/newsfirstlive-kannada/media/post_attachments/wp-content/uploads/2025/03/KL-RAHUL-4.jpg)
ಟೀಂ ಇಂಡಿಯಾ ಸ್ಟಾರ್ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸ್ಲಾಟ್​ ಬಗ್ಗೆ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಟೀಂ ಇಂಡಿಯಾದಲ್ಲಿ ಅವರಿಗೆ ಸರಿಯಾದ ಬ್ಯಾಟಿಂಗ್ ಕ್ರಮಾಂಕ ನೀಡಿಲ್ಲ. ಬೇಕಾದ ರೀತಿಯಲ್ಲಿ ಅವರನ್ನು ಬಳಸಿಕೊಳ್ತಿದ್ದಾರೆ ಎಂಬ ಮಾತುಗಳಿವೆ. ಅದರಂತೆ ಕಳೆದ ಐಸಿಸಿ ಚಾಂಪಿಯನ್ಸ್​​ ಟ್ರೋಫಿಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದು ತಂಡಕ್ಕೆ ಗೆಲುವು ತಂದುಕೊಟ್ಟರು.
ಇದೀಗ ಅವರು ತಮ್ಮ ಬ್ಯಾಟಿಂಗ್ ಸ್ಲಾಟ್ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ಕೆಎಲ್​ ರಾಹುಲ್, ನನಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಆರಾಮಾದಾಯಕ. ನಾನು ಮೊದಲಿನಿಂದಲೂ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಿದ್ದೇನೆ. ಅದರಲ್ಲಿ ಗೆಲುವು ಕೂಡ ಕಂಡಿದ್ದೇನೆ.
/newsfirstlive-kannada/media/post_attachments/wp-content/uploads/2025/03/KL-Rahul-1.jpg)
ನಾನು ಅಗ್ರ ಕ್ರಮಾಂಕದಲ್ಲಿ ಆಡಿ ಬೆಳೆದವನು. 11 ವಯಸ್ಸಿನಲ್ಲಿ ಮಂಗಳೂರಿನಲ್ಲಿ ಕ್ರಿಕೆಟ್ ಆಡುವ ದಿನದಿಂದ ಹಿಡಿದು ಭಾರತಕ್ಕೆ ಆಡುವವರೆಗೆ ಬಹುಪಾಲು ಪಂದ್ಯಗಳನ್ನು ಅಗ್ರಕ್ರಮಾಂಕದಲ್ಲೇ ಆಡಿದ್ದೇನೆ. ಇದು ನನಗೆ ಹೆಚ್ಚು ಆರಾಮಾದಾಯಕ ಎಂದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಆರ್ಭಟ ನೋಡಿ ಕ್ರಿಕೆಟ್ ವಿಶ್ಲೇಷಕರು ತಂಡದ ಮ್ಯಾನೇಜ್ಮೆಂಟ್ ನಿರ್ಧಾರ ಟೀಕಿಸಿದರು.
ಕೆಎಲ್ ರಾಹುಲ್.. ಆರಂಭಿಕನಾಗಿ ಹೋಗು ಅಂದರೂ ಯೆಸ್​ ಎನ್ನುತ್ತಾರೆ. ಬೇಡ ಏಳನೇ ಕ್ರಮಾಂಕದಲ್ಲಿ ಆಡು ಅಂದರೂ ಯೆಸ್​ ಎನ್ನುತ್ತಾರೆ. ನಿನಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಚಾನ್ಸ್ ಇಲ್ಲ ಅಂದರೂ ಯೆಸ್ ಎನ್ನುತ್ತ ಬೆಂಚ್​​ನಲ್ಲಿ ಕೂರುತ್ತಾರೆ. ​​ತಂಡ ಸಂಕಷ್ಟದಲ್ಲಿದ್ದಾಗ ಆಪತ್ತಿಗೆ ಆಗೋದು ಕೆಎಲ್ ರಾಹುಲ್ ಒಬ್ಬರೇ. ಅದೆಲ್ಲ ಗೊತ್ತಿದ್ದೂ ಅವರನ್ನು ತಂಡದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us