ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ಗೆ ಮತ್ತೆ ಅವಮಾನ
ಸ್ಫೋಟಕ ಸುಳಿವು ಬಿಚ್ಚಿಟ್ಟ ಲಕ್ನೋ ತಂಡದ ಸೀನಿಯರ್!
ಕೆ.ಎಲ್ ರಾಹುಲ್ ಆರ್ಸಿಬಿ ತಂಡಕ್ಕೆ ಬರೋದು ಗ್ಯಾರಂಟಿ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಐಪಿಎಲ್ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ವರ್ಷದ ಕೊನೆಗೆ ಡಿಸೆಂಬರ್ನಲ್ಲಿ 2025ರ ಮೆಗಾ ಐಪಿಎಲ್ ಹರಾಜು ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು 4 ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡು ಉಳಿದ ಎಲ್ಲರನ್ನು ಐಪಿಎಲ್ ಹರಾಜಿಗೆ ಬಿಡಬೇಕಾಗುತ್ತದೆ. ಒಳ್ಳೆ ಆಟಗಾರರ ಖರೀದಿಗಾಗಿ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಕ್ಯಾಪ್ಟನ್ ಕೆ.ಎಲ್ ರಾಹುಲ್ಗೆ ಲಕ್ನೋ ತಂಡ ಬಿಗ್ ಶಾಕ್ ನೀಡಿದೆ.
ಇನ್ನು, ಈ ಬಗ್ಗೆ ಮಾತಾಡಿರೋ ಲಕ್ನೋ ತಂಡದ ಆಟಗಾರ ಅಮಿತ್ ಮಿಶ್ರಾ, ಕೆ.ಎಲ್ ರಾಹುಲ್ಗಿಂತ ಉತ್ತಮ ಕ್ಯಾಪ್ಟನ್ಗಾಗಿ ಲಕ್ನೋ ತಂಡ ಕಾಯುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಕೆ.ಎಲ್ ರಾಹುಲ್ ಲಕ್ನೋ ಟೀಮ್ ತೊರೆಯೋ ಸುಳಿವು ನೀಡಿದ್ದಾರೆ. ಈ ಬೆನ್ನಲ್ಲೇ ಲಕ್ನೋ ತಂಡ ತೊರೆದು ಕೆ.ಎಲ್ ರಾಹುಲ್ ಆರ್ಸಿಬಿ ಸೇರಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕೆ.ಎಲ್ ರಾಹುಲ್ ಅವರು ಆರ್ಸಿಬಿಗೆ ಬರೋದು ಪಕ್ಕಾ ಆಗಿದೆ ಎಂದು ಫ್ಯಾನ್ಸ್ ಟ್ರೆಂಡ್ ಮಾಡುತ್ತಿದ್ದಾರೆ. ಮುಂದಿನ ಐಪಿಎಲ್ ಮೆಗಾ ಆಕ್ಷನ್ನಲ್ಲಿ ರಾಹುಲ್ ಅವರನ್ನು ಆರ್ಸಿಬಿ ಖರೀದಿಸಲಿದೆ. ನಾವು ಈ ಸಲ ಕಪ್ ಗೆಲ್ಲಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
It’s almost certain that KL Rahul will leave LSG and enter the 2025 mega auction.
We are coming to RCB for our first IPL trophy!! 👊🏻💨 pic.twitter.com/BVckivpW8b
— ` (@krish_hu_yaar) July 16, 2024
ರಾಹುಲ್ಗೆ ಲಕ್ನೋ ತಂಡದಿಂದ ಅವಮಾನ!
ಮೂರು ತಿಂಗಳ ಹಿಂದೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2024ರ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋಲನ್ನಪ್ಪಿತ್ತು. ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್ ರೂಮ್ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್ ಕೆ.ಎಲ್ ರಾಹುಲ್ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ರು.
ಇದನ್ನೂ ಓದಿ: ಕ್ಯಾಪ್ಟನ್ ಕೆ.ಎಲ್ ರಾಹುಲ್ಗೆ ಬಿಗ್ ಶಾಕ್ ಕೊಟ್ಟ ಲಕ್ನೋ ತಂಡ.. ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್