newsfirstkannada.com

ಆಸ್ಪತ್ರೆಯಲ್ಲಿ ಚಾಕು ಇರಿತ.. 10 ಮಂದಿ ಸಾವು, 23 ಜನರು ಗಂಭೀರ ಗಾಯ

Share :

Published May 8, 2024 at 6:06am

  ಝೆನ್‌ಕ್ಸಿಯಾಂಗ್ ಕೌಂಟಿಯ ಚೆಂಗ್ನಾನ್​ ಆಸ್ಪತ್ರೆಯಲ್ಲಿ ನಟೆದ ಘಟನೆ

  ಗಂಭೀರವಾಗಿ ಗಾಯಗೊಂಡ 23ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

  ಈ ಘಟನೆ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೀಜಿಂಗ್: ವ್ಯಕ್ತಿಯೊಬ್ಬ ಒಟ್ಟು 10 ಮಂದಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರೋ ಘಟನೆ ಚೀನಾದ ಝೆನ್‌ಕ್ಸಿಯಾಂಗ್ ಕೌಂಟಿಯ ಚೆಂಗ್ನಾನ್​ ಆಸ್ಪತ್ರೆಯಲ್ಲಿ ನಡೆದಿದೆ.

ಏಕಾಏಕಿ ಆಸ್ಪತ್ರೆಗೆ ನುಗ್ಗಿದ ವ್ಯಕ್ತಿಯು 10 ಮಂದಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಈ ಘಟನೆಯಲ್ಲಿ 23ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿದ ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬ್ಯೂಟಿ ಕ್ವೀನ್ ಬರ್ಬರ ಹತ್ಯೆ.. ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಇನ್ನು, ಸದ್ಯ 10 ಮಂದಿಯನ್ನು ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಾಗೊಂಡವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಕೂಡ ಚೀನಾದ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಶಿಶುವಿಹಾರದಲ್ಲಿ ಆರು ಮಂದಿ ಕೊಲೆಯಾಗಿದ್ದರು. ಮತ್ತು ಒಬ್ಬರು ಗಾಯಗೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಯಲ್ಲಿ ಚಾಕು ಇರಿತ.. 10 ಮಂದಿ ಸಾವು, 23 ಜನರು ಗಂಭೀರ ಗಾಯ

https://newsfirstlive.com/wp-content/uploads/2024/05/death43.jpg

Load More