ಶ್ರೀಲಂಕಾದಲ್ಲಿ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಪ್ರಾಕ್ಟೀಸ್
ಟೀಮ್ ಇಂಡಿಯಾ, ಶ್ರೀಲಂಕಾ ಮಧ್ಯೆ ಟಿ20 ಮತ್ತು ಏಕದಿನ ಸರಣಿ!
ಭಾರತ ತಂಡದ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಕೆ.ಎಲ್ ರಾಹುಲ್
ಕಳೆದ ವರ್ಷ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ಗೆದ್ದು ಸಂಭ್ರಮಿಸಿದ್ರು. ಈ ಮೂಲಕ ಬರೋಬ್ಬರಿ 21 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಬಳಿಕ ಹರಿಣಿಗಳ ನಾಡಿನಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿದ 2ನೇ ಟೀಮ್ ಇಂಡಿಯಾ ನಾಯಕ ಎಂಬ ದಾಖಲೆ ನಿರ್ಮಿಸಿದ್ರು. ಹಾಗಾಗಿ ರೋಹಿತ್ ಶರ್ಮಾ ಉಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ದ ಕೆ.ಎಲ್ ರಾಹುಲ್ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.
ಶ್ರೀಲಂಕಾ ವಿರುದ್ಧ ಜೂನ್ 27ನೇ ತಾರೀಕಿನಿಂದ 3 ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಈಗಾಗಲೇ ಶ್ರೀಲಂಕಾ ವಿರುದ್ಧದ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ 20 ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ರೆಸ್ಟ್ ಕೂಡ ಕೇಳಿದ್ದರು. ಬಿಸಿಸಿಐ ಕೊಹ್ಲಿ, ರೋಹಿತ್ ಮತ್ತು ಬುಮ್ರಾಗೆ ರೆಸ್ಟ್ ನೀಡಿತ್ತು. ಗಂಭೀರ್ ಕೋಚ್ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಸಮ್ಮತಿಸಿದ್ದು, ಈಗ ತಂಡಕ್ಕೆ ವಾಪಸ್ಸಾಗಿದ್ದಾರೆ.
— K L Rahul (@klrahul) July 24, 2024
ಇನ್ನು, ಟಿ20 ವಿಶ್ವಕಪ್ನಿಂದ ದೂರ ಉಳಿದಿದ್ದ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಬುಮ್ರಾ ಮಾತ್ರ ರೆಸ್ಟ್ನಲ್ಲಿದ್ದಾರೆ.
ರೋಹಿತ್ ಶರ್ಮಾ ಏಕದಿನ ಸೀರೀಸ್ನಿಂದ ರೆಸ್ಟ್ ತೆಗೆದುಕೊಂಡಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ರಾಹುಲ್ ಅವರೇ ಮುನ್ನಡೆಸಲಿದ್ದಾರೆ. ಕೋಚ್ ಗೌತಮ್ ಗಂಭೀರ್ ಕೂಡ ಕೆ.ಎಲ್ ರಾಹುಲ್ ಭಾರತ ಏಕದಿನ ತಂಡದ ಕ್ಯಾಪ್ಟನ್ ಆಗಲಿ ಎಂಬ ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿತ್ತು. ಆದರೀಗ, ರೋಹಿತ್ ವಾಪಸ್ ಬಂದಿದ್ದು, ಅವರೇ ಮುನ್ನಡೆಸುತ್ತಿದ್ದಾರೆ. ವಿಚಿತ್ರ ಎಂದರೆ ಶುಭ್ಮನ್ ಗಿಲ್ ಉಪನಾಯಕನ ಪಟ್ಟ ಕಟ್ಟಲಾಗಿದೆ. ಈ ಮೂಲಕ ಟೀಮ್ ಇಂಡಿಯಾ ಮುಂದಿನ ಕ್ಯಾಪ್ಟನ್ ಆಗಬೇಕಿದ್ದ ಕೆ.ಎಲ್ ರಾಹುಲ್ಗೆ ಬಿಗ್ ಶಾಕ್ ನೀಡಲಾಗಿದೆ.
ಶ್ರೀಲಂಕಾ ವಿರುದ್ಧ ಸರಣಿಗಾಗಿ ಮೈದಾನಕ್ಕಿಳಿದ ಕೆ.ಎಲ್ ರಾಹುಲ್
ಇನ್ನು, ಶ್ರೀಲಂಕಾ ವಿರುದ್ಧ ಸರಣಿಗಾಗಿ ಕೆ.ಎಲ್ ರಾಹುಲ್ ಈಗಾಗಲೇ ನೆಟ್ನಲ್ಲಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ನೆಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿರೋ ವಿಡಿಯೋಗಳನ್ನು ಕೆ.ಎಲ್ ರಾಹುಲ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್