/newsfirstlive-kannada/media/post_attachments/wp-content/uploads/2024/08/DHAWAN-KL-RAHUL.jpg)
ಶಿಖರ್ ಧವನ್.. ಟೀಮ್ ಇಂಡಿಯಾದ ಯಶಸ್ವಿ ಓಪನರ್​ಗಳಲ್ಲಿ ಒಬ್ಬರು. ಇದರಲ್ಲಿ ಡೌಟೇ ಇಲ್ಲ. ಅವರ 16 ವರ್ಷಗಳ ವೃತ್ತಿ ಜೀವನದ ನಡುವೆ ಏಳುಬೀಳುಗಳ ರೋಚಕ ಕಥೆ ಇದೆ. ಒಂದ್ಕಡೆ ವೃತ್ತಿ ಜೀವನ ಹಳ್ಳ ಹಿಡಿದ್ರೆ, ಮತ್ತೊಂದೆಡೆ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು.
ಕ್ರಿಕೆಟ್‌ನಲ್ಲಿ ಗಬ್ಬರ್ ಅಂತ ಕರೆಸಿಕೊಳ್ಳುತ್ತಿದ್ದ ಶಿಖರ್, ಟೀಮ್ ಇಂಡಿಯಾ ಕಂಡ ಬೆಸ್ಟ್​ ಓಪನರ್​ಗಳಲ್ಲಿ ಒಬ್ಬರು. ಈತ ಕ್ರೀಸ್​ನಲ್ಲಿದ್ದಷ್ಟು ಹೊತ್ತು ಬೌಲರ್​ಗಳಿಗೆ ನಡುಕ ತಪ್ಪಿದಿರಲಿಲ್ಲ. ಇಂಥ ಡೈನಾಮಿಕ್ ಬ್ಯಾಟರ್​​, ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಇನ್ನಿಲ್ಲದ ಹರ ಸಾಹಸವನ್ನೇ ಮಾಡಿದ್ದು ಸುಳ್ಳಲ್ಲ.
/newsfirstlive-kannada/media/post_attachments/wp-content/uploads/2024/08/DHAWAN-1.jpg)
2018ರಿಂದ ಅಧಃಪತನ
ಶಿಖರ್ ಧವನ್ 2011ರಲ್ಲೇ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ್ರು. ಧವನ್​​ರ ಅಸಲಿ ದರ್ಬಾರ್​ ಶುರುವಾಗಿದ್ದು 2013 ರಿಂದ. 2018ರ ತನಕ ಶಿಖರ್ ಧವನ್ ಮುಟ್ಟಿದೆಲ್ಲ ಚಿನ್ನವಾಗಿತ್ತು. ಯಶಸ್ಸಿನ ಶಿಖರ್​​​ದಲ್ಲಿ ಮುನ್ನುಗ್ಗುತ್ತಿದ್ದ ಧವನ್​​ರ ಡೌನ್​ಫಾಲ್ ಶುರುವಾಗಿದ್ದು 2018ರಲ್ಲಿ.
2018ರ ಇಂಗ್ಲೆಂಡ್ ಪ್ರವಾಸ.. ಈ ಪ್ರವಾಸ ಧವನ್ ಪಾಲಿಗೆ ಮುಳ್ಳಾಗಿತ್ತು. 5 ಪಂದ್ಯಗಳಿಂದ ಜಸ್ಟ್​ 162 ರನ್ ಗಳಿಸಲಷ್ಟೇ ಶಕ್ತವಾದ ಶಿಖರ್, ಟೆಸ್ಟ್​ ತಂಡದಿಂದಲೇ ಹೊರಬಿದ್ದರು. ಅಬ್ಬರಿಸಿದ್ದ ಕೆ.ಎಲ್.ರಾಹುಲ್, ಶಿಖರ್ ಸ್ಥಾನವನ್ನ ಕಬ್ಜಾ ಮಾಡಿದರು. ಶಿಖರ್ ಧವನ್​​ ಕ್ರಿಕೆಟ್​ ಕರಿಯರ್ ಸೂತ್ರ ಇಲ್ಲದ ಗಾಳಿಪಟವಾಯಿತು.
2019ರ ವಿಶ್ವಕಪ್​ನಲ್ಲಿ ಇಂಜುರಿ..!
ಟೆಸ್ಟ್​ನಲ್ಲಿ ಶಿಖರ್ ಸ್ಥಾನ ಕಳೆದುಕೊಂಡರೂ ಏಕದಿನ ತಂಡದಲ್ಲಿ ಶಿಖರ್​ ಸ್ಥಾನಕ್ಕೆ ಭಂಗ ಇರಲಿಲ್ಲ. 2019ರ ಏಕದಿನ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ಎದುರು ಇಂಜುರಿ ನಡುವೆಯೂ ಶತಕ ಸಿಡಿಸಿದ್ದ ಶಿಖರ್, ನಂತರ ಟೂರ್ನಿಯಿಂದಲೇ ಹೊರಬಿದ್ದರು. ಇದೇ ಶತಕವೇ ಶಿಖರ್ ವೃತ್ತಿ ಜೀವನದ ಕೊನೆ ಶತಕವಾಯ್ತು. ಕೆ.ಎಲ್.ರಾಹುಲ್​​ರ ಡಾಮಿನೇಷನ್​​​​​​​​​​ ನಡುವೆ ಶಿಖರ್ ಧವನ್ ಕಳೆದು ಹೋದ್ರು. ಕೆಎಲ್ ರಾಹುಲ್ ಟೀಂ ಇಂಡಿಯಾ ಎಂಟ್ರಿಯೇ ಧವನ್​ಗೆ ವಿಲನ್ ಆಯ್ತು ಎಂಬ ಚರ್ಚೆಯನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. 2020ರ ವೇಳೆಗೆ ಟಿ20ಯಲ್ಲಿ ಆಗೊಮ್ಮೆ ಈಗೊಮ್ಮೆ ಗೆಸ್ಟ್ ಅಪಿರಿಯನ್ಸ್ ಆ್ಯಂಡ್ ಸೆಕೆಂಡ್ ಸ್ಟ್ರಿಂಗ್ ಟೀಮ್​​ನಲ್ಲಿ ಕಾಣಿಸಿಕೊಳ್ತಿದ್ದ ಧವನ್​​ಗೆ 2021ರ ಲಂಕಾ ಪ್ರವಾಸದ ಬಳಿಕ ಟಿ20ಯಲ್ಲಿ ಚಾನ್ಸ್​ ಸಿಗಲೇ ಇಲ್ಲ.
ಇದನ್ನೂ ಓದಿ: ಶಿಖರ್ ಧವನ್​ಗೂ ಬಿಸಿಸಿಐ ಅನ್ಯಾಯ -ಗಬ್ಬರ್ ಸಿಂಗ್ ನಿವೃತ್ತಿ ಹಿಂದಿದೆ ಕೋಪ, ಆಕ್ರೋಶ
/newsfirstlive-kannada/media/post_attachments/wp-content/uploads/2024/08/DHAWAN.jpg)
ಏಕದಿನ ತಂಡದಲ್ಲೂ ಶಿಖರ್ ಧವನ್​ ಇದ್ದು ಇಲ್ಲದಂತಿದ್ದರು. 2022ರ ಡಿಸೆಂಬರ್​ನಲ್ಲಿ ಬಾಂಗ್ಲಾ ಎದುರು ವೈಫಲ್ಯ ಕಂಡಿದ್ದೇ ತಡ.. ಏಕದಿನ ತಂಡದ ಡೋರ್ ಕೂಡ ಕ್ಲೋಸ್ ಆಯ್ತು. ಈ ಹೊತ್ತಿನಲ್ಲೇ ಶಿಖರ್ ಬಾಳಲ್ಲಿ ಬಿರುಗಾಳಿ ಎದಿತ್ತು.
ಅಜಾತ ಶತ್ರುವಿನ ಬಾಳಲ್ಲಿ ಎದ್ದಿತ್ತು ಬಿರುಗಾಳಿ
ವೃತ್ತಿ ಜೀವನದಲ್ಲಿ ಹಿನ್ನಡೆ ಅನುಭವಿಸಿದ್ದ ಶಿಖರ್ ಧವನ್​​ಗೆ, ವೈಯಕ್ತಿಕ ಜೀವನವೂ ಅಡ್ಡದಾರಿ ಹಿಡಿದಿತ್ತು. ಬ್ರಿಟನ್ ಮೂಲದ ಆಯೇಷಾರನ್ನ ಪ್ರೀತಿಸಿ ಮದುವೆಯಾಗಿದ್ದರು. ಶಿಖರ್​​ಗೆ ದಾಂಪತ್ಯದ ಇನ್ನಿಂಗ್ಸ್​ ಸುಲಭವಾಗಿರಲಿಲ್ಲ. 2021ರಲ್ಲೇ ಪತ್ನಿ ಆಯೆಷಾ ಮುಖರ್ಜಿ, ಧವನ್ ವಿರುದ್ಧ ದೆಹಲಿಯ ಕೌಂಟುಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಯೇಷಾರ ಮಾನಸಿಕ ಕ್ರೌರ್ಯಕ್ಕೆ ಬೇಸತ್ತಿದ್ದ ಶಿಖರ್ ಧವನ್​, ವೃತ್ತಿ ಜೀವನದಲ್ಲಿ ವೈಫಲ್ಯದ ಹಾದಿ ಹಿಡಿದಿದ್ದರು. ಪರಿಣಾಮ 2023ರ ಏಷ್ಯನ್​ ಗೇಮ್ಸ್​ ತಂಡದಲ್ಲೂ ಸ್ಥಾನ ಪಡೆಯಲು ವಿಫಲರಾದರು. ಇದರೊಂದಿಗೆ ಟಿ20, ಏಕದಿನ ತಂಡದಿಂದಲೂ ಸಂಪೂರ್ಣ ಹೊರಬಿದ್ದ ಶಿಖರ್​​​​​​​​​​​​​​​ಗೆ 2023ರ ಅಕ್ಟೋಬರ್ 4ರಂದು ಡಿವೋರ್ಸ್ ಆದೇಶವೂ ಹೊರಬಿತ್ತು.
/newsfirstlive-kannada/media/post_attachments/wp-content/uploads/2024/08/Shikar-dhawan.jpg)
ಡಿವೋರ್ಸ್ ಬಳಿಕವೂ ತಪ್ಪಲಿಲ್ಲ ಮಾನಸಿಕ ಕಿರುಕುಳ
ಕಳೆದ ವರ್ಷ ಆಯೇಷಾ, ಶಿಖರ್ ಧವನ್ ಡಿವೋರ್ಸ್ ಪಡೆದ್ರು. ಇಲ್ಲೂ ಧವನ್​ಗೆ ನೆಮ್ಮದಿಯ ಜೀವನ ಇರಲಿಲ್ಲ. ಪ್ರೀತಿಯ ಪುತ್ರನ ನೋಡುವ ಮಾತನಾಡುವ ಭಾಗ್ಯವೂ ಶಿಖರ್​​ಗೆ ಸಿಕ್ಕಿರಲಿಲ್ಲ. ಇದಕ್ಕೆ ಕೋರ್ಟ್​ ಧವನ್​ಗೆ ನ್ಯಾಯ ಒದಗಿಸಿತ್ತು. ಇದೆಲ್ಲದರಿಂದ ನೊಂದಿದ್ದ ಶಿಖರ್ ಧವನ್, ಐಪಿಎಲ್​​ನಲ್ಲೂ ಸದ್ದು ಮಾಡಲಿಲ್ಲ. ಪರಿಣಾಮ ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡುವ ಅಸಾಧ್ಯವಾಯ್ತು. ಈ ಅವಧಿಯಲ್ಲಿ ಮಿಂಚಿದ ಯುವ ಆಟಗಾರರು ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡರು. ಶಿಖರ್ ಕಮ್​ಬ್ಯಾಕ್ ಕನಸು ಕಮರಿತ್ತು. ಇದೆಲ್ಲವನ್ನೇ ಅರಿತೇ ಶಿಖರ್, ಕ್ರಿಕೆಟ್ ಕರಿಯರ್​ಗೆ ಗುಡ್ ಬೈ ಹೇಳಿದ್ದಾರೆ. ಶಿಖರ್ ಟೀಮ್ ಇಂಡಿಯಾಗೆ ಗುಡ್ ಬೈ ಹೇಳಿರಬಹುದು. ಶಿಖರ್ ಧವನ್​ 22 ಯಾರ್ಡ್​ನಲ್ಲಿ ಮಾಡಿದ ಹೋರಾಟದ ಇನ್ನಿಂಗ್ಸ್​ಗಳು, ನೆನೆಪುಗಳೂ ಎಂದೆಂದಿಗೂ ಜೀವಂತ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us