/newsfirstlive-kannada/media/post_attachments/wp-content/uploads/2024/08/KL_RAHUL.jpg)
ಕ್ರಿಕೆಟ್ ಆಸಕ್ತಿಯನ್ನ ಇನ್ನಷ್ಟು ಹೆಚ್ಚು ಮಾಡಿದ್ದು ಎಂದರೆ ಅದು ಐಪಿಎಲ್. ಇದರಲ್ಲಿ ದೇಶಿಯ ಆಟಗಾರರು ಸೇರಿದಂತೆ ವಿದೇಶಿ ಪ್ಲೇಯರ್ಸ್ ಕೂಡ ಆಡುತ್ತಾರೆ. ಸದ್ಯ ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನ ಉಳಿಸಿಕೊಂಡು ಉಳಿದವರನ್ನ ರಿಲೀಸ್ ಮಾಡಿವೆ. ಲಕ್ನೋ ಟೀಮ್ ಕ್ಯಾಪ್ಟನ್ ಆಗಿದ್ದ ಕೆ.ಎಲ್ ರಾಹುಲ್ ಕೂಡ ಹೊರ ಬಂದಿದ್ದು ಮೆಗಾ ಆಕ್ಷನ್ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಇದೆಲ್ಲವನ್ನ ಪಕ್ಕಕ್ಕಿಟ್ಟು ಐಪಿಎಲ್ನಲ್ಲಿ ಕನ್ನಡಿಗನ ಸಾಧನೆ ಏನು?.
2013ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಕೆ.ಎಲ್ ರಾಹುಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ನಲ್ಲಿ ಆಡಿದ್ದರು. ಒಂದೇ ವರ್ಷ ಅಷ್ಟೇ ಆರ್ಸಿಬಿಯಲ್ಲಿ ಆಡಿದ್ದ ರಾಹುಲ್ 2014ರಲ್ಲಿ ಹೈದ್ರಾಬಾದ್ ತಂಡದಲ್ಲಿ ಸ್ಥಾನ ಪಡೆದರು. ಇಲ್ಲಿ ಎರಡು ವರ್ಷ ಆಡಿದ ರಾಹುಲ್ 2016ರಲ್ಲಿ ಮತ್ತೆ ಆರ್ಸಿಬಿಗೆ ಮರಳಿದರು. 2017ರ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದರಿಂದ ಐಪಿಎಲ್ ಟೂರ್ನಿಯಲ್ಲಿ ಆಡಲಿಲ್ಲ. ಮರುವರ್ಷ 2018ರಲ್ಲಿ ಪಂಜಾಬ್ ಸೇರಿಕೊಂಡರು. ಸೇರಿದ ವರ್ಷ ಭರ್ಜರಿ ಬ್ಯಾಟಿಂಗ್ ಮಾಡಿ 659 ರನ್ಗಳನ್ನ ಬಾರಿಸಿದ್ದರು. ಈ ವರ್ಷ ಮಾತ್ರವಲ್ಲ, ಪಂಜಾಬ್ನಲ್ಲಿದ್ದ 4 ವರ್ಷವೂ 600 ರನ್ ಗಡಿ ದಾಟಿಸಿದ್ದರು. ಆದರೆ 2022ರಲ್ಲಿ ಲಕ್ನೋ ಟೀಮ್ಗೆ ಕ್ಯಾಪ್ಟನ್ ಆಗಿ ಸೇರ್ಪಡೆಗೊಂಡ ರಾಹುಲ್ ಅವರು ಇದುವರೆಗೂ ಅದೇ ಟೀಮ್ನಲ್ಲಿದ್ದು 2024ರ ಟೂರ್ನಿಯಲ್ಲಿ 520 ರನ್ಗಳನ್ನ ಕಲೆ ಹಾಕಿದ್ದರು.
ಇದನ್ನೂ ಓದಿ:ಭಾರತದ ಗೆಲುವಿಗೆ KL ರಾಹುಲ್ ಕಾರಣ ಎಂದ ಕ್ಯಾಪ್ಟನ್ ರೋಹಿತ್.. ಅಸಲಿ ಸತ್ಯ ಬಿಚ್ಚಿಟ್ರು!
ಐಪಿಎಲ್ನಲ್ಲಿ ರಾಹುಲ್ ಸಾಧನೆ ನೋಡುವುದಾದರೆ..
ಐಪಿಎಲ್ನಲ್ಲಿ 132 ಪಂದ್ಯಗಳನ್ನ ಕೆ.ಎಲ್ ರಾಹುಲ್ ಅವರು ಆಡಿದ್ದು ಒಟ್ಟು 4,683 ರನ್ಗಳನ್ನ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಸೆಂಚುರಿಗಳು ಸೇರಿದ್ದು ಪಂಜಾಬ್ ತಂಡದಲ್ಲಿದ್ದಾಗ 132 ರನ್ಗಳು ಹೊಡೆದಿರುವುದು ವೈಯಕ್ತಿಕವಾದ ಗರಿಷ್ಠ ರನ್ ಆಗಿದೆ. 37 ಅರ್ಧ ಶತಕಗಳನ್ನ ಬಾರಿಸಿದ್ದಾರೆ. 400 ಬೌಂಡರಿ ಬಾರಿಸಿರುವ ರಾಹುಲ್ ಒಟ್ಟು 187 ಸಿಕ್ಸರ್ಗಳನ್ನ ಸಿಡಿಸಿದ್ದಾರೆ.
2020-21ರಲ್ಲಿ ಪಂಜಾಬ್ ತಂಡದಲ್ಲಿ ಆಡುವಾಗ ಕೆ.ಎಲ್ ರಾಹುಲ್ ಅವರು 670 ರನ್ಗಳನ್ನು ಗಳಿಸಿದ್ದರು. ಇದೇ ಐಪಿಎಲ್ ಟೂರ್ನಿಗಳಲ್ಲಿ ಗಳಿಸಿರುವ ಗರಿಷ್ಠ ರನ್ ಆಗಿದೆ. ಇನ್ನು ಇದೇ ಟೀಮ್ನಲ್ಲಿ ಆಡುವಾಗ ಎರಡು ಬಾರಿ ಸೆಂಚುರಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಒಮ್ಮೆ 95 ರನ್ ಮತ್ತೊಮ್ಮೆ 98 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದಾರೆ. ಇನ್ನುಳಿದಂತೆ ವಿಕೆಟ್ ಕೀಪಿಂಗ್ ಮಾಡುವ ರಾಹುಲ್ ಅವರು ಒಟ್ಟು 78 ಕ್ಯಾಚ್ಗಳನ್ನು ಹಿಡಿದಿದ್ದಾರೆ.
ಲಕ್ನೋ ಟೀಮ್ನಲ್ಲೂ ಕನ್ನಡಿಗ ಒಳ್ಳೆಯ ಪರ್ಫಾಮೆನ್ಸ್ ನೀಡಿದ್ದಾರೆ. 2022ರಲ್ಲಿ ತಂಡಕ್ಕೆ ಸೇರಿದ ವರ್ಷವೇ 1 ಸೆಂಚುರಿ ಸಮೇತ 616 ರನ್ಗಳನ್ನು ಗಳಿಸಿದ್ದರು. 2023ರಲ್ಲಿ ಇಂಜುರಿಗೆ ತುತ್ತಾಗಿದ್ದ ಅವರು 9 ಪಂದ್ಯಗಳಲ್ಲಿ 274 ರನ್ಗಳ ಗಳಿಸಿದ್ದರು. 2024ರಲ್ಲೂ ಉತ್ತಮ ಪರ್ಫಾಮೆನ್ಸ್ ನೀಡಿದ ಕನ್ನಡಿಗ 520 ರನ್ಗಳನ್ನ ಗಳಿಸಿ ಜೊತೆಗೆ ಕ್ಯಾಪ್ಟನ್ಸಿಯನ್ನು ಉತ್ತಮವಾಗಿಯೇ ನಿಭಾಯಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ