ಹಸಿದ ಹುಲಿಯಂತೆ ಚಾನ್ಸ್ಗಾಗಿ ಕಾಯ್ತಿರೋ ಸರ್ಫರಾಜ್ ಖಾನ್
ಕಾನ್ಪುರದಲ್ಲಿ ಫ್ಲಾಪ್ ಆದ್ರೆ ಕಿವೀಸ್ ಸರಣಿಯಿಂದ ರಾಹುಲ್ ಡ್ರಾಪ್?
2ನೇ ಟೆಸ್ಟ್, ಕನ್ನಡಿಗ KL ರಾಹುಲ್ ಪಾಲಿಗೆ ಅಗ್ನಿಪರೀಕ್ಷೆಯ ಕಣ
ಇಂಡೋ-ಬಾಂಗ್ಲಾ 2ನೇ ಟೆಸ್ಟ್ ಫೈಟ್ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಕಾನ್ಪುರದಲ್ಲಿ ಕನ್ನಡಿಗನಿಗೆ ಕೊನೆ ಚಾನ್ಸ್ ಸಿಗೋದಂತೂ ಕನ್ಫರ್ಮ್. ಆದ್ರೆ, ಚಾನ್ಸ್ ಡು ಆರ್ ಡೈ. ಕಾನ್ಪುರದ ರಿಯಲ್ ಟೆಸ್ಟ್ನಲ್ಲಿ ಪಾಸಾದ್ರೆ ಓಕೆ. ಫೇಲಾದ್ರೆ, ಟೆಸ್ಟ್ ಕ್ರಿಕೆಟ್‌ನ ಭವಿಷ್ಯವೇ ಅತಂತ್ರಕ್ಕೆ ಸಿಲುಕಲಿದೆ. ರಾಹುಲ್ ಕರಿಯರ್ ಸಂಕಷ್ಟಕ್ಕೆ ಸಿಲುಕಿರೋದು ಯಾಕೆ.?
ಇಂಡೋ – ಬಾಂಗ್ಲಾ 2ನೇ ಟೆಸ್ಟ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಭೇಟೆಯಾಡಿ ದಿಗ್ವಿಜಯ ಸಾಧಿಸಿರೋ ಟೀಮ್ ಇಂಡಿಯಾ, 2ನೇ ಟೆಸ್ಟ್ನಲ್ಲೂ ಗೆದ್ದು ಬೀಗಲು ಸಜ್ಜಾಗಿದೆ. ಸರಣಿ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿರೋ ರೋಹಿತ್ ಪಡೆ, ಕಾನ್ಪುರದ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ಇಂದಿನಿಂದ ಸಮರಾಭ್ಯಾಸ ನಡೆಸಲಿದೆ.
ಇದನ್ನೂ ಓದಿ: ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!
ಕಾನ್ಪುರದಲ್ಲಿ ಕನ್ನಡಿಗನಿಗೆ ರಿಯಲ್ ‘ಟೆಸ್ಟ್’.!
ಚೆಪಾಕ್ ಟೆಸ್ಟ್ ಗೆದ್ದಿರೋ ಟೀಮ್ ಇಂಡಿಯಾ, ಕಾನ್ಪುರದಲ್ಲೂ ಗೆಲ್ಲೋ ಅಪಾರವಾದ ಆತ್ಮವಿಶ್ವಾಸದಲ್ಲಿದೆ. ಆದ್ರೆ, ತಂಡದ ಬ್ಯಾಟ್ಸ್ಮನ್, ಕನ್ನಡಿಗ ಕೆ.ಎಲ್ ರಾಹುಲ್ ಆತ್ಮವಿಶ್ವಾಸ ಕುಸಿದುಹೋಗಿದೆ. ವೈಫಲ್ಯದ ಸುಳಿಗೆ ಸಿಲುಕಿರೋ ರಾಹುಲ್ ಮುಂದೆ, ಸ್ಥಾನ ಉಳಿಸಿಕೊಳ್ಳೋ ಸವಾಲು ಎದುರಾಗಿದೆ. ಕಾನ್ಪುರದ ರಿಯಲ್ ಟೆಸ್ಟ್ ಗೆದ್ರೆ ಮಾತ್ರ ರಾಹುಲ್ ಸ್ಥಾನ ಸೇಫ್. ಇಲ್ಲಾಂದ್ರೆ, ತಂಡದ ಡೋರ್ ಕ್ಲೋಸ್ ಆಗೋ ಸಾಧ್ಯತೆ ದಟ್ಟವಾಗಿದೆ.
ಕೆ.ಎಲ್ ರಾಹುಲ್ ಬೆನ್ನುಬಿದ್ದಿದ್ಯಾ ದುರಾದೃಷ್ಟ.?
ಚೆಪಾಕ್ ಟೆಸ್ಟ್ ಪಂದ್ಯದಲ್ಲಿ ಪೈಪೋಟಿಯ ನಡುವೆ ರಾಹುಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ರು. ಆದ್ರೆ, ಸಿಕ್ಕ ಚಿನ್ನದಂತಾ ಅವಕಾಶವನ್ನ ಕೈ ಚೆಲ್ಲಿದ್ರು. ಮೊದಲ ಇನ್ನಿಂಗ್ಸ್ನಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಕಣಕ್ಕಿಳಿದ ರಾಹುಲ್, ತಾವೇ ಒತ್ತಡಕ್ಕೆ ಒಳಗಾದಂತೆ ಕಂಡ್ರು. ಆತ್ಮವಿಶ್ವಾಸವೇ ಇಲ್ಲದ ಆಟವಾಡಿದ ರಾಹುಲ್, 52 ಎಸೆತ ಎದುರಿಸಿ 16 ರನ್ಗಳಿಸಿ ನಿರ್ಗಮಿಸಿದ್ರು.
ಮೊದಲ ಇನ್ನಿಂಗ್ಸ್ನಲ್ಲಿ ಫ್ಲಾಪ್ ಆದ ರಾಹುಲ್, 2ನೇ ಇನ್ನಿಂಗ್ಸ್ನಲ್ಲಿ ಉತ್ತಮ ಪರ್ಫಾಮೆನ್ಸ್ ನೀಡೋ ಲೆಕ್ಕಾಚಾರದಲ್ಲಿದ್ರು. 4 ಬೌಂಡರಿಗಳನ್ನ ಬಾರಿಸಿ ಕಾನ್ಫಿಡೆಂಟ್ ಆರಂಭ ಪಡೆದುಕೊಂಡ್ರು. ಆದ್ರೆ, ದುರಾದೃಷ್ಟವೋ, ಏನೋ ರಾಹುಲ್ ರನ್ಗಳಿಸಲು ಶುರು ಮಾಡಿದ ಬೆನ್ನಲ್ಲೇ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಬಿಟ್ರು.
8 ವರ್ಷ, 24 ಇನ್ನಿಂಗ್ಸ್, ಭಾರತದಲ್ಲಿ ಟೆಸ್ಟ್ ಶತಕದ ಬರ
2016ರ ಡಿಸೆಂಬರ್ನಲ್ಲಿ ನಡೆದ ಚೆನ್ನೈ ಟೆಸ್ಟ್ನಲ್ಲಿ ಕನ್ನಡಿಗನ ಬ್ಯಾಟ್ ಸಖತ್ ಸೌಂಡ್ ಮಾಡಿತ್ತು. ಆಂಗ್ಲರ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ದ ರಾಹುಲ್, ಸೆಂಚುರಿ ಸಿಡಿಸಿ ಮಿಂಚಿದ್ರು. 199 ರನ್ಗಳ ಸಾಲಿಡ್ ಇನ್ನಿಂಗ್ಸ್ ಕಟ್ಟಿದ್ರು..
ಚೆನ್ನೈ ಟೆಸ್ಟ್ನ ಆ ಶತಕವೇ ಕೊನೆ. ಅಂದಿನಿಂದ ಈವರೆಗೆ ಭಾರತದಲ್ಲಿ ರಾಹುಲ್ ಟೆಸ್ಟ್ ಶತಕವನ್ನೇ ಸಿಡಿಸಿಲ್ಲ. 8 ವರ್ಷಗಳಿಂದ ತವರಿನಲ್ಲಿ ಶತಕದ ಬರವನ್ನ ಎದುರಿಸ್ತಾ ಇದ್ದಾರೆ. ಆ ಬಳಿಕ 23 ಇನ್ನಿಂಗ್ಸ್ಗಳನ್ನಾಡಿ 9 ಬಾರಿ ಹಾಫ್ ಸೆಂಚುರಿ ಗಡಿ ದಾಟಿದ್ದಾರೆ. ಆದ್ರೆ, ಶತಕ ಮರೀಚಿಕೆಯಾಗಿದೆ.
ಇದನ್ನೂ ಓದಿ: Tirupati laddu: ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪ ಬೇಡ ಎನ್ನಲು ಈ ಕೊಬ್ಬಿನ ಮಾಫಿಯಾ ಕಾರಣವಾಗಿತ್ತಾ..?
ಕೆ.ಎಲ್ ರಾಹುಲ್ ಟೆಸ್ಟ್ ಸ್ಥಾನಕ್ಕೂ ಬಂದಿದೆ ಕುತ್ತು.!
ಈಗಾಗಲೇ ಟಿ20 ತಂಡದಿಂದ ಕಡೆಗಣನೆಗೆ ಒಳಗಾಗಿರೋ ರಾಹುಲ್, ಟೆಸ್ಟ್ ಸ್ಥಾನವೂ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇನ್ಕನ್ಸಿಸ್ಟೆಂಟ್ ಆಟ ತೀವ್ರ ಟೀಕೆಗೆ ಗುರಿಯಾಗುವಂತೆ ಮಾಡಿದೆ. ಈ ಹಿಂದಿನ ಇಂಗ್ಲೆಂಡ್ ಸರಣಿಯಲ್ಲಿ ಇಂಪ್ರೆಸ್ಸಿವ್ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್ಗೆ ಸ್ಥಾನ ನೀಡುವಂತೆ ಬಲವಾದ ಕೂಗುಗಳು ಕೇಳಿಬರ್ತಿವೆ. ಹೀಗಾಗಿ ಕಾನ್ಪುರ ಟೆಸ್ಟ್ ರಾಹುಲ್ ಪಾಲಿಗೆ ಡು ಆರ್ ಡೈ ಫೈಟ್ ಆಗಿದೆ. ಈ ಟೆಸ್ಟ್ನಲ್ಲಿ ಫೇಲ್ ಆದ್ರೆ ಮಾತ್ರ ಮುಂಬರೋ ಕಿವೀಸ್ ಸರಣಿಯಲ್ಲಿ ಸ್ಥಾನ ಸಿಗೋದು ಅನುಮಾನವಾಗಲಿದೆ.
ಕಾನ್ಪುರ ಟೆಸ್ಟ್ ಪಂದ್ಯ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. ಈ ರಿಯಲ್ ಟೆಸ್ಟ್ನಲ್ಲಿ ಕನ್ನಡಿಗ ಗೆಲ್ಲಲಿ ಅನ್ನೊದು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ