VIDEO: ನಿವೃತ್ತಿ ಸುದ್ದಿ ಬೆನ್ನಲ್ಲೇ ದೊಡ್ಡ ಅನೌನ್ಸ್​ಮೆಂಟ್​ ಮಾಡಿದ ಸ್ಟಾರ್​ ಕ್ರಿಕೆಟರ್​ KL​ ರಾಹುಲ್​​

author-image
Ganesh Nachikethu
Updated On
‘ಟೀಮ್​ ಇಂಡಿಯಾದಿಂದ ನನ್ನನ್ನು ಕಿತ್ತು ಹಾಕಿದ್ರು’- ತನ್ನ ನೋವು ತೋಡಿಕೊಂಡ KL ರಾಹುಲ್
Advertisment
  • ಟೀಮ್​​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್ ಕೆ.ಎಲ್​ ರಾಹುಲ್​​
  • ನಿವೃತ್ತಿ ಸುದ್ದಿ ವೈರಲ್​ ಆಗುತ್ತಿದ್ದಂತೆ ಕೆ.ಎಲ್​ ರಾಹುಲ್​​ ಬಿಗ್​​ ಅಪ್ಡೇಟ್​​
  • ದೊಡ್ಡ ಅನೌನ್ಸ್​ಮೆಂಟ್​ ಮಾಡಿದ ಟೀಮ್​ ಇಂಡಿಯಾ ಸ್ಟಾರ್​​​ ಕ್ರಿಕೆಟರ್​​!

ಟೀಮ್​​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್ ಕೆ.ಎಲ್​ ರಾಹುಲ್​​. ಇವರು ಇತ್ತೀಚೆಗಷ್ಟೇ ಎಲ್ಲಾ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಇನ್​ಸ್ಟಾದಲ್ಲಿ ಪೋಸ್ಟ್​ ಹಾಕಿದ್ದರು. ಇದಾದ ಕೇವಲ 15 ನಿಮಿಷದಲ್ಲಿ ಕೆ.ಎಲ್​ ರಾಹುಲ್​ ತನ್ನ ಇನ್​ಸ್ಟಾ ಪೋಸ್ಟ್​ ಡಿಲೀಟ್​ ಮಾಡಿದ್ದರು. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಈಗ ಕೆ.ಎಲ್​ ರಾಹುಲ್​​ ಭರ್ಜರಿ ಗುಡ್​ನ್ಯೂಸ್​ ಒಂದು ಕೊಟ್ಟಿದ್ದಾರೆ.

ಮೆಟಾಮ್ಯಾನ್​​ ಅನ್ನೋ ಲೈಫ್​ ಸ್ಟೈಲ್​​ ಕಂಪನಿಗೆ ಕೆ.ಎಲ್​ ರಾಹುಲ್​ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇಷ್ಟೇ ಅಲ್ಲ ಈ ಕಂಪನಿಯ ಹೂಡಿಕೆದಾರರು ಕೂಡ ಆಗಿದ್ದಾರೆ. ಇದೊಂದು ಪ್ರೀಮಿಯಮ್​​ ಪರ್ಫ್ಯೂಮ್​​​ ಕಂಪನಿ ಎಂದು ತಿಳಿದು ಬಂದಿದೆ.


">August 30, 2024

ಈ ಸಂಬಂಧ ಮಾತಾಡಿರೋ ಕೆ.ಎಲ್​ ರಾಹುಲ್​ ಅವರು, ಹೆಲ್ತ್​​, ಫ್ಯಾಷನ್​​, ಸ್ಪೋರ್ಟ್ಸ್​​ ಯಾವಾಗಲೂ ನನ್ನ ಇಂಟರೆಸ್ಟಿಂಗ್​​ ಫೀಲ್ಡ್​​. ಹಾಗಾಗಿ ಮೆಟಾಮ್ಯಾನ್​​ ಲೈಫ್​ ಸ್ಟೈಲ್​ ಕಂಪನಿ ಜೊತೆ ಕೈ ಜೋಡಿಸಿದ್ದೇನೆ. ಇದು ಹೊಸ ಆರಂಭ ಎಂದರು.

ಕೆ.ಎಲ್​ ರಾಹುಲ್​ ಇದಕ್ಕೂ ಮುನ್ನವೇ ಅನೌನ್ಸ್​ ಒಂದು ಮಾಡಲಿದ್ದೇನೆ ಎಂದು ಇನ್​ಸ್ಟಾದಲ್ಲಿ ಸ್ಟೋರಿ ಹಾಕಿದ್ರು. ಇದಾದ ನಂತರ ಇವರ ನಿವೃತ್ತಿ ಪೋಸ್ಟ್​ ಹಾಕಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಬಳಿಕ ಕೆ.ಎಲ್​ ರಾಹುಲ್​ ತನ್ನ ಪೋಸ್ಟ್​ ಅನ್ನೇ ಡಿಲೀಟ್​ ಮಾಡಿದ್ದು, ಈಗ ಹೊಸ ಕಂಪನಿ ಜೊತೆ ಕೈ ಜೋಡಿಸಿ ಗುಡ್​ನ್ಯೂಸ್​​ ಕೊಟ್ಟಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಬಿಗ್​ ಶಾಕ್​​ ಕೊಟ್ಟ KL ರಾಹುಲ್​​; ಕನ್ನಡಿಗನ ಇನ್​ಸ್ಟಾ ಪೋಸ್ಟ್​ ಹಿಂದಿನ ಅಸಲಿಯತ್ತೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment