಬಿ, ಹೊಸ ನಾಯಕನ ಹುಟುಕಾಟದಲ್ಲಿದ್ದು, ಕಣ್ಣು ರಾಹುಲ್ ಮೇಲೆ ಬಿದ್ದಿದೆ. ಮೆಗಾ ಹರಾಜಿನಲ್ಲಿ ಕೆ.ಎಲ್.ರಾಹುಲ್ನ ಖರೀದಿಸಲೇಬೇಕೆಂಬ ಲೆಕ್ಕಾಚಾರದಲ್ಲಿದೆ. ಸದ್ಯ ಲಕ್ನೋದಲ್ಲಿ ನಡೀತಾ ಇರೋ ಬೆಳವಣಿಗೆಗಳು ಆರ್ಸಿಬಿಗೆ ಪೂರಕವಾಗಿವೆ. ಜೊತೆಗೆ ಆರ್ಸಿಬಿಗೆ ಬೇಕಿರೋ ಎಲ್ಲಾ ಕ್ವಾಲಿಟೀಸ್ ರಾಹುಲ್ ಬಳಿ ಇವೆ. ಹೀಗಾಗಿ ರೆಡ್ ಆರ್ಮಿ ಕ್ಯಾಂಪ್ ಖುಷ್ ಆಗಿದೆ.
ರಾಹುಲ್ಗಿದೆ ನಾಯಕತ್ವದ ಅದ್ಭುತ ಅನುಭವ..!
ಕೆ.ಎಲ್.ರಾಹುಲ್.. ಅದ್ಭುತ ನಾಯಕ ಹಾಗೂ ಓಪನರ್. ಸಮರ್ಥವಾಗಿ ತಂಡವನ್ನ ಮುನ್ನಡೆಸುವ ಕಲೆಗಾರಿಕೆ ಹೊಂದಿರುವ ರಾಹುಲ್, ಕೂಲ್ ಆ್ಯಂಡ್ ಕಾಮ್ ಆಗಿ ಒತ್ತಡದ ಸನ್ನಿವೇಶಗಳನ್ನ ನಿಭಾಯಿಸಬಲ್ಲರು. ಜೊತೆಗೆ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡುವ ಕೆ.ಎಲ್.ರಾಹುಲ್, ಯಾವುದೇ ಕ್ರಮಾಂಕದಲ್ಲಾದರೂ ಫಿಟ್ ಆಗೋ ಪ್ಲೇಯರ್. ತಂಡದ ಅಗತ್ಯಕ್ಕೆ ತಕ್ಕಂತೆ ಓಪನರ್, ಮಿಡಲ್ ಆರ್ಡರ್ನಲ್ಲಿ ಬ್ಯಾಟ್ ಕೂಡ ಬೀಸಬಲ್ಲರು. ಇದು RCBಗೆ ತಂಡಕ್ಕೆ ಪ್ಲಸ್.
ವಿಕೆಟ್ ಕೀಪಿಂಗ್ ಆ್ಯಂಡ್ ಸ್ಟ್ರಾಟರ್ಜಿ..!
ಆರ್ಸಿಬಿಯಲ್ಲಿ ದಿನೇಶ್ ಕಾರ್ತಿಕ್ ನಿರ್ಗಮನದಿಂದ ಕೀಪರ್ ಸ್ಥಾನ ತೆರವಾಗಿದೆ. ಈ ಕೊರತೆಯನ್ನ ರಾಹುಲ್ ನೀಗಿಸಬಲ್ಲರು. ವಿಕೆಟ್ ಹಿಂದೆ ನಿಂತು ಫೀಲ್ಡ್ ಪ್ಲೇಸ್ಮೆಂಟ್ಸ್, ಪಿಚ್ ವರ್ತನೆ, ಡಿಆರ್ಎಸ್ ಆಯ್ಕೆ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಬಲ್ಲರು. ಸಹ ಆಟಗಾರರ ಜೊತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವ ಕೆ.ಎಲ್.ರಾಹುಲ್, ಒಳ್ಳೆಯ ಟೀಮ್ ಮ್ಯಾನ್ ಹಾಗೂ ಲೀಡರ್ ಆಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಕೆ.ಎಲ್ ರಾಹುಲ್ಗೆ ಯುವ ಆಟಗಾರರ ಬೆನ್ನಿಗೆ ನಿಲ್ಲುವ ಗುಣ ಇದೆ. ಇದ್ರಿಂದ ಡ್ರೆಸ್ಸಿಂಗ್ ರೂಮ್ನ ವಾತಾವರಣ ಚನ್ನಾಗಿರಲಿದೆ.
ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್?
ತಂಡಕ್ಕೆ ಲೋಕಲ್ ಪ್ಲೇವರ್, ಫ್ಯಾನ್ಸ್ ಖುಷ್ ಪಕ್ಕಾ.!
ಆರ್ಸಿಬಿಗೆ ಕೆ.ಎಲ್.ರಾಹುಲ್ ಬಂದ್ರೆ, ರೆಡ್ ಆರ್ಮಿಗೆ ಬಿಗ್ ಅಡ್ವಾಂಟೇಜ್ ಆಗುತ್ತೆ. ಚಿನ್ನಸ್ವಾಮಿಯಲ್ಲಿ ಆಡಿ, ಬೆಳೆದ ರಾಹುಲ್ ಆರ್ಸಿಬಿ ಕ್ಯಾಪ್ಟನ್ ಆದ್ರೆ, ಫ್ಯಾನ್ಸ್ ಫುಲ್ ಖುಷ್ ಆಗ್ತಾರೆ. ತಂಡದ ಕ್ರೇಜ್ ನೆಕ್ಸ್ಟ್ ಲೆವೆಲ್ಗೆ ಹೋಗುತ್ತೆ. ಇದನ್ನಲ್ಲದೆ ಕನ್ನಡಿಗರ ಕಡೆಗಣನೆಯ ಅಪವಾದವೂ ರಾಹುಲ್ ನಾಯಕನಾದ್ರೆ ತಪ್ಪಲಿದೆ. ಇದೆಲ್ಲವೂ ಆರ್ಸಿಬಿಗೆ ಲಾಭವೇ ಆಗಲಿದೆ.
ರಾಹುಲ್ ಲಕ್ನೋ ತಂಡದಿಂದ ಹೊರಬಿದ್ದು ಮೆಗಾ ಆಕ್ಷನ್ಗೆ ಎಂಟ್ರಿ ಕೊಡೋದು ಬಹುತೇಕ ಪಕ್ಕಾ. ಆರ್ಸಿಬಿ ರಾಹುಲ್ ಖರೀದಿಸಲು ಹೊಂಚು ಹಾಕಿರೋದು ಕೂಡ ಸತ್ಯ. ಆದ್ರೆ, ಉಳಿದ ಫ್ರಾಂಚೈಸಿಗಳ ಕಣ್ಣೂ ಕೂಡ ರಾಹುಲ್ ಮೇಲಿದೆ. ಹೀಗಾಗಿ ಮೆಗಾ ಆಕ್ಷನ್ನಲ್ಲಿ ರಾಹುಲ್ ಖರೀದಿಗೆ ಬಿಗ್ ಫೈಟ್ ನಡೆಯೋದು ಪಕ್ಕಾ..! ಈ ಫೈಟ್ನಲ್ಲಿ ಆರ್ಸಿಬಿ ಗೆಲ್ಲುತ್ತಾ.? ಅನ್ನೋದೇ ಸದ್ಯದ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ