newsfirstkannada.com

ರೋಹಿತ್ ಶರ್ಮಾ ಟೀಮ್​ ಬಗ್ಗೆ KL ರಾಹುಲ್ ಏನಂದ್ರು..? ವಿಶ್ವಕಪ್ ಗೆಲುವಿನ ಬಗ್ಗೆ ಕನ್ನಡಿಗನ ಮನದ ಮಾತುಗಳು

Share :

Published July 1, 2024 at 1:46pm

    ವೆಸ್ಟ್​​ ಇಂಡೀಸ್​ನಲ್ಲಿ ಟ್ರೋಫಿಗೆ ಮುತ್ತಿಕ್ಕಿರುವ ಭಾರತ ತಂಡ

    T20 ವಿಶ್ವಕಪ್​ಗೆ ಕೆ.ಎಲ್ ರಾಹುಲ್​​ರನ್ನ ಆಯ್ಕೆ ಮಾಡಿರಲಿಲ್ಲ

    ರಾಹುಲ್​​ರನ್ನ ಬಿಟ್ಟು ಪಂತ್, ಸಂಜುಗೆ ಚಾನ್ಸ್ ನೀಡಿದ್ದ ಬಿಸಿಸಿಐ

2024ರ T20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದೇ ಭಾರತ ಅಮೋಘವಾದ ಪ್ರದರ್ಶನ ನೀಡಿ ಟ್ರೋಫಿಗೆ ಮುತ್ತಿಕ್ಕಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​​ ಪಂದ್ಯವನ್ನ ರೋಚಕವಾಗಿ ಗೆಲ್ಲುವ ಮೂಲಕ 2ನೇ ಬಾರಿಗೆ ಭಾರತ ಚುಟುಕು ಕ್ರಿಕೆಟ್​​ನ ಚಾಂಪಿಯನ್ ಆಗಿ ಹೊರ ಹೊಮ್ಮುದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರ ಹಾಗೂ ಕನ್ನಡಿಗ ಕೆ.ಎಲ್​ ರಾಹುಲ್ ಅವರು ಇಡೀ ತಂಡಕ್ಕೆ, ಸಿಬ್ಬಂದಿಗೆ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ತಾಯಿ ಮೀನಾ, ಸಹೋದರ ದಿನಕರ ಜೈಲಿಗೆ ಭೇಟಿ.. ಮಗನ ಸಂಕಟ ನೋಡಿ ಅಮ್ಮ ಭಾವುಕ..

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಟೂರ್ನಿ ಉದ್ದಕ್ಕೂ ಅದ್ಭುತವಾದ ಪ್ರದರ್ಶನ ನೀಡಿ ಸಕ್ಸಸ್​ ಕಂಡಿದೆ. ಟ್ರೋಫಿಯನ್ನು ಎತ್ತಿ ಹಿಡಿದಿದ್ದರಿಂದ ಭಾರತ ತಂಡದ ಸಿಬ್ಬಂದಿ, ಅಭಿಮಾನಿಗಳು ಹಾಗೂ ಎಲ್ಲ ಭಾರತೀಯರು ನಿಮ್ಮೊಂದಿಗೆ ಸಂಭ್ರಮಿಸಿದ್ದಾರೆ. ಭಾರತ ತಂಡದ ಆಟಗಾರರೊಂದಿಗೆ ಇಡೀ ದೇಶವೇ ಸಂಭ್ರಮಿಸಿ ಖುಷಿಪಟ್ಟಿದೆ ಎಂದು ಕೆಎಲ್​​ ರಾಹುಲ್ ಅವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಬರೆದು ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಪಾಂಡ್ಯ ಮ್ಯಾಚ್ ವಿನ್ನಿಂಗ್ ಆಟಕ್ಕೆ ಸೆಲ್ಯೂಟ್.. ಗೆಲುವಿನ ಹಿಂದೆ ಹಾರ್ದಿಕ್ ನುಂಗಿರುವ ನೋವುಗಳು ಎಷ್ಟು ಗೊತ್ತಾ..?

ಕನ್ನಡಿಗ ಕೆ.ಎಲ್.ರಾಹುಲ್​ರನ್ನು T20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಅಚ್ಚರಿ ಎಂದರೆ ರಾಹುಲ್​​ಗಿಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದ ರಿಷಬ್ ಪಂತ್ ಹಾಗೂ ಸಂಜು ಸ್ಯಾಮ್ಸನ್​ಗೆ ಟೀಮ್​​ನಲ್ಲಿ ಸ್ಥಾನ ನೀಡಲಾಗಿತ್ತು. ಇದರ ಬೆನ್ನಲ್ಲೇ ಕನ್ನಡಿಗನನ್ನು ಕಡೆಗಣಿಸಲಾಗಿದೆ ಎಂಬ ಕೂಗು ಕೇಳಿಬಂದಿತ್ತು. ಇದರಿಂದ ಅವಕಾಶ ವಂಚಿತರಾಗಿದ್ದ ಕೆಎಲ್ ರಾಹುಲ್ ಅವರು ತನ್ನ ಪತ್ನಿಯೊಂದಿಗೆ ಪ್ರವಾಸ ಕೈಗೊಂಡು ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಶರ್ಮಾ ಟೀಮ್​ ಬಗ್ಗೆ KL ರಾಹುಲ್ ಏನಂದ್ರು..? ವಿಶ್ವಕಪ್ ಗೆಲುವಿನ ಬಗ್ಗೆ ಕನ್ನಡಿಗನ ಮನದ ಮಾತುಗಳು

https://newsfirstlive.com/wp-content/uploads/2024/07/KL_RAHUL-3.jpg

Load More