/newsfirstlive-kannada/media/post_attachments/wp-content/uploads/2024/09/KL-Rahul_Fifty.jpg)
ಕೆ.ಎಲ್.ರಾಹುಲ್ ಟೀಮ್ ಇಂಡಿಯಾದ ಕ್ಲಾಸ್ ಬ್ಯಾಟ್ಸ್ಮನ್. ತನ್ನ ಸಾಲಿಡ್ ಆಟದಿಂದ ಮೋಡಿ ಮಾಡಿದ್ದ ಈ ಕ್ಲಾಸ್ ಬ್ಯಾಟ್ಸ್ಮನ್ ಕರಿಯರ್ಗೆ ಬಹುತೇಕ ಎಂಡ್ ಕಾರ್ಡ್ ಬಿದ್ದಂತಿದೆ. ಪುಣೆ ಮ್ಯಾಚ್ನಲ್ಲಿ ಟೀಮ್ ಮ್ಯಾನೇಜ್ಮೆಂಟ್ ನೀಡಿರೋ ಸಂದೇಶ ಇಂಥದ್ದೊಂದು ಚರ್ಚೆಗೆ ನಾಂದಿ ಹಾಡಿದೆ.
ಕನ್ನಡಿಗ ಕೆ.ಎಲ್.ರಾಹುಲ್. ಪಕ್ಕಾ ಕ್ಲಾಸ್ ಬ್ಯಾಟ್ಸ್ಮನ್. ಕಂಡೀಷನ್ಸ್ ಯಾವುದೇ ಆಗಿರಲಿ, ಸರಾಗವಾಗಿ ರನ್ ಗಳಿಸುವ ಚಾಣಾಕ್ಷ ಅನ್ನೋದ್ರಲ್ಲಿ ಡೌಟೇ ಇಲ್ಲ. ಈತ ವಿದೇಶದಲ್ಲಿ ಸಿಡಿಸಿರುವ 7 ಶತಕಗಳೇ ಇದಕ್ಕೆ ಸಾಕ್ಷಿ. ಆದ್ರೀಗ ಇಂಥ ಕ್ಲಾಸ್ ಬ್ಯಾಟ್ಸ್ಮನ್ನ ಕರಿಯರ್ ಬಹುತೇಕ ಅಂತ್ಯಕ್ಕೆ ಬಂದು ನಿಂತಿದೆ.
ಇದನ್ನೂ ಓದಿ:ಕೆಎಲ್ ರಾಹುಲ್ ದಿಟ್ಟ ಹೋರಾಟ.. ತಂಡದ ಮರ್ಯಾದೆಗೆ ಕ್ರೀಸ್ ಕಚ್ಚಿನಿಂತ ಕನ್ನಡಿಗ..!
ಬೆಂಗಳೂರಿನ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದ ಕೆ.ಎಲ್.ರಾಹುಲ್, ಪುಣೆ ಟೆಸ್ಟ್ನಲ್ಲಿ ಬೆಂಚ್ ಕಾಯ್ತಿದ್ದಾರೆ. ಇದನ್ನು ಕೆ.ಎಲ್.ರಾಹುಲ್ ಟೆಸ್ಟ್ ವೃತ್ತಿ ಜೀವನಕ್ಕೆ ಕೊನೆ ಮೊಳೆ ಅಂತಾನೇ ವಿಶ್ಲೇಷಿಸಲಾಗ್ತಿದೆ.
ಇನ್ ಕನ್ಸಿಸ್ಟೆಂಟ್ ಬ್ಯಾಟಿಂಗ್
ಕೆ.ಎಲ್.ರಾಹುಲ್ ಬೆಸ್ಟ್ ಬ್ಯಾಟರ್ ಅನ್ನೋದ್ರಲ್ಲಿ ನೋ ಡೌಟ್. ಈ ವಿಶ್ವದ ದರ್ಜೆಯ ಬ್ಯಾಟರ್, ಇದುವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ್ದಿಲ್ಲ. ಇದೇ ಈಗ ರಾಹುಲ್ಗೆ ಮುಗ್ಗಲ ಮುಳ್ಳಾಗಿದೆ.
ಟೀಮ್ಗೆ ಅವಶ್ಯತೆ ಇದ್ದಾಗ ಆಡಲ್ಲ
ಒಂದ್ಕಡೆ ಕನ್ಸಿಸ್ಟೆನ್ಸಿ ಕಾಯ್ದುಕೊಳ್ಳದ ರಾಹುಲ್, ಮತ್ತೊಂದೆಡೆ ಕ್ರೂಶಿಯಲ್ ಮ್ಯಾಚ್ಗಳಲ್ಲೂ ತಂಡದ ಕೈಬಿಡ್ತಾರೆ. ಇದಕ್ಕೆ ಬೆಂಗಳೂರು ಟೆಸ್ಟ್ನ 2ನೇ ಇನ್ನಿಂಗ್ಸ್ ಬೆಸ್ಟ್ ಎಕ್ಸಾಂಪಲ್.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸೋಲಿಗೆ ಕಾರಣ ಯಾರು ಎಂದು ಹೇಳಿದ ರೋಹಿತ್ ಶರ್ಮಾ..!
ಸಿಕ್ಕ ಚಾನ್ಸ್ನಲ್ಲಿ ಕಳಪೆ ಪ್ರದರ್ಶನ
ಬಾಂಗ್ಲಾ ಸಿರೀಸ್ನಲ್ಲಿ ಬಹುಪಾಲು ವೈಫಲ್ಯ ಅನುಭವಿಸಿದ್ದ ಕೆ.ಎಲ್.ರಾಹುಲ್ಗೆ, ಬೆಂಗಳೂರು ಟೆಸ್ಟ್ ಇಂಪಾರ್ಟೆಂಟ್ ಅನ್ನೋದು ಗೊತ್ತಿತ್ತು. ಸರ್ಫರಾಜ್ ಸಿಕ್ಕ ಅವಕಾಶಗಳನ್ನ ಬಾಚಿಕೊಳ್ತಿದ್ದಾರೆ. ಬೆಂಗಳೂರು ಟೆಸ್ಟ್ ಡು ಆರ್ ಡೈ ಆಗಿತ್ತು. ತವರಿನ ಪಿಚ್ನಲ್ಲೇ ಸಿಕ್ಕ ಚಿನ್ನದಂತಹ ಅವಕಾಶ ಮಣ್ಣು ಪಾಲು ಮಾಡಿದರು.
ಕಾನ್ಫಿಡೆನ್ಸ್ ಇಲ್ಲ.. ರಿಸ್ಕ್ಗೆ ಹಿಂದೇಟು
ಕೆ.ಎಲ್.ರಾಹುಲ್ ಹಿನ್ನಡೆಗೆ ಕಾರಣವೇ ಅಳುಕು. ಪಾಸಿಟಿವ್ ಮೈಂಡ್ಸೆಟ್ನಲ್ಲಿ ಬ್ಯಾಟ್ ಬೀಸದ ಕೆ.ಎಲ್.ರಾಹುಲ್, ರಿಸ್ಕ್ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕ್ತಾರೆ. ಹೀಗೆ ಹೇಳೋದಕ್ಕೆ ಬೆಂಗಳೂರು ಟೆಸ್ಟ್ ಮಾತ್ರ ಕಾರಣವಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್ ಕೂಡ ಬೆಸ್ಟ್ ಎಕ್ಸಾಂಪಲ್.
ಯಂಗ್ಸ್ಟರ್ಸ್ ಪೈಪೋಟಿ
ಸತತ ವೈಫಲ್ಯ ಅನುಭವಿಸ್ತಿರುವ ರಾಹುಲ್ಗೆ, ಯುವ ಆಟಗಾರರ ಪೈಪೋಟಿಯೂ ಇದೆ. ಈಗಾಗಲೇ ಸರ್ಫರಾಜ್ ಖಾನ್, ರಾಹುಲ್ ಸ್ಥಾನವನ್ನು ಅರ್ದ ಕಬ್ಜಾ ಮಾಡಿದ್ದಾರೆ. ತಂಡದ ಹೊರಗೆ ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಅಭಿಮನ್ಯು ಈಶ್ವರನ್ರಂಥ ಸಾಲು ಸಾಲು ಆಟಗಾರರ ದಂಡೇ ಇದೆ.
ಈ ಕಾರಣಗಳು ರಾಹುಲ್ ಟೆಸ್ಟ್ ಕರಿಯರ್ ಖತಂ ಅನ್ನೋ ಸಂದೇಶವನ್ನೇ ನೀಡ್ತಿವೆ. ಅಷ್ಟೇ ಅಲ್ಲ. ಪ್ರತಿಷ್ಠಿತ ಆಸ್ಟ್ರೇಲಿಯಾ ಸರಣಿಗೂ ಆಯ್ಕೆ ಆಗಿದ್ದಾರೆ. ಆದರೆ ಬೌನ್ಸಿ ಟ್ರ್ಯಾಕ್ನ ಸಕ್ಸಸ್ ಕೆ.ಎಲ್.ರಾಹುಲ್, ಆಸ್ಟ್ರೇಲಿಯಾಗೆ ತೆರಳುವಂತೆ ಮಾಡಿದೆ. ಆ ಸರಣಿಯಲ್ಲೂ ಕೆ.ಎಲ್.ರಾಹುಲ್ ಬೌನ್ಸ್ ಬ್ಯಾಕ್ ಮಾಡದಿದ್ರೆ ತುಂಬಾ ಕಷ್ಟವಾಗಲಿದೆ.
ಇದನ್ನೂ ಓದಿ:IND vs NZ: ನ್ಯೂಜಿಲೆಂಡ್ ವಿರುದ್ಧ ರೋಹಿತ್ ಪಡೆಗೆ ಮತ್ತೆ ಹೀನಾಯ ಸೋಲು, ಟೀಂ ಇಂಡಿಯಾ ಎಡವಿದ್ದೆಲ್ಲಿ..?
ಒಟ್ಟಿನಲ್ಲಿ ಟಿ20 ಫಾರ್ಮೆಟ್ನಿಂದ ದೂರ ಉಳಿದಿರುವ ರಾಹುಲ್, ಕಳೆದ ಲಂಕಾ ಟೂರ್ನಲ್ಲಿ ಏಕದಿನ ತಂಡದಿಂದಲೂ ಡ್ರಾಪ್ ಆಗಿದ್ದರು. ಟೆಸ್ಟ್ ಕ್ರಿಕೆಟ್ನಲ್ಲೂ ಬೆಂಚ್ಗೆ ಸೀಮಿತವಾಗಿದ್ದಾರೆ. ಮುಂದೆ ರಾಹುಲ್ ಎಚ್ಚೆತ್ತುಕೊಳ್ಳದಿದ್ರೆ ಕ್ರಿಕೆಟ್ ಕರಿಯರ್ ಕಂಪ್ಲೀಟ್ ಕ್ಲೋಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್